ಜೀಲ್ಲಾ ಸುದ್ದಿಗಳು
- ಇಂದಿನಿಂದ ಜಿಲ್ಲೆಯಾದ್ಯಂತ ರೆಡ್ ಅಲರ್ಟ್
- ಯಾವುದೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯುವಂತಿಲ್ಲ.
- ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬೆಚ್ಚಿಬಿದ್ದ ಜಿಲ್ಲೆಯ ಜನತೆ.
ಅಂಬಿಗ ನ್ಯೂಸ್ ಯಾದಗಿರಿ
ಹೌದು ಇಷ್ಟು ದಿನಗಳಿಂದ ಗ್ರೀನ್ ಜೋನ್ ಪ್ರದೇಶ ಯಾದಗಿರಿ ಜೀಲ್ಲೆಯನ್ನು ಕಾಪಾಡಿಕೊಂಡು ಬಂದಿದ್ದ covid19 ಎಂಬ ಯಹಾಮಾರಿ ವೈರಸ್ ಇಂದು ಜಿಲ್ಲೆಗೆ ತನ್ನ ಪಾದಾರ್ಪಣೆ ಮಾಡಿದೆ.
ಹಸಿರು ಜೋನ ನಲ್ಲಿ ಇದ ಯಾದಗಿರಿ ಜಿಲ್ಲೆಯು ಕಲ್ಲಂಗಡಿಯ ಹೊಡೆದ ನಂತರದ ಹಸಿರಿನಿಂದ ರೆಡ್ ಆಗಿ ಬದಲಾಗಿದೆ.
“Green Zone Red Alert
ಕಲ್ಲಂಗಡಿ ಹೋಳು ಹೋಳು”
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಮತ್ತೇ ಢವ ಢವ ಶುರುವಾಗಿದೆ..
ಗುಜರಾತ್ ನ ಅಹಮದಾಬಾದ್ ನಿಂದ ಬಾಗಲಕೋಟೆಯ ಮೂಲಕ ಜಿಲ್ಲೆಗೆ ಬಂದಿದ್ದರು ಎನ್ನಲಾದ ಜಿಲ್ಲೆಯ ಸುರಪುರ
ನಗರದ ರಂಗನಪೇಟೆ ನಿವಾಸಿಗಳಾದ ದಂಪತಿಗಳಿಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ..
ಸುರಪುರ ನಗರದ ಅಸರ್ ಮೋಹಲ್ಲಾದ 38 ವರ್ಷದ P-867 ಹಾಗೂ ಈತನ ಪತ್ನಿ 33 ವರ್ಷದ P-867 ಗೆ ಕೊರೊನಾ ಪಾಸಿಟಿವ್ ಇದೆ ಎಂದು ಎಂದು ತಿಳಿದು ಬಂದಿದೆ.
ಇಂದು 12 ಗಂಟೆಯ ಹೆಲ್ತ್ ಬುಲೇಟಿನ್ ನಲ್ಲಿ ಲ್ಯಾಬ್ ರಿಪೋರ್ಟ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರನ್ನೂ ಸದ್ಯ ಸುರಪುರದ ವೀರಪ್ಪ ನಿಷ್ಠೀ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 904 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಲ್ಲಿವರೆಗೂ ಎಲ್ಲಾ ವರದಿಗಳು ನೆಗೆಟಿವ್ ಬಂದಿದ್ದವು ಇಂದಿನ ಹೆಲ್ತ್ ಬುಲೇಟಿನ್ ನಲ್ಲಿ
ಎರಡು ಪ್ರಕರಣಗಳು ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇದರಿಂದಾಗಿ ಇಷ್ಟು ದಿನಗಳಿಂದ ಎಷ್ಟೇ ಜಾಗೃತಿ ಮೂಡಿಸಿದರೂ
ವೈದ್ಯರ, ಮತ್ತು ಪೊಲೀಸ್ ಇಲಾಖೆಯ ಶ್ರಮ ವ್ಯರ್ಥವಾದಂತೆ ಕಾಣುತ್ತಿದೆ.
ಜನರಿಗೆ ಎಷ್ಟೇ ತಿಳಿ ಹೇಳಿದರು ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇಷ್ಟು ದಿನ ಜಾತ್ರೆ ಮಾಡುತ್ತಿದ್ದರು, ಕೊನೆಗೆ ಗಿರಿ ಜಿಲ್ಲೆಗೆ ಕರೋನ ಮಾಹಾಮಾರಿ ರೂಪದಲ್ಲಿ ಜವರಾಯ ವಕ್ಕರಿಸಿದ್ದು ಮುಂದೇನಾಗುತ್ತದೋ ಎಂದು ಕಾದುನೋಡಬೇಕಾಗಿದೆ.
Be the first to comment