ಸುರಪುರ ನಗರದ ಅಸರ್ ಮೋಹಲ್ಲಾ ಬಡಾವಣೆಗೆ ಅಧಿಕಾರಿಗಳ ಜೊತೆ ಶಾಸಕ ರಾಜೂಗೌಡ ಬೇಟಿ

ವರದಿ:- ರಾಘವೇಂದ್ರ ಮಾಸ್ತರ ಯಾದಗಿರಿ

ರಾಜ್ಯ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ಯಾದಗಿರಿ ಜಿಲ್ಲೆಯಲ್ಲಿ ಮೋದಲ covid19 ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸುರಪುರ ನಗರದ ಅಸರ್ ಮೊಹಲ್ಲಾ ಬಡವಾವಣೆಯ(P-867, P-868) ಇಬ್ಬರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇಂದು ಸುರಪುರ ವಿಧಾನಸಭಾಕ್ಷೇತ್ರದ ಜನಪ್ರೀಯ ಶಾಸಕರಾದ ಸನ್ಮನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು ಅಸರ್ ಮೊಹಲ್ಲಾ ಬಡಾವಣೆಗೆ ಅಧಿಕಾರಿಗಳ ಜೊತೆ ಬೇಟಿ ನೀಡಿದರು.

ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಬಡಾವಣೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಿಸಿದರು, ಮತ್ತು ಸಂಪೂರ್ಣ ಬಡಾವಣೆಯಲ್ಲಿ ಸೋಡಿಯಂ ಹೈಪೊಕ್ಲೋರೈಡ್, ಫಿನಾಯಿಲ್‌ ಮತ್ತು ಬ್ಲೀಚಿಂಗ್‌ ಅನ್ನು ಮಿಶ್ರಣ ಮಾಡಿ ಔಷಧ ಸಿಂಪರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಯಾರೂ ಯಾವುದಕ್ಕೂ ಭಯಪಡಬಾರದು ಎಂದು ಬಡಾವಣೆಯ ಜನತೆಗೆ ಧೈರ್ಯ ತುಂಬಿದರು.

ಯಾರು ಹೊರಗಡೆ ಅನವಶ್ಯಕವಾಗಿ ಓಡಾಡಬಾರದು ಮತ್ತು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಖಡ್ಡಾಯವಾಗಿ ಎಲ್ಲರೂ ಮಾಸ್ಕ ಧರಿಸಬೇಕು ಎಂದು ಹೇಳಿದರು.

ಯಾರು ಏನು ಆತಂಕಪಡಬೇಕಾಗಿಲ್ಲ ನಮ್ಮ ಹುಷಾರ್ ನಲ್ಲಿ ನಾವು ಇರಬೇಕು ಎಂದು ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತ ಜೀವನ್ ಕುಮಾರ್ ಕಟ್ಟಿಮನಿ,ತಹಶೀಲ್ದಾರ್ ನಿಂಗಣ್ಣ ಬಿರಾದಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ: ರಾಜಾ ವೆಂಕಪ್ಪ ನಾಯಕ, ಡಿವೈಎಸ್ಪಿ ವೆಂಕಟೇಶ್ ಹೋಗಿಬಂಡಿ, ಪಿ.ಐ.ಸಾಹೇಬಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*