ಜಿಲ್ಲಾಸುದ್ದಿಗಳು
ಮುದ್ದೇಬಿಹಾಳ:
ಕಷ್ಟ ಅಂತಾ ಮಾತು ನೆನಪಾದರೆ ತಕ್ಷಣ ನೆನಪಿಗೆ ಬರೋದು ಭಾರತ ಸ್ಕೌಟ್ಸ್ & ಗೈಡ್ಸ ಸಂಸ್ಥೆ ಯಾಕಂದರೆ ಈ ಹಿಂದೆ ಜಪಾನದಲ್ಲಿ ಭೂಕಂಪ ಆದಾಗ ಬೀದಿ ಬೀದಿ ಸುತ್ತಿ ಮಕ್ಕಳು ಹಣ ಸಂಗ್ರಹಿಸಿದರು ನಂತರ ಉತ್ತರಾಖಂಡದಲ್ಲಿ ನಡೆದ ಜಲಪ್ರಳಯ ಆದಾಗ ಕೂಡಾ ಸಂತ ಕನಕದಾಸ ಶಾಲೆಯ ಸ್ಕೌಟ್ಸ್ & ಗೈಡ್ಸ ಮಕ್ಕಳು ಹಣ ಸಂಗ್ರಹಿಸಿ ಕೊಟ್ಟಿದ್ದರು ಅದಕ್ಕೆ ಪ್ರಧಾನಮಂತ್ರಿಗಳು ಅಭಿನಂದನ ಪತ್ರ ಕೂಡಾ ಕಳುಹಿಸಿದ್ದನ್ನು ನೆನಪಿಸಿಕೊಳ್ಳಬಹುದು
ಇಂದು ಭಾರತ ಸ್ಕೌಟ್ಸ್ & ಗೈಡ್ಸ ಸ್ಥಳೀಯ ಸಂಸ್ಥೆ ಮುದ್ದೇಬಿಹಾಳ ತಾಲ್ಲೂಕು ಘಟಕದಿಂದ ಕರೋನಾದಿಂದ ಕಂಗೆಟ್ಟ ಕರ್ನಾಟಕಕ್ಕೆ ಅಲ್ಪ ಕಾಣಿಕೆಯಾಗಿ 10 ಸಾವಿರ ರೂಪಾಯಿಗಳ ದೇಣಿಗೆಯನ್ನು ನೀಡಿದೆ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಂತಹ ಸಮಯದಲ್ಲಿ ನೆರವಿನ ಹಸ್ಥ ಬಹಾಳ ಮುಖ್ಯ ಆದ್ದರಿಂದ ಈ ಸಂಸ್ಥೆಯ ಉಪಾಧ್ಯಕ್ಷರಾದ ಡಿ ಬಿ ವಡವಡಗಿ ಚೇರಮನ್ ಪ್ರೋ ಎಸ್ ಎಸ್ ಹೂಗಾರ ,ಕಾರ್ಯದರ್ಶಿ ಜಿ ಹೆಚ್ ಚವ್ಹಾಣ,ಖಂಜಾಂಚಿ ಗೋಪಾಲ ಎನ್ ಹೂಗಾರ ,ಸಹ ಕಾರ್ಯದರ್ಶಿ ಎಲ್ ಕೆ ನದಾಪ್ , ಮತ್ತಿತರರು ಪಾಲ್ಗೊಂಡು ಮಾನ್ಯ ತಹಶಿಲ್ದಾರರಾದ ಮಳಗಿ ಅವರಿಗೆ ಚೆಕ್ ಹಸ್ತಾಂತರ ಮಾಡಲಾಯಿತು.
ಅಷ್ಟೇ ಅಲ್ಲದೆ ಕೊರೊನಾ ವಾರಿಯರ್ಸ್ ಆಗಿ ಸ್ಕೌಟ್ ಮತ್ತು ಗೈಡ್ಸ್ ಸ್ವಯಂ ಸೇವಕರು ತಾಲೂಕಾ ಆಡಳಿತದ ನೆರವಿಗೆ ಸಿದ್ದರಿದ್ದು, ಅಗತ್ಯ ಬಿದ್ದಲ್ಲಿ ನಮ್ಮನ್ನು ಬಳಸಿಕೊಳ್ಳಲು ಕೋರಲಾಯಿತು ಅಷ್ಟೇ ಅಲ್ಲದೆ ಮುಂದೆ ನಡೆಯುವ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮಾಸ್ಕ ಒದಗಿಸುವ ಯೋಜನೆ ಕೂಡಾ ಹಾಕಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.
Be the first to comment