ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಯಾದಗಿರಿ
ಸುರಪುರ ನಗರದಲ್ಲಿ ಎರಡು ಕೋವಿಡ್-19 ಸಕಾರಾತ್ಮಕ ಪ್ರಕರಣಗಳು ಕಂಡುಬಂದಿರುವ ಪ್ರಯುಕ್ತ, 100 ಮೀಟರ್ ವ್ಯಾಪ್ತಿಯಲ್ಲಿನ ವಾರ್ಡ್ ಸಂಖ್ಯೆ 10ರ ಆಸರ್ ಮೊಹಲ್ಲಾವನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿರುತ್ತದೆ ಹಾಗೂ ಕಂಟೇನ್ಮೆಂಟ್ ಝೋನ್ ಹೊರಗಿನ ಸುತ್ತಮುತ್ತಲಿನ 5 ಕಿ.ಮೀ ಭೌಗೋಳಿಕ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿ-867 ಮತ್ತು ಪಿ-868 ಪೀಡಿತ ವ್ಯಕ್ತಿಗಳಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು ಎನ್ನಲಾದ 2 ಜನರನ್ನು ಗುರುತಿಸಲಾಗಿರುತ್ತದೆ. ಇವರನ್ನು ನೇರವಾಗಿ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ನಲ್ಲಿ ಇರಿಸಿರುವುದಿಂದ ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿರುವುದಿಲ್ಲ ಹಾಗೂ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Be the first to comment