ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಉತ್ತರ ಕನ್ನಡ ಭಾಗದ ಮಂಗಳೂರಿನ ಹೊನ್ನಾವರ ಮೂಲದ,ಮಹಿಳಾ ಉಪಸಂಪಾದಕರು ಹಾಗೂ ಸಾಹಿತಿಗಳಾದ ಸೀತಾಲಕ್ಷ್ಮೀರವರು (45)ನಿಧನರಾಗಿದ್ದಾರೆ,ಅವರ ನಿಧನಕ್ಕೆ ಕನಾ೯ಟಕ ರಾಜ್ಯಪತ್ರಕತ೯ರ ಸಂಘದ ಕೂಡ್ಲಿಗಿ ಪತ್ರಕತ೯ರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಸೀತಾಲಕ್ಷ್ಮೀ ಕಕಿ೯ರವರು ಮಂಗಳೂರಿನ ವಿಜಯಕನಾ೯ಟಕ ವರದಿಗಾರರು ಹಾಗೂ ಉಪಸಂಪಾದಕಿಯಾಗಿ ಸೇವೆಸಲ್ಲಿಸಿದ್ದಾರೆ.ಸುಮಾರು 15ವಷ೯ಗಳ ಕಾಲ ನಿರಂತರ ಪತ್ರಿಕಾರಂಗದಲ್ಲಿ ಸೇವೆಸಲ್ಲಿಸಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡಿದ್ದಾರೆ ಸಾಹಿತಿಗಳಾಗಿ,ಅನೇಕ ಕೃತಿಗಳನ್ನು ರಚಿಸಿ ಹೊರ ತಂದಿದ್ದರು.ಅವರು ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರೆಂದು ತಿಳಿದುಬಂದಿದೆ,ಅವರ ನಿಧನದಿಂದಾಗಿ ಸಮಾಜ ಉತ್ತಮ ಮಹಿಳಾ ಪತ್ರಕತೆ೯ ಹಾಗೂ ಮಹಿಳಾ ಸಾಹಿತಿಯೋ೯ರನ್ನು ಕಳೆದುಕೊಂಡಿದೆ.ಅವರ ಅಗಲಿಕೆಗೆ ಕೂಡ್ಲಿಗಿಯ ಹಿರಿಯ ಪತ್ರಕತ೯ ಬೆಳ್ಳಗಟ್ಟೆ ಕೃಷ್ಣಪ್ಪನವರ ನೇತೃತ್ವದಲ್ಲಿ, ಕನಾ೯ಟಕ ರಾಜ್ಯ ಪತ್ರಕತ೯ ಸಂಘದ ಪದಾಧಿಕಾರಿಗಳು ಸದಸ್ಯರನ್ನೊಳಗೊಂಡಂತೆ ಸಂತಾಪ ಸೂಚಕ ಸಭೆ ನಡೆಸಲಾಯಿತು.
Be the first to comment