ಜೀಲ್ಲಾ ಸುದ್ದಿಗಳು
ಅಂಬಿಗ್ ನ್ಯೂಸ್ ಟಿವಿ
ಬಾಗಲಕೋಟೆ:-ಕೊರೊನಾ ಲಾಕ್ ಡೌನ್ ಆದೇಶದಿಂದ ತತ್ತರಿಸಿದ ಹಿನ್ನೆಲೆಯಲ್ಲಿ ಉದ್ಯೋಗದಿಂದ ವಂಚಿತರಾಗಿ ತೀವ್ರ ಸಂಕಷ್ಟಕ್ಕಿಡಾದ ಅಲೆಮಾರಿ ಗೋಂಧಳಿ,ಬುಡಬುಡಿಕೆ,ಜೋಶಿ,ವಾಸದೇವ ಸಮುದಾಯಗಳಿಗೆ ಸರ್ಕಾರದ ವಿಶೇಷ ಪ್ಯಾಕೇಜ್ ನ್ನು ನೀಡುವಂತೆ ಆಗ್ರಹಿಸಿ ಕಮತಗಿ ಗೋಂಧಳಿ ಸಮಾಜದ ವತಿಯಿಂದ ಮಂಗಳವಾರ ಹುನಗುಂದ ತಹಶಿಲ್ದಾರ ಬಸವರಾಜ ನಾಗರಾಳ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಕಳೆದ ಎರಡು ತಿಂಗಳಿನಿಂದ ಕೊರೊನಾ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಅಲೆಮಾರಿ ಕುಟುಂಬಗಳು ಕಷ್ಟದ ಪರಿಸ್ಥಿತಿಯಲ್ಲಿ ಜಿವನ ಸಾಗಿಸುತ್ತಿದ್ದು,ಅದರಲ್ಲೂ ಅಲೆಮಾರಿ ಸಮುದಾಯದಲ್ಲಿ ಒಂದಾದ ಗೋಂಧಳಿ ಸಮಾಜದವರು ಗೊಂದಲ ಹಾಕುತ್ತಾ ಬುಡಬುಡಿಕೆ ಬಾರಿಸುತ್ತ ,ಮಹಿಳೆಯರು ಊರ ಊರು ಸುತ್ತಿ ಕೌದಿ ಹೊಲೆಯುತ್ತ,ಬೈಕ್ ,ಟಂ ಟಂ ಮೇಲೆ,ಕಾಲನಡಿಗೆ ಮೂಲಕ ಹಳ್ಳಿ ಹಳ್ಳಿ ಸುತ್ತುತ್ತಾ ಪಾತ್ರೆ (ಬಾಂಡೆ) ವ್ಯಾಪಾರ ಮಾಡುವುದರ ಮೂಲಕ ಜೀವನ ಸಾಗಿಸುತ್ತಿದ್ದರು.
ಆದರೆ ಮಹಾಮಾರಿ ಕೊರೊನಾ ವೈರಸ್ ದಿಂದ ಲಾಕ್ ಡೌನ್ ಆದಾಗಿನಿಂದ ಹಳ್ಳಿ ಹಳ್ಳಿಗೆ ಹೋಗಿ ವ್ಯಾಪಾರ ಮಾಡಲು ಆಗದಿರುವುದರಿಂದ ರಾಜ್ಯಾದ್ಯಂತ ಲಕ್ಷಾಂತರ ಜನ ಬಾಂಡೆ ವ್ಯಾಪಾರ ಮಾಡದೆ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ.ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ.ಒಟ್ಟಾರೆ ಗೋಂಧಳಿ ಸಮುದಾಯ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡುವುದರ ಜೊತೆಗೆ ಮೂರು ತಿಂಗಳ ವರೆಗೆ ಇತರೆ ಸಮುದಾಯಗಳಿಗೆ ನೀಡಿದಂತೆ ಐದು ಸಾವಿರ ರೂಪಾಯಿಗಳನ್ನು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಕುಭೇರಪ್ಪ ಸಿಂಗದ,ದೊಡ್ಡಯಲ್ಲಪ್ಪ ಜೋಶಿ,ಯಲ್ಲಪ್ಪ ಜೋಶಿ,ಪುಂಡಲಿಕ ಸಿಂಗದ,ಪ್ರಕಾಶ ಜೋಶಿ ಸೇರಿದಂತೆ ಅನೇಕರು ಇದ್ದರು.
Be the first to comment