ಮುದ್ದೇಬಿಹಾಳ ಜೆ. ಸಿ. ಸಂಸ್ಥೆಯಿಂದ ಉಚಿತ ಮಾಸ್ಕ ಹಾಗೂ ಕೊಡೆ ವಿತರಣೆ

ವರದಿ: ಶಿವಕುಮಾರ ಶಾರದಲ್ಲಿ

ಜಿಲ್ಲಾಸುದ್ದಿಗಳು



ಮುದ್ದೇಬಿಹಾಳ:

ಕೊರೋನಾ ವೈರಸ್ ವಿರುದ್ಧ ನಿಜವಾದ ಹೋರಾಟಗಾರರು ಎಂದರೆ ಆಶಾ ಕಾರ್ಯಕರ್ತರು. ತಮ್ಮ ಜೀವನದ ಹಂಗು ತೊರೆದು ಇನ್ನೊಬ್ಬರನ್ನು ಉಳಿಸುವ  ಆಶಾ ಕಾರ್ಯಕತರ ಸೇವೆ ನಿಜವಾದ ಸೇವೆಯಾಗಿದೆ ಎಂದು ಬೆಂಗಳೂರಿನ ಪೌರಾಯುಕ್ತ ಅರವಿಂದ ಜಮಖಂಡಿ ಹೇಳಿದರು.

ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ರವಿವಾರ ಇಲ್ಲಿನ ಜೆ. ಸಿ. ಸಂಸ್ಥೆಯಿಂದ ತಾಲೂಕಿನ 270 ಆಶಾ ಕಾರ್ಯಕರ್ತೆರಿಗೆ ಕೊಡೆ ಮತ್ತು ಮಾಸ್ಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂಗಿದ್ಧ ಪರಿಸ್ಥಿತಿಯಲ್ಲಿ ಕೇವಲ ಆಶಾ ಕಾರ್ಯಕರ್ತರು ಮಾತ್ರವಲ್ಲದೆ ಇವರೊಂದಿಗೆ ಪೊಲೀಸ್ ಇಲಾಖೆ, ಅರೋಗ್ಯ ಇಲಾಖೆ ಅಧಿಕಾರಿಗಳಿಗೂ ನಮ್ಮ ಜೆ. ಸಿ. ಸಂಸ್ಥೆವತಿಯಿಂದ ಧನ್ಯವಾದಗಳು ಎಂದು ಅವರು ಹೇಳಿದರು.

ಇದೆ ವೇಳೆಯಲ್ಲಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಆಶಾ ಕಾರ್ಯಕರ್ತೆಯರಿಗೆ ಕೊಡೆ ಮತ್ತು ಮಾಸ್ಕ ವಿತರಣೆಗೆ ಚಾಲನೆ ನೀಡಿದರು. 


ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ರವಿವಾರ ಜೆ. ಸಿ. ಸಂಸ್ಥೆಯಿಂದ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಕೊಡೆ ಹಾಗೂ ಮಾಸ್ಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜೆ. ಸಿ ಸಂಸ್ಥೆಯ ಮಹಾಭಲೇಶ ಗಡೇದ, ಸುರೇಶ ಕೆಲಾಲ, ಡಾ. ವಿರೇಶ ಪಾಟೀಲ, ಅಪ್ಪು ಪೂಜಾರಿ, ಸತೀಶ ಕುಲಕರ್ಣಿ ಸೇರಿದಂತೆ ಇತರರಿದ್ದರು. 



 

Be the first to comment

Leave a Reply

Your email address will not be published.


*