ನಾನು ಮಾತು ತಪ್ಪಲ್ಲ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಶಾಸಕ ರಾಜೂಗೌಡ

ವರದಿ: ರಾಘವೇಂದ್ರ ಮಾಸ್ತರ

ರಾಜ್ಯಸುದ್ದಿಗಳು 



 ಯಾದಗಿರಿ:

ಮಹಾರಾಷ್ಟ್ರ, ಪುಣೆ, ರತ್ನಗಿರಿ, ಸಾತಾರಾ, ಈಚಲಕರಂಜಿ, ಗೋವಾ ಸೇರಿದಂತೆ ಹೊರ ರಾಜ್ಯದಲ್ಲಿ ಇರುವ ಕ್ಷೇತ್ರದ ವಲಸೆ ಕಾರ್ಮಿಕರನ್ನು ಕರೆತರಲು 2-3 ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಜೋತೆ ಸೇರಿ ಮಾತುಕತೆ ನಡೆಸಿದ ನಂತರ ಜಿಲ್ಲಾಧಿಕಾರಿಗಳು ಒಪ್ಪಿಗೆಯನ್ನು ಸೂಚಿಸಿದ್ದರು.

ಒಮ್ಮಿಂದೊಮ್ಮೆಲೆ ಸರ್ಕಾರ ಉಚಿತ ಬಸ್ ಬಿಡಲು ನಿರಾಕರಿಸಿದ ಕಾರಣ ಶಾಸಕರಾದ ನರಸಿಂಹನಾಯಕ ರಾಜುಗೌಡರವರು ತಮ್ಮ ಸ್ವಂತ ಖರ್ಚಿನಲ್ಲಿ ಬಸ್ ನ ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ
ಬೆಳಗಾವಿಯಿಂದ ಒಟ್ಟು ಹತ್ತು ಬಸ್ ಗಳನ್ನು ಬಿಡಲಾಗಿದೆ ,ನಾಳೆ ದಿನಾಂಕ 14 -5-2020ರಂದು ನಿಪ್ಪಾಣಿ ಚೆಕ್ ಪೋಸ್ಟ್ ಗೆ ಬಂದು ನಿಲ್ಲುವಂತೆ ಸೂಚಿಸಿದ್ದಾರೆ, ನಾನು ತಮಗೆ ಕೊಟ್ಟ ಮಾತಿನಂತೆ ಸುರಪುರ, ಹುಣಸಗಿ ಮತ್ತು ನಮ್ಮ ಯಾದಗಿರಿ ಜಿಲ್ಲೆಯ ಜನರನ್ನು ಕರೆದುಕೊಂಡು ಬರಲು ಅಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.



ಎಲ್ಲಾ ವಲಸೆ ಕೂಲಿ ಕಾರ್ಮಿಕರನ್ನು ಮರಳಿ ಕರೆಸಿಕೊಳ್ಳಲು ನಾನು ಬದ್ಧನಾಗಿದ್ದು ಯಾರೂ ಆತಂಕ ಪಡುವುದು ಬೇಡ, ಎಲ್ಲರನ್ನೂ ಸುರಕ್ಷಿತವಾಗಿ ತಮ್ಮ ತಮ್ಮ ಗ್ರಾಮಗಳಿಗೆ ಕರೆತರುವ ಜವಾಬ್ದಾರಿ ನನ್ನ ಮೇಲಿದೆ ಎಂದು ವಿಡಿಯೋ ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.



 

Be the first to comment

Leave a Reply

Your email address will not be published.


*