ವಿದ್ಯಾರ್ಥಿಗಳ ಶೈಕ್ಷಣಿ ಸಾಲ ಮನ್ನಾ ಮಾಡಿ: ಸದ್ದಾಂ ಕುಂಟೋಜಿ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು



ಮುದ್ದೇಬಿಹಾಳ:
ಜಗತ್ತಿನಾದ್ಯಂತ  ಹರಡುತ್ತಿರುವ ಕೋವಿಡ್-19 ನ ಹಾವಳಿ ಹೆಚ್ಚಾಗುತ್ತಿದ್ದು,  ಎಲ್ಲ ಕ್ಷೇತ್ರಗಳು ಮಕಾಡೆ ಮಲಗಿವೆ. ಇದರಲ್ಲಿ  ಪದವಿ ಪಡೆದು ಹೊರಬರುತ್ತಿರುವ ಯುವಕರ ಸಂಖ್ಯೆ ಹೆಚ್ಚಿದ್ದು, ಬೇಡಿಕೆಗೆ ತಕ್ಕಂತೆ ಕೆಲಸದ ಕೊರತೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಶೈಕ್ಷಣಿಕ ಸಾಲವನ್ನ ಮನ್ನಾ ಮಾಡುವ ಮೂಲಕ ಸರ್ಕಾರ ಯುವ ವಿದ್ಯಾರ್ಥಿಗಳ ಬೆನ್ನಿಗೆ ನಿಲ್ಲಬೇಕೆಂದು ಸದ್ದಾಂ ಕುಂಟೋಜಿ ಆಗ್ರಹಿಸಿದ್ದಾರೆ.



 
ನಮ್ಮ ರಾಜ್ಯದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲವನ್ನು ಪಡೆದಿರುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ  ಕೊನೆಯ ಸೆಮಿಸ್ಟರ್ ಕಲಿಯುತ್ತಿರುವ  ವಿದ್ಯಾರ್ಥಿಗಳಿಗೆ   ಹಾಗು ಹೋದ ವರ್ಷ  ವಿದ್ಯಾಭ್ಯಾಸವನ್ನು ಮುಗಿಸಿ ಪದವಿ, ಸ್ನಾತಕೋತ್ತರ ಪದವಿ, ಪಡೆದುಕೊಂಡು ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯೋಗ ನಿಯೋಜನೆ ಆಗುವ ಪರಿಸ್ಥಿತಿ ತುಂಬ ಕಡಿಮೆಯಾಗಿದೆ. ಕೊರೊನದಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವುದು ತುಂಬಾ ಕಷ್ಟ  ಇಂತ ಸಮಯದಲ್ಲಿ  ಸರಕಾರ ವಿದ್ಯಾರ್ಥಿಗಳ ಒಂದು ವರ್ಷದ ಸಲ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ



 

Be the first to comment

Leave a Reply

Your email address will not be published.


*