ರಾಜ್ಯ ಸುದ್ದಿ
ವಿಜಯಪುರ(ಮುದ್ದೇಬಿಹಾಳ):
ಬಡವಣೆಯಲ್ಲಿ ನಡೆಯಬೇಕಾಗಿದ್ದ ಅಭಿವೃದ್ಧಿ ಕೆಲಸದ ಬಗ್ಗೆ ವಿಚಾರಿಸಲು ಹೋದ ಸಾರ್ವಜನಿಕರೊಂದಿ ಅಸಭ್ಯ ರೀತಿಯಲ್ಲಿ ವರ್ತಿಸಿ ಬೆದರಿಕೆ ಹಾಕಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ವರ್ತನೆಯನ್ನು ಸ್ಥಳೀಯ ಪುರಸಭೆ ಸದಸ್ಯರು ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪುರಸಭೆ ಸದಸ್ಯರಾದ ವೀರೇಶ ಹಡಲಗೇರಿ, ಮೆಹಬೂಬ ಗೊಳಸಂಗಿ ಹಾಗೂ ರಿಯಾಜಅಹ್ಮದ ಢವಳಗಿ ಅವರು ಪೀಲೇಕಮ್ಮ ನಗರದಲ್ಲಿ ಯುಜಿಡಿ ಕಾಮಗಾರಿಯಿಂದ ಹಾಳಾಗಿದ್ದ ರಸ್ತೆಯ ದುರಸ್ಥಿ ಕಾಮಗಾರಿಗೆ ಶಾಸಕರು ಫೆಬ್ರವರಿ ತಿಂಗಳಲ್ಲಿ ಪೂಜೆ ನೆರವೇರಿಸಿದ್ದು. ಈಗ ಅಧಿಕಾರಿಗಳು ಅನುದಾನವೇ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ನಗರದ ನಿವಾಸಿಗರು ಹಾಗೂ ನಗರಕ್ಕೆ ಸಂಬಂಧಿಸಿದ ಪುರಸಭೆ ಸದಸ್ಯರ ಮಗನೊಂದಿಗೆ ಸ್ಥಳೀಯ ಶಾಸಕ ನಡಹಳ್ಳಿ ಅವರ ಮನೆ ತೆರಲಿ ರಸ್ತೆ ಕಾಮಗಾರಿ ಬಗ್ಗೆ ಕೇಳಿದಾ ಶಾಸಕರು ಏಕಾ ಏಕಿ ನಗರದ ನಿವಾಸಿಗರೊಂದಿಗೆ ವಾಗ್ವಾದಕ್ಕೆ ಇಳಿದು ನೀವು ನನಗೆ ಓಟು ಹಾಕಿಲ್ಲಾ. ಅದನ್ನೇನು ನೂವು ಕೇಳೊದು, ನಾನು ಎಂಎಲ್ಎ ಅದಿನಿ ಯಾವ ರೋಡ ಯಾವಾಗ ರೀಪೇರಿ ಮಾಡಬೇಕು ನನಗೆ ಗೊತ್ತು ಎಂದು ಹೇಳಿ ನಗರದ ನಿವಾಸಿಗರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಶಾಸಕರ ಘನತೆಗೆ ಒಳ್ಳೆಯದಲ್ಲ. ಶಾಸಕರು ಇದರ ಬಗ್ಗೆ ಮನವರಿಕೆ ಮಾಡಿಕೊಂಡು ತಮ್ಮ ವರ್ತೆನೆಯನ್ನು ಸುಧಾರಿಸಬೇಕೆಂದು. ಇಲ್ಲವಾದಲ್ಲಿ ಶಾಸಕರ ವಿರುದ್ಧ ರಾಜ್ಯಪಾಲರಿಗೆ ಹಾಗೂ ವಿಧಾನಸೌದ ಸಭಾಪತಿಗಳಿಗೆ ದೂರು ಸಲ್ಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಕುರಿತು ಅಂಭಿಗಾ ನ್ಯೂಸ್ ನೊಂದಿಗೆ ಆತನಾಡಿದ ಅನೀಲ ನಾಯಕ, ಶಾಸಕರು ನನಗೆ ಗುಂಡಾ ವರ್ತನೆ ಮಾಡಬಾರದು ಎಂದು ಹೇಳಿ ನನ್ನ ಹೆದರಿಕೆ ಹಾಕುತ್ತಿದ್ದಾರೆ. ನಾನು ಅವರ ಮನೆಗೆ ನನ್ನ ಮನೆ ಕೆಲಸಕ್ಕೆ ಹೋಗಿಲ್ಲ. ನಗರದ ಹಿರಿಯರೊಂದಿಗೆ ಹೋಗಿದ್ದೆ. ಆದರೆ ಶಾಸಕರು ಮಾತ್ರ ನೀನು ನನಗೆ ಮಹಾಕಿಲ್ಲ, ನನ್ನ ಮನೆಗೆ ಯಾಕೆ ಬಂದೆ ಎಂದು ನನಗೆ ಹೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎ.ಎಚ್.ಮೂಲಿಮನಿ, ಅನೀಲ ನಾಯಕ, ಎಂ.ಎ.ಹುಣಚಗಿ, ಸಮೀರ ದ್ರಾಕ್ಷಿ ಇದ್ದರು.
Be the first to comment