ಎಪಿಎಂಸಿ ಕಾಯ್ದೆ ತಿದ್ದುಪಡೆಯನ್ನು ರಾಜ್ಯ ಸರಕಾರ ಕೈಬಿಡಬೇಕು: ಅಧ್ಯಕ್ಷ ಗುರು ತಾರನಾಳ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಗುರು ತಾರನಾಳ, ಎಪಿಎಂಸಿ ಅಧ್ಯಕ್ಷರು, ಮುದ್ದೇಬಿಹಾಳ.

ಜಿಲ್ಲಾ ಸುದ್ದಿಗಳು


 


ಮುದ್ದೇಬಿಹಾಳ:
ರಾಜ್ಯ ಸರಕಾರ ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆ ತಿದ್ದುಪಡೆ ಮಾಡಿ ಜಾರಿಗೆ ತರುತ್ತಿರುವ ಮುಕ್ತ ಮಾರುಕಟ್ಟೆ ವ್ಯವಸ್ಥೆಯು ರೈತರಿಗೆ ಮಹಾಮೋಸವಾಗಿದ್ದು ಇದನ್ನು ಕೂಡಲೇ ಕೈಬಿಡಬೇಕು ಎಂದು ಮುದ್ದೇಬಿಹಾಳ ಎಪಿಎಂಸಿ ಅಧ್ಯಕ್ಷ ಗುರು ತಾರನಾಳ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಯ್ದೆಯಲ್ಲಿ ತಿದ್ದುಪಡೆ ಮಾಡಲು ಹೊರಟಿರುವ ರಾಜ್ಯ ಸರಕಾರವು ರೈತರಿಗೆ ನೆರವಾಗುವ ಬದಲು ಕಾರ್ಪೋರೇ ಸಂಸ್ಥೆಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಭಿತಿಯಲ್ಲಿ ಈಗಾಗಲೇ ರೈತರು ತತ್ತರಿಸಿದ್ದು ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರೈತರು ಇನಷ್ಟು ಕಂಗಾಲಾಗುವುದರಲ್ಲಿ ಎರಡು ವಿಷಯವಿಲ್ಲ.
ಕೇಂದ್ರ ಸರಕಾರದ ಬೆಂಬಲ ಬೆಲೆಯಿಂದ ರಾಜ್ಯದಲ್ಲಿ ತೊಗರಿ, ಕಡ್ಲಿ, ಬತ್ತ ಹಾಗೂ ರೈತರು ಬೆಳೆದ ಇನ್ನಿತರ ಬೆಳೆಗಳನ್ನು ಖರೀದಿಸಲು ಸರಕಾರ ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು. ಇದರಿಂದ ಕೊವಿಡ-೧೯ ಸಮಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುತ್ತದೆ. ಆದರೆ ಕಾಯ್ದೆ ತಿದ್ದುಪಡೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು. ತಿದ್ದುಡೆಗೆ ಈಗಾಗಲೇ ಸಂಪುಟದಲ್ಲಿ ಪಾಸ್ ಮಾಡಲು ಯಡಿಯೂರಪ್ಪನವರು ತರಾತುರಿಲ್ಲಿದ್ದು ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ರೈತರು ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.



 

Be the first to comment

Leave a Reply

Your email address will not be published.


*