ಜಿಲ್ಲಾಸುದ್ದಿಗಳು
ಹುನಗುಂದ:
ಕೊರೊನಾ ವೈರಸ್ ನ ಭಯದಲ್ಲಿ ಜೀವನ ಸಾಗಿಸುವುದು ಒಂದೆಡೆಯಾದರೆ ಮತ್ತೊಂದೆಡೆ ದಿನ ನಿತ್ಯ ಹನಿ ನೀರಿಗಾಗಿ ಕೈಯಲ್ಲಿ ಕೊಡಗಳನ್ನು ಹಿಡಿದು ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪೂರ ಹಾಗೂ ಯರನಾಯಕನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.ಬೆಳಿಗ್ಗೆ ಎದ್ದ ತಕ್ಷಣ ಮನೆಗೆಲಸವನ್ನು ಮಾಡುವುದನ್ನು ಬಿಟ್ಟು ಮಹಿಳೆಯರು ಮಕ್ಕಳು ಕುಡಿಯುವ ನೀರನ್ನು ತರುವುದೇ ಒಂದು ಸವಾಲಾಗಿದೆ.ಒಂದೆಡೆ ಸುಡು ಸುಡು ಬಿಸಿಲಿನ ತಾಪ,ಮತ್ತೊಂದೆಡೆ ಕೊರೊನಾ ಮಹಾ ಮಾರಿಯಿಂದ ಲಾಕ್ ಡೌನ್ ದಿಂದ ಯಾರು ಹೊರಗಡೆ ಬರದೆ ಮನೆಯಲ್ಲಿಯೇ ಇರಿ ಎಂದು ಸರ್ಕಾರ ಹೇಳುತ್ತಿದೆ.ಆದರೆ ನಮ್ಮ ಕುಡಿಯುವ ನೀರಿನ ದಾಹ ತೀರೋದು ಯಾವಾಗ ಎಂದು ಗ್ರಾಮಸ್ಥರ ಅಳಲು.
ಕೈ ಕೊಟ್ಟ ಕೊಳವೆ ಭಾವಿ:-
ಕಡಿವಾಲ ಕಲ್ಲಾಪೂರ ಹಾಗೂ ಯರನಾಯನಾಳ ಗ್ರಾಮಗಳ ನಡುವೆ ಎರಡು ಕೊಳವೆ ಭಾವಿಯನ್ನು ಕೊರೆಸಲಾಗಿತ್ತು ಅದರಲ್ಲಿ ಒಂದು ಕೊಳವೆ ಭಾವಿಯ ಯಂತ್ರ ಕುಸಿದು ಬಿದ್ದಿದ್ದು ,ಇನ್ನೊಂದು ಕೊಳವೆ ಭಾವಿ ಇದ್ದು ಈ ಒಂದು ಕೊಳವೆ ಭಾವಿಯಿಂದ ಕಡಿವಾಲ ಕಲ್ಲಾಪೂರ ಹಾಗೂ ಯರನಾಯಕನಾಳ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.ಆದರೆ ಈ ಕೊಳವೆ ಭಾವಿಯಿಂದ ಮನೆ ಮನೆಗೆ ಪೈಪ್ ಲೈನ್ ಮುಖಾಂತರ ನೀರನ್ನು ಪೂರೈಸಲಾಗುತ್ತದೆ.ಆದರೆ ಪೈಪ್ ಲೈನ್ ಜಾಮ್ ಆಗಿದ್ದರಿಂದ ಪೈಪ್ ಲೈನ್ ದುರಸ್ಥಿ ಮಾಡುವ ಸಲುವಾಗಿ ರಸ್ತೆಯನ್ನು ಅಗೆದು ಒಂದು ವಾರ ಕಳೆದರು ಕೂಡಾ ಪೈಪನ್ನು ಮರಳಿ ಜೋಡಣೆ ಮಾಡದೆ ಹಾಗೆ ಬಿಟ್ಟಿದ್ದರಿಂದ ಮನೆಗಳಿಗೆ ನೀರು ಪೂರೈಕೆ ಯಾಗದಿರುವುದರಿಂದ ಮಹಿಳೆಯರು ,ಮಕ್ಕಳು ಕೊಡಗಳನ್ನು ಒತ್ತು ಗಾಡಿ ಬಂಡಿಗಳಲ್ಲಿ ಇಟ್ಟುಕೊಂಡು ದುರಸ್ತಿ ಗಾಗಿ ರಸ್ತೆಯ ಮದ್ಯೆ ಅಗೆದಿರುವ ಗುಂಡಿಯಲ್ಲಿ ಜೋಡನೆ ಮಾಡದೆ ಹಾಗೆ ಬಿಟ್ಟಿರುವ ಪೈಪ್ ಮುಖಾಂತರ ನೀರನ್ನು ತುಂಬಿಕೊಂಡು ಹೋಗುವಂತಹ ಪರಿಸ್ಥಿತಿ ಇದೆ.
ಆದಷ್ಟು ಬೇಗ ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರಾದ ಹನಮಂತ ಕಾಗಿ,ರಾಮಣ್ಣ ಬಡಕ್ಕನವರ,ಬಸಪ್ಪ ಮೂಲಿಮನಿ,ಯಲ್ಲಪ್ಪ ತುರಮರಿ,ರಮೇಶ ಹೂವಿನಳ್ಳಿ,ಯಮನಪ್ಪ ಬಡಕ್ಕನವರ ಆಗ್ರಹಿಸಿದ್ದಾರೆ.
Be the first to comment