ಮುದ್ದೇಬಿಹಾಳ:
ಗೋವಾದಿಂದ ಬಂದಂತಹ ಎಲ್ಲ ಕೂಲಿ ಕಾರ್ಮಿಕರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು ಪ್ರತಿಯೊಬ್ಬರ ಮೇಲೂ ನಿಗಾ ಇಡುವ ಕೆಲಸ ಆಯಾ ಪ್ರದೇಶಕ್ಕೆ ಸಂಬಂಸಿದ ಆರೋಗ್ಯ ಹಾಗೂ ಆಶಾ ಸಿಬ್ಬಂದಿಗಳು ಮಾಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಿಂದ ಗೋವಾ ರಾಜ್ಯಕ್ಕೆ ವಲಸೆ ಹೋದ ಕೂಲಿ ಕಾರ್ಮಿಕರನ್ನು ಮರಳಿ ಕರೆತಂದು ಅವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿ ಕೊರೊನಾ ಹಾವಲಿ ಕಮ್ಮಿ ಇದೆ. ಆದರೂ ಹೊರ ರಾಜ್ಯದಿಂದಲೇ ಕೊರೊನಾ ವೈಸರ್ ಹೆಚ್ಚಾಗುವ ಸಾಧ್ಯತೆಗಳಿದ್ದ ಕಾರಣ ಗೋವಾದಿಂದ ಬಂದಿರುವ ಪ್ರತಿಯೊಬ್ಬ ಕಾರ್ಮಿಕರೂ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ವೇಳೆಯಲ್ಲಿ ಸ್ಪಂಸಬೇಕು. ಇಲಾಖೆ ಸಿಬ್ಬಂದಿಗಳಲ್ಲಿ ಅಸಭ್ಯ ವರ್ತನೆ ತೋರಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಹೇಳಿದರು.
೪೯೫ ಜನರಿಗೆ ಆಹಾಧಾನ್ಯ ಒದಗಿಸಿದ ಶಾಸಕ ನಡಹಳ್ಳಿ:
ಗೋವಾದಿಂದ ಬಂದ ಸುಮಾರು ೪೯೫ ಜನರು ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿದ್ದು ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುತ್ತಿದ್ದಂತೆ ಪ್ರತಿಯೊಬ್ಬರಿಗೂ ೫ಕೆಜಿ ಗೋದಿ ಹಿಟ್ಟು, ೧ಕೆಜಿ ರವೆ, ೧ಕೆಜಿ ಎಣ್ಣೆ, ೧ಕೆಜಿ ತೊಗರಿ ಬೆಳೆ, ೧ ಕೆಜಿ ಸಕ್ಕರೆ, ೨ಕೆಜಿ ಈರುಳ್ಳಿ, ೨ಕೆಜಿ ಆಲೂಗಡ್ಡೆ, ಚಹಾಪುಡಿ, ಜೀರಗಿ, ಸಾಸವೆ, ಮಸಾಲಾ ಖಾರ, ಅರಿಶಿನಪುಡಿ ಪ್ಯಾಕೇಟ್‌ಗಳ ಒಳಗೊಂಡ ಆಹಾರ ಕಿಟ್‌ಗಳನ್ನು ವಿತರಿಸಿದರು.
ಹರಿದು ಬಂದ ಅಂಬಿನಂದನಾ ಅಲೆ:
ಗೋವಾದಲ್ಲಿ ಲಾಕ್‌ಡೌನ್ ಆಗಿದ್ದ ಕೂಲಿ ಕಾರ್ಮಿಕರನ್ನು ಸ್ವತ ತಾವೇ ಬೆಳಗವಾವಿ ಗಡಿಭಾಗಕ್ಕೆ ಹೋಗಿ ಕರೆದುಕೊಂಡು ಬಂದು ಅವರಿಗೆ ಆಹಾಧಾನ್ಯಗಳನ್ನು ನೀಡುತ್ತಿದ್ದನ್ನು ಕಂಡ ಕೂಲಿ ಕಾರ್ಮಿಕರು ಬಸ್ ನಿಲ್ದಾಣದಿಂದಲೇ ಶಾಸಕ ನಡಹಳ್ಳಿ ಅವರಿಗೆ ಜೈಕಾರ ಹಾಕಿದ್ದು ಸ್ಥಳದಲ್ಲಿದ್ದ ಜನರಿಂದ ಅಭಿನಂದನಾ ಅಲೆ ಹರಿದು ಬಂದಿತು.
ಬರಲಿದ್ದಾರೆ ಇನ್ನೂ ೩೦೦ ಜನರ:
ಮುದ್ದೇಬಿಹಾಳ ಮತಕ್ಷೇತ್ರದಿಂದ ಗೂಳೆ ಹೋಗಿದ್ದವರಲ್ಲಿ ಈಗಾಗಲೇ ೪೯೫ ಜನರ ಮರಳಿ ಬಂದಿದ್ದು ಮಾಹಿತಿ ಪ್ರಕಾರ ಇನ್ನೂ ೩೦೦ ಜನರು ಗೋವಾದಲ್ಲಿ ಇದ್ದಾರೆ. ಇದರ ಬಗ್ಗೆ ಈಗಾಗಲೇ ಗೋವಾದ ಡಿಸಿಯೊಬ್ಬರಿಗೆ ಮಾತನಾಡಿದ್ದು ಇನ್ನೂ ಎರಡು ದಿನಗಳಲ್ಲಿ ಉಳಿದವರೂ ಬರಲಿದ್ದು ಅವರಿಗೆ ಬಸ್ಸಿನ ಸೌಲಭ್ಯ ಸೇರಿದಂತೆ ಉಪಹಾರದ ಸೌಕರ್ಯವನ್ನೂ ಒದಗಿಸಲಾಗುತ್ತದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ಸಾರಿಗೆ ಮತ್ತು ಜಿಲ್ಲಾ ಸಚಿವರಿಗೆ ಅಭಿನಂದಿಸಿದ ಶಾಸಕ ನಡಹಳ್ಳಿ:
ಗೋವಾ ರಾಜ್ಯದಲ್ಲಿ ಲಾಕ್ ಆಗಿದ್ದ ಮುದ್ದೇಬಿಹಾಳ ಮತಕ್ಷೇತ್ರದ ಕೂಲಿ ಕಾರ್ಮಿಕರನ್ನು ಮರಳಿ ಕರೆತರಲು ಸಾರಿಗೆ ಇಲಾಖೆಯಿಂದ ಬಸ್ ಬಿಡಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಳ್ಳೆ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ನನ್ನ ಕ್ಷೇತ್ರಕ್ಕೆ ೧೪ ಸಾರಿಗೆ ಬಸ್ಸಗಳನ್ನು ಉಚಿತವಾಗಿ ಒದಗಿಸಿದ್ದು ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿಯೇ ಶಾಸಕ ನಡಹಳ್ಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಪರಶುರಾಮ ಪವಾರ, ಬಸಯ್ಯ ನಂದಿಕೇಶ್ವರಮಠ, ಸೋಮನಗೌಡ ಬಿರಾದಾರ, ತಹಸೀಲ್ದಾರ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಕಾರಿ ಗೋಪಾಲ ಕಾಸೆ, ಸಿಪಿಐ ಆನಂದ ವಾಗ್ಮೋರೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ ಇದ್ದರು.
Be the first to comment