ಕೋವಿಡ್ ಮುಕ್ತ ಗ್ರಾಮವಾದ ಮುಗಳಖೋಡ.

ವರದಿ:-ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ:- ಮುಧೋಳ ತಾಲೂಕಿನ ಮುಗಳಖೋಡ ಗ್ರಾಮವನ್ನು ಕೋವಿಡ್ ಮುಕ್ತ ಗ್ರಾಮವೆಂದು ಘೋಷಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಯಾವುದೇ ಪ್ರದೇಶದಲ್ಲಿ ಮೊದಲು ಸೋಂಕಿತರು ಕಂಡು ಬಂದ 28 ದಿನಗಳ ಬಳಿಕ ಹೊಸ ಸೋಂಕಿತರು ಕಂಡು ಬರದೇ ಇದ್ದಲ್ಲಿ ಅದನ್ನು ಸೋಂಕು ಮುಕ್ತ ಎಂದು
ಘೋಷಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಮುಗಳಖೋಡ ಗ್ರಾಮದಲ್ಲಿ ಏಪ್ರೀಲ್ 12 ರಂದು ಪಿ-240 ಓರ್ವ ವ್ಯಕ್ತಿಗೆ ಕೋವಿಡ್ ಸೋಂಕು ದೃಡಪಟ್ಟಿತ್ತು. ಸೋಂಕು ಕಂಡು ಬಂದ 28 ದಿನಗಳ ಬಳಿಕ ಯಾವುದೇ ಸೋಂಕಿತರು ಕಂಡುಬಂದಿರುವದಿಲ್ಲ. ನಂತರ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರೆಲ್ಲರ ಹೋಮ್ ಕ್ವಾರಂಟೈನ್ ಪೂರ್ಣಗೊಂಡಿರುವದರಿಂದ ಮುಗಳಖೋಡ ಗ್ರಾಮವನ್ನು ಕೋವಿಡ್ ಮುಕ್ತ ಗ್ರಾಮವೆಂದು ಘೋಷಿಸಿ ಕಂಟೈನ್‍ಮೆಂಟ್ ಝೋನನ್ನು ತೆರವುಗೊಳಿಸಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*