*ಬಾಗಲಕೋಟೆ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ವಿಷಯದ ಆನ್ಲೈನ್ ಪಾಠಗಳು ಪ್ರಾರಂಭ.

ವರದಿ :ಶರಣಪ್ಪ ಹೆಳವರ

ಅಂಬಿಗ ನ್ಯೂಸ್ ಬಾಗಲಕೊಟೆ

ಕೋವಿಡ್ – 19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ 2019-20 ನೇ ಸಾಲೀನ SSLC ಪರೀಕ್ಷೆಗಳನ್ನು ಮೂಂದೂಡಲಾಗಿದ್ದು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಸಲುವಾಗಿ ಮತ್ತು ಪಠ್ಯ ವಿಷಯಗಳ ಪುನರ್ ಮನನಕ್ಕಾಗಿ ಶಿಕ್ಷಣ ಇಲಾಖೆ ದೂರದರ್ಶನ ದಲ್ಲಿ ಸಿದ್ದಪಡಿಸಿರುವ ಪಾಠಗಳನ್ನು ಪ್ರಸಾರ ಮಾಡಲಾಗುತ್ತಿದೆ.

ಅದರಂತೆ ಬಾಗಲಕೋಟೆ ಜಿಲ್ಲೆಯ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ಶಿಕ್ಷಕರಾದ ಲಕ್ಷ್ಮಿಕಾಂತ ಮಮದಾಪೂರ ಹಾಗೂ ರವೀಂದ್ರ ಆಹೇರಿ ಅವರ ನೇತೃತ್ವದಲ್ಲಿ zoom app ಡೌನ್‌ಲೋಡ್ ಮಾಡಿಕೊಂಡು ಜಿಲ್ಲೆಯ ಎಲ್ಲ ಮಕ್ಕಳಿಗೂ ಈ app ಡೌನ್‌ಲೋಡ್ ಮಾಡಲು ಆಯಾ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿ ಪ್ರತಿ ದಿನ ಒಂದು ಪಾಠವನ್ನು ಮಕ್ಕಳ ಜೊತೆ zoom app ಮೂಲಕ ರಾತ್ರಿ 7 ರಿಂದ 8 ಗಂಟೆಯವರೆಗೆ online class ಮಾಡಲಾಗುತ್ತದೆ.

ಈ class ಗೆ join ಆಗುವ ಮುಂಚೆ ಗುಂಪಿಗೆ ID ಮತ್ತು password ಕಳುಹಿಸಿ online classಗೆ join ಆಗಲು ತಿಳಿಸಲಾಗುತ್ತದೆ. ಒಟ್ಟಿಗೆ 250 ಜನ ಇದರಲ್ಲಿ ಪಾಲ್ಗೊಂಡು ಪಾಠದಲ್ಲಿರುವ ಸಮಸ್ಯಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಾರೆ.
ಇದರಲ್ಲಿ‌ ಜಿಲ್ಲೆಯ ಹಲವು ಶಿಕ್ಷಕರು ಕೂಡಾ ಭಾಗವಹಿಸಿರುತ್ತಾರೆ. ಅದರಂತೆ 15 ಜನ ಸಂಪನ್ಮೂಲ ಶಿಕ್ಷಕರು ಸೇರಿ ಈ ಲಾಕ್ ಡೌನ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಮಾಜ ವಿಜ್ಞಾನ ವಿಷಯದ ಎಲ್ಲ ಅಧ್ಯಾಯಗಳ ಡಿಜಿಟಲ್ ಕ್ವೀಜ್ ತಯಾರಿಸಿದ್ದಾರೆ.

ಅದಕ್ಕೆ ಬಾಗಲಕೋಟೆ ಡಿಜಿಟಲ್ ಬ್ಲಾಗ್ ತಯಾರಿಸಿ ಆ ಬ್ಲಾಗ್ ನಲ್ಲಿ ಎಲ್ಲ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು ನಿರ್ದರಿಸಲಾಗಿದೆ.

Be the first to comment

Leave a Reply

Your email address will not be published.


*