ಸೇವಾ ಭದ್ರತೆಗಾಗಿ ಕರೋನ ವಾರಿಯರ್ಸ್‌ ನಿಂದ ಕಪ್ಪ ಪಟ್ಟಿ ಧರಿಸಿ ಪ್ರತಿಭಟನೆ

ವರದಿ:- ಕಾಶಿನಾಥ ಬಿರಾದಾರ ನಾಲತವಾಡ

ಜೀಲ್ಲಾ ಸುದ್ದಿಗಳು

ನಾಲತವಾಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿಗುತ್ತಿಗೆ ಆಧಾರದಲ್ಲಿಕರ್ತವ್ಯ ನಿರ್ವಹಿಸುತಿರುವ ವೈದ್ಯರು, ನರ್ಸ್‌ಗಳು, ಡ್ರೈವರ್‌ ಇತರ ಸಿಬ್ಬಂದಿ ಮಂಗಳವರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ನಾಲತವಾಡ:-ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುವವರನ್ನು ಮಾಚ್‌ 31ಕ್ಕೆ ಸೇವೆಯಿಂದ ಬಿಡುಗಡೆಗೊಳಿಸಿ ಮತ್ತೆ ಏ.2 ರಿಂದ ಸೇವೆಗೆ ಮರು ನೇಮಕಾತಿ ಮಾಡಿಕೊಳ್ಳುತ್ತ ಬರಲಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿಯೇ 22 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ರಾಷ್ಟ್ರೀಯ ಆರೋಗ್ಯ ಮಿಶನ್‌ ಅಡಿಯಲ್ಲಿಗುತ್ತಿಗೆ ಆಧಾರದಲ್ಲಿಸೇವೆಗೆ ಸೇರಿದ್ದಾರೆ.ಪ್ರಮುಖ ಬೇಡಿಕೆಗಳಾದ ಸೇವಾ ಭದ್ರತೆ,ವೇತನ ಹೆಚ್ಚಳ,ಸಮಾನ ಕೆಲಸಕ್ಕೆ ಸಮಾನವಾದ ವೇತನ ನೀಡುವ ಮೂಲಕ,ಕೊರೊನಾದಂತ ಅಪಾಯಕಾರಿ ರೋಗದ ಸೋಂಕಿನ ವಿರುದ್ಧ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಯನ್ನು ಖಾಯಂ ಮಾಡುವಂತೆ ಒತ್ತಾಯಿಸಿ ಈ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ರೋಗಿಗಳ ಸೇವೆಯಲ್ಲಿತೊಡಗಿಸಿಕೊಂಡರು.

ಈ ವೇಳೆ ವೈದ್ಯಾಧಿಕಾರಿ ಎಂ.ಎಸ್.ಪಾಟೀಲ,ಆಪ್ತ ಸಮಾಲೋಚಕರಾದ ಶಶಿಕಾಂತ ಕುಂಬಾರ,ನಬಿಸಾಬ ಮುಲ್ಲಾ,ಶುಶ್ರೂಷಕ ವೀರೇಶ ಕುಂಬಾರ,ವಿಜಯಲಕ್ಷ್ಮಿ ತಳವಾರ,ಅಮರೇಶ ಹೊಳಿ,ಅಮರೇಶ ಅಂಗಡಿ,ಲಕ್ಷ್ಮೀ ಮೆದಿಕಿನಾಳ,ಕುಸುಮಾ ಹುಡೇದ,ಪ್ರಕಾಶ ಚಳಗೇರಿ,ಸಾವಿತ್ರಿ ಅಮಾತಿಗೌಡ್ರ,ಅನ್ವರ್ ಸೂಳಿಬಾವಿ ಇದ್ದರು.

Be the first to comment

Leave a Reply

Your email address will not be published.


*