ಜೀಲ್ಲಾ ಸುದ್ದಿಗಳು
ಹರಿಹರ:-ಚೀನಾದಲ್ಲಿ ಜನ್ಮತಾಳಿ, ಇಡೀ ವಿಶ್ವಾದ್ಯಂತ ತನ್ನ ವಂಶಾಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಭಾರತ ಸರ್ಕಾರವು ಇಡೀ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ .
ಲಾಕ್ ಡೌನ್ ಘೋಷಣೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದೆ, ಜನ ಜೀವನ ಸಂಕಷ್ಟದಲ್ಲಿ ಸಿಲುಕಿದೆ .ಇಂತಹ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಮಾನವೀಯತೆ ಮುಖ್ಯವಾಗಿರುತ್ತದೆ. ‘ಕೋಟಿ ಮೌಲ್ಯಗಳಿಗಿಂತ ಮಾನವೀಯ ಮೌಲ್ಯ ದೊಡ್ಡದು ‘ಆದರೆ ಕರ್ನಾಟಕ ರಾಜ್ಯ ಸರ್ಕಾರವು ಇದುವರೆಗೂ ಹರಿಹರದ ಕ್ಷೇತ್ರದ ಜನರ ಸಂಕಷ್ಟಕ್ಕೆ ಪರಿಹಾರ ನೀಡದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಹಾಗಾದರೆ ರಾಜ್ಯ ಸರ್ಕಾರದ ಲಕ್ಷ ಲಕ್ಷ ಪರಿಹಾರದ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆ ಉದ್ಭವವಾಗುತ್ತದೆ .
ಕ್ಷೇತ್ರದ ಶಾಸಕರು ಹೇಳುವಂತೆ ರಾಜ್ಯ ಸರ್ಕಾರವು ಇದುವರೆಗೂ ಹರಿಹರ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ,ಕ್ಷೇತ್ರಕ್ಕೆ ಕರೊನಾ ಸಂಕಷ್ಟದ ಪರಿಹಾರವನ್ನು ಇದುವರೆಗೂ ಘೋಷಣೆ ಮಾಡಿಲ್ಲ .ತಾಲೂಕು ದಂಡಾಧಿಕಾರಿಗಳನ್ನು ಕೇಳಿದರೆ ಅವರಿಂದ ಸರಿಯಾದ ಉತ್ತರ ಸಿಗುತ್ತಿಲ್ಲ .ಇನ್ನು ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ನಯವಾದ ಉತ್ತರವನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆ.ಕ್ಷೇತ್ರದ ಕರೋನಾ ಸಂಕಷ್ಟದ ಪರಿಹಾರದ ವಿಚಾರವಾಗಿ ತಾಲೂಕು ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ .
ಇದುವರೆಗೂ ತಾಲ್ಲೂಕು ಕಚೇರಿ ವತಿಯಿಂದ ಕ್ಷೇತ್ರದ ಜನತೆಗೆ ನೀಡಿರುವ ಕಿಟ್ ಗಳು ಕೇವಲ 1100 ಕಿಟ್ ಗಳು 3ಲಕ್ಷದ ಮಾಸ್ಕ,1ಲಕ್ಷದ ಸ್ಯಾನಿಟೇಸರ್, ಮಾತ್ರ.ಅದು ಬಿಟ್ಟು ಇದುವರೆಗೂ ಒಂದು ಪೈಸೆಯ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿಲ್ಲ ,ಹಾಗೂ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿಲ್ಲ .
ಕ್ಷೇತ್ರದ ಶಾಸಕನಾಗಿ ನಾನು ಈಗಾಗಲೇ ನನ್ನ ಸ್ವಂತ ಖರ್ಚಿನಲ್ಲಿ ಸರಿ ಸುಮಾರು ಇಪ್ಪತ್ತು ಸಾವಿರ ಕಿಟ್ಗಳನ್ನು ತಯಾರಿಸಿ ಕ್ಷೇತ್ರದ ಜನತೆಗೆ ಹಂಚುತ್ತಿದ್ದೇನೆ .
ಕೂಡಲೇ ರಾಜ್ಯ ಸರ್ಕಾರವು ಮಲತಾಯಿ ಧೋರಣೆಯನ್ನು ಮಾಡದೇ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರವನ್ನು ಬಿಡುಗಡೆ ಮಾಡುವಂತೆ ಈ ಸಂದರ್ಭದಲ್ಲಿ ಆಗ್ರಹಿಸುತ್ತೇನೆ. ಸಂಕಷ್ಟದ ಸಮಯದಲ್ಲಿ ಮಾನವೀಯತೆಯ ಮುಖ್ಯ ,ಮಾನವೀಯತೆಯ ಸಂದರ್ಭದಲ್ಲಿ ಮಲತಾಯಿ ಧೋರಣೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು .
ಶಾಸಕರ ಈ ಮಾತಿನಿಂದ ರಾಜ್ಯ ಸರ್ಕಾರದ ಕರೋನಾ ಸಂಕಷ್ಟದ ಕೋಟಿ ಕೋಟಿ ಪರಿಹಾರದ ಹಣ ಎಲ್ಲಿ ಹೋಯಿತು ಎಂಬ ಅನುಮಾನ ಮೂಡುತ್ತದೆ .
ಇನ್ನು ಮುಂದಾದರೂ ರಾಜ್ಯ ಸರ್ಕಾರ ಹರಿಹರ ಕ್ಷೇತ್ರದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಲಿ ಎಂಬುದು ನಮ್ಮ ಪತ್ರಿಕೆಯ ಆಶಯವಾಗಿದೆ.
Be the first to comment