ಜಿಲ್ಲಾ ಸುದ್ದಿಗಳು
ಹಸಿರು ವಲಯದ ಶಿವಮೊಗ್ಗಜಿಲ್ಲೆಯಲ್ಲಿ 9ಜನರಿಗೆ ಸೊ೦ಕು
ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ಸಮಥ೯ರಲ್ಲ ,ವಿನ್ಸ್ಟOಟ ಚಚಿ೯ಲ್.
ಇದನ್ನ ನಾವು ಒಪ್ಪಬೇಕಾಗಿಲ್ಲ ಆದರೆ ವಿನಾಶಕಾರಿ ವೈರಸ್ ಒಂದು ಇಡೀ ವಿಶ್ವವನ್ನೇ ಮಸಣ ಮಾಡುತ್ತಿದ್ದರೂ ಅದನ್ನ ಸುಲಭವಾಗಿ ಸ್ವಯಂ ಶುಚಿತ್ವದಿಂದ ನಿಯಂತ್ರಿಸಲು ಸಾಧ್ಯವಿದ್ದರೂ, ನಾವು ದುರಂಹಕಾರದಿಂದ ಸಾಮಾಜಿಕ ಅಂತರ ಕಾಪಾಡದೆ, ಅನಾವಶ್ಯಕ ತಿರುಗಾಟ, ಎಲ್ಲಿ ಬೇಕೆಂದರಲ್ಲಿ ಉಗಿಯುವುದು ,ಇತ್ಯಾದಿ ಬೇಜವಾಬ್ದಾರಿ ನಡತೆ ಇಂದ ಸುಲಭವಾಗಿ ವೈರಸ್ ಹರಡಲು ಕಾರಣರಾಗುವುದು ನೋಡಿದರೆ ಮೇಲಿನ ಚರ್ಚಿಲ್ ರ ಮಾತು ಸತ್ಯ ಅನ್ನಿಸುತ್ತೆ.
ಸಾಮಾಜಿಕ ಅಂತರ ಕಾಪಾಡಲು ಸರ್ಕಾರ, ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ, ಮುಖಾಂತರ 46 ದಿನದಿಂದ ಸತತವಾಗಿ ಪ್ರಯತ್ನ ಪಡುತ್ತಿದ್ದಾರೆ ಅದರೆ ಕೆಳವರು ಅದನ್ನ ಅಪಹಾಸ್ಯ ಎಂಬಂತೆ ಪರಸ್ಪರ ತಾಗಿಕೊಂಡು ತರಕಾರಿ, ಮಾಂಸ ಮತ್ತು ಮದ್ಯ ಖರೀದಿಸುವುದು ನಿರಂತರ ಮಾಡುತ್ತಲೇ ಇದ್ದಾರೆ .
144 ಸೆಕ್ಷನ್ ಇದೆ 4 ಜನಕ್ಕಿಂತ ಹೆಚ್ಚು ಜನ ಸೇರಬಾರದೆಂಬ ನಿಯಮ ಯಾರೂ ಪಾಲನೆ ಮಾಡುತ್ತಿಲ್ಲ ,ಹಳ್ಳಿಗಳಲ್ಲಿ ಅಲ್ಲಲ್ಲಿ ಮದುವೆ ಇತ್ಯಾದಿ ನಡೆಯುತ್ತಲೇ ಇದೆ.
ಶಿವಮೊಗ್ಗ ಜಿಲ್ಲೆ ಪ್ರಾರಂಭದಿಂದ ಇವತ್ತಿನ ವರೆಗೆ ಹಸಿರು ವಲಯದಲ್ಲಿ ಇತ್ತು, ಈಗ ಇಲ್ಲ ,ಯಾಕೆಂದರೆ ಶಿಕಾರಿಪುರದ 8 ಜನ ಮತ್ತು ಹೊಸ ನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಒಬ್ಬರಿಗೆ ಕೊರಾನ ವೈರಸ್ ಸೋಂಕು ದೃಡಪಟ್ಟಿದ್ದರಿಂದ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆಂದು ಶಿವಮೊಗ್ಗ ಉಸ್ತುವಾರಿ ಸಚಿವ ಈಶ್ವರಪ್ಪ ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದು ಎಲ್ಲರಿಗೂ ಅಘಾತಕಾರಿ ಸುದ್ದಿ ಆಗಿದೆ.
ನಮ್ಮ ಕೈ,ನಮ್ಮ ತಲೆಮೇಲೆ
ಎಂಬಂತೆ ಇನ್ನಾದರೂ ಜನತೆ ಸ್ವಯಂ ಪ್ರೇರಣೆಯಿಂದ ಕೊರಾನಾ ವೈರಸ್ ನ ವಿರುದ್ಧ ಜಾಗೃತೆ ವಹಿಸದಿದ್ದರೆ ಮುಂದಿನ ದಿನಗಳು ಗಂಡಾಂತರ ಕಟ್ಟಿಟ ಬುಟ್ಟಿ ಎಂಬುದು ಮರೆಯಬಾರದು.
ನಮ್ಮ ಜೀವದ ರಕ್ಷಣೆಗಾಗಿ ಅಳುವಂತಹ ಸರ್ಕಾರಗಳು ಯಾವುದೇ ನಿಯಮಗಳನ್ನು ತರಲಿ. ಸರಿ ಇರಲಿ ,ಬಿಡಲಿ ಕಡ್ಡಾಯವಾಗಿ ಪಾಲಿಸೋಣ,
ಅದನ್ನು ಪಾಲಿಸದೆ ಇದ್ದರೆ ಮುಂದಿನ ದಿನದಲ್ಲಿ ಸಮಾಜದಲ್ಲಿ ಅನಾಹುತ ಉoಟಾಗುವ ಸಾಧ್ಯತೆ ಹೆಚ್ಚು.
ಕರೊನಾ ವೈರಸ್ ಹರಡಲು ಯಾರೇ ಕಾರಣವಾದರೂ ಅದನ್ನ ತಡೆಯಬೇಕು. ಅವರನ್ನ ಬೆಂಬಲಿಸುವ ಅಥವ ಸಕಾ೯ರವನ್ನು ಗೇಲಿ ಮಾಡುತ್ತಾ ಅಂತವರನ್ನ ಪ್ರೊತ್ಸಾಹಿಸುವ ಕೆಲಸ ಯಾರೇ ಮಾಡಿದರೂ ಕೊರಾನಾ ವೈರಸ್ ಮುಂದೆ ನಮ್ಮನ್ನೆ ಅಪೋಶನ ತೆಗೆದುಕೊಳ್ಳುವ ಅಪಾಯ ಇದೆ ನೆನಪಿರಲಿ.
Be the first to comment