ಯಾರಿಗೆ ಬಂತು ,ಎಲ್ಲಿಗೆ ಬಂತು,533 ರ ಕರೊನಾ.

ವರದಿ:-ಪ್ರಕಾಶ ಮಂದಾರ ಹರಿಹರ

ಜೀಲ್ಲಾ ಸುದ್ದಿಗಳು

ದಾವಣಗೆರೆ:-ಜಿಲ್ಲೆಯಲ್ಲಿ ಮೊದಲ ಎರಡು ಕರೋನಾ ಪಾಜಿಟಿವ್ ಪ್ರಕರಣವನ್ನು ಯಶಸ್ವಿಯಾಗಿ ಕೊನೆಗಾಣಿಸಿ ಜಿಲ್ಲೆಯನ್ನು ಕರೋನ ಮುಕ್ತ ನಗರವನ್ನಾಗಿ ಮಾಡಿ ಹಸಿರು ವಲಯಕ್ಕೆ ಪ್ರವೇಶ ಪಡೆದ ಹದಿನೆಂಟು ತಾಸಿನ ಒಳಗೆ P 533 ರ ಸೋಂಕಿತ ವ್ಯಕ್ತಿಯಿಂದ ದಾವಣಗೆರೆ ಜಿಲ್ಲೆಯು ಬೆಣ್ಣೆಯಿಂದ ಜಾರಿ ಕರೋನಾ ಎಂಬ ತುಪ್ಪಕ್ಕೆ ಬಿತ್ತು .

ಇಡೀ ಜಿಲ್ಲೆಯ ಜನತೆಯ ನೆಮ್ಮದಿಯನ್ನು ಹಾಳು ಮಾಡಿತ್ತು,ಕೇಸರಿ ವಲಯವನ್ನು ದಾಟಿ ಕೆಂಪು ಒಳಕ್ಕೆ ಬಂದು ನಿಂತಿತ್ತು .

ಸದ್ಯ ದಾವಣಗೆರೆಯಲ್ಲಿ ಕರೊನಾ ಸುನಾಮಿ ಬಂದು ಅಪ್ಪಳಿಸಿದೆ ,ದಿನದಿಂದ ದಿನಕ್ಕೆ ಸೊಂಕಿತರ ಶಂಕೆ ಏರುತ್ತಲೇ ಇದೆ . ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ ,ನಿರ್ಬಂಧಿತ ಪ್ರದೇಶಗಳಲ್ಲಿರುವ ಜನರ ಗಂಟಲು ದ್ರವ ಮಾದರಿಯ ಸಂಗ್ರಹಕ್ಕೆ ಮುಂದಾಗಿದೆ ನಿನ್ನೆ ಮತ್ತೆ374 ಜನರ ಮಾದರಿ ಸಂಗ್ರಹ ಮಾಡಿ ಲ್ಯಾಬ್ ಗೆ ಪರೀಕ್ಷೆಗೆ ಕಳಿಸಿಕೊಡಲಾಗಿದೆ, ಈಗಾಗಲೇ ಕಳುಹಿಸಿರುವ1096 ಮಾದರಿಗಳ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ .

SARi(ಉಸಿರಾಟದ ಸಮಸ್ಯೆ )ಹಾಗೂILI ಕೇಸ್ ಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.ಇದುವರೆಗೆ 664 SARIಹಾಗೂILI ಕೇಸ್ ಗಳ ಮಾದರಿ ಸಂಗ್ರಹ ಮಾಡಿದ್ದಾರೆ. ಅದರಲ್ಲಿ 657 ನೆಗೆಟಿವ್,ಹಾಗು 7 ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ .ಇದುವರೆಗೂ ಜಿಲ್ಲೆಯಲ್ಲಿ ನಿನ್ನೆ ಬಂದ ಪಾಜಿಟಿವ್ ವರದಿಗಳು ಸೇರಿ ಸೋಂಕಿತರ ಸಂಖ್ಯೆ89 ಆಗಿದ್ದು ಇಬ್ಬರೂ ಗುಣಮುಖರಾಗಿದ್ದಾರೆ,4 ಸೋಂಕಿತರು ಸಾವನ್ನಪ್ಪಿದ್ದು ,83 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ .

ಇದರ ನಡುವೆ ಜಿಲ್ಲೆಯ ಜಾಲಿ ನಗರದ ನಿವಾಸಿಗಳು ಶೀಲ್ ಡೌನ್ ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ .ಸೀಲ್ ಡೌನ್ ಮಾಡಿರುವುದರಿಂದ ನಮಗೆ ಅಗತ್ಯ ವಸ್ತುಗಳ ಪಲ್ಲಕ್ಕಿಯಲ್ಲಿ ತೊಂದರೆಯಾಗುತ್ತಿದೆ ಕರೋನ ಬಂದು ಸಾಯುವುದಕ್ಕಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ ನಮಗೆ ತರಕಾರಿಯಲ್ಲಿ ಏನಾದರೂ ವಿಷ ಬೆರೆಸಿ ಕೊಟ್ಟು ಬಿಡಿ ಸಾಯುತ್ತೇವೆ ಎಂದು ತಮ್ಮ ನೋವನ್ನು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ಮುಂದೆ ತೋರ್ಪಡಿಸಿಕೊಂಡಿದ್ದಾರೆ ,ಪೊಲೀಸರು ಎಷ್ಟೇ ಮನವೊಲಿಸಿದರೂ ಜನರು ಮಾತ್ರ ತಮ್ಮ ಪಟ್ಟನ್ನು ಸಡಿಲಗೊಳಿಸಲಿಲ್ಲ ,ನಮಗೆ ಶೀಲ್ಡ್ ಡೌನ್ ತೆರವುಗೊಳಿಸಲೇಬೇಕು ಎಂದು ಆಗ್ರಹಿಸಿದರು.

ಹಸಿರು ವಲಯದಲ್ಲಿ ಪ್ರವೇಶ ಪಡೆದು ನೆಮ್ಮದಿಯಿಂದ ಜೀವನ ನಡೆಸಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ P533 ರ ಸೋಂಕಿತ ಮಹಿಳೆಯಿಂದ ಜಿಲ್ಲೆಯ ಜನತೆಯ ನೆಮ್ಮದಿಯೇ ಹಾಳಾಗಿ ಹೋಗಿದೆ, ಪ್ರತಿದಿನ ಪ್ರತಿಕ್ಷಣವೂ ಭಯದ ನೆರಳಿನಲ್ಲಿ ಬದುಕಬೇಕಾಗಿದೆ. ಆದರೂ ಜನತೆ ಮಾತ್ರ ಇನ್ನೂ ಬುದ್ಧಿ ಕಲಿತಿಲ್ಲ ಸಾಮಾಜಿಕ ಅಂತರವಿಲ್ಲದೆ ,ಮಾಸ್ಕ್ ಗಳ ಬಳಕೆ ಮಾಡದೆ ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆಯೇ ತಿರುಗಾಡುತ್ತಿದ್ದಾರೆ .ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನತೆ ಜಿಲ್ಲಾಡಳಿತದೊಂದಿಗೆ ಕೈ ಜೋಡಸಿ ಸಹಕರಿಸಬೇಕಾಗಿದೆ.

Be the first to comment

Leave a Reply

Your email address will not be published.


*