ಅಂಬಿಗ ನ್ಯೂಸ್ ಯಾದಗಿರಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಸಿದ್ದಾಪುರ(ಬಿ) ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸುರಿದ ಆಕಾಲಿಕ ಗಾಳಿಮಳೆಗೆ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ನಿರೀಕ್ಷೆ ಇಟ್ಟು ಬೆಳೆದಿದ್ದ ತೋಟಗಾರಿಕೆ ಬೇಳೆ ಪಪ್ಪಾಯ ಸಂಪೂರ್ಣ ನೆಲಕಚ್ಚಿದ್ದು ರೈತರ ಪಾಲಿಗೆ ನುಂಗಾಲಾರದ ತುತ್ತಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಬಹು ನಿರೀಕ್ಷೆ ಇಟ್ಟು ಅನ್ನದಾತ ಬೆಳಿದಿರುವ ಬೇಳೆಗಳು ವ್ಯಾಪಾರಸ್ತರಿಲ್ಲದೆ, ವ್ಯಾಪಾರವಾಗದೆ ಬೆಳೆದ ಬೆಳೆಗಳನ್ನು ನೋಡುತ್ತಾ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ತಿತಿ
ರೈತನಿಗೆ ಬಂದೊದಗಿದೆ,
ಹೌದು ದೇಶದಲ್ಲಿ ಯಾವುದೆ ಸಂದಿಗ್ಧ ಪರಿಸ್ಥಿತಿ ಬಂದಾಗ ಮೊದಲಿಗೆ ಬಲಿಯಾಗುವುದೇ ದೇಶದ ಬೆನ್ನೆಲುಬು ರೈತರು
ಅನೇಕ ನಿರೀಕ್ಷೆ ಇಟ್ಟುಕೊಂಡು ಬೆಳೆದಿರುವ ತೋಟಗಾರಿಕೆ ಬೆಳೆಯಾದ ಪಪ್ಪಾಯ ಬೆಳೆ, ಇನ್ನೇನು ರೈತರ ಕೈ ಸೇರಿತು ಏನ್ನುವ ಹೊತ್ತಿಗೆ ಅಕಾಲಿಕ ಮಳೆ ಹಾಗೂ ಗಾಳಿಯಿಂದಾಗಿ ಸಂಪೂರ್ಣ ನೆಲ ಕಚ್ಚಿದ್ದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದುಡಿತಕ್ಕೆ ಮೋಸವಿಲ್ಲವೆನ್ನುವ ಹಾಗೆ ರೈತ ಬೇವರಿಳಿಸಿ ದುಡಿದಾಗ ಭೂಮಿ ದುಡಿತಕ್ಕೆ ತಕ್ಕ ಫಸಲನ್ನು ಕೊಟ್ಟಿದೆ ಆದರೆ ಉತ್ತಮವಾಗಿ ಬೇಳೆದ ಬೆಳೆಗಳು ಬಿರುಗಾಳಿ ಸಹಿತ ಮಳೆಯಿಂದಾಗಿ ರೈತರು ಸಂಕಷ್ಟಕ್ಕಿಡಾಗಿದ್ದಾರೆ.
ತಾಲ್ಲೂಕಿನ ಸಿದ್ದಾಪುರ(ಬಿ), ಗ್ರಾಮದಲ್ಲಿ ಹತ್ತಾರು ಜನ ರೈತರು ಬಹು ನಿರೀಕ್ಷೆ ಇಟ್ಟು ಪಪ್ಪಾಯ ಬೆಳೆದಿದ್ದಾರೆ,
ನಿರೀಕ್ಷೆಗೆ ತಕ್ಕಂತೆಯೇ ಫಸಲು ಉತ್ತಮವಾಗಿ ಬಂದಿದೆ, ಆದರೆ ಅಕಾಲಿಕ ಗಾಳಿ ಮಳೆಯಿಂದಾಗಿ 10 ಎಕರೆ ಪಪ್ಪಾಯಿ ಬೆಳೆಗಳು ಬುಡ ಸಮೇತ ನೆಲಕ್ಕುರುಳಿವೆ.
ಸಿದ್ದಾಪುರ (ಬಿ) ಗ್ರಾಮದ ರೈತರಾದ ಚಂದ್ರಕಾಂತ ಬೈಲಾಪುರ, ಶಾಂತಗೌಡ, ಸಾಹೇಬಗೌಡ, ಪ್ರಭುಗೌಡ, ಎಲ್ಲರೂ ತಮ್ಮ ಸ್ವಂತ ಜಮೀನಿನಲ್ಲಿ ಪಪ್ಪಾಯ ಬೆಳೆ ಬೆಳೆದಿದ್ದಾರೆ ಅದೇ ಬೆಳೆ ಇಂದು ಅಕಾಲಿಕ ಮಳೆಗೆ ತತ್ತಾಗಿದದ್ದು ಸುಮಾರು 10 ಲಕ್ಷ ರೂಪಾಯಿಯ ಬೆಳೆ ನಾಶವಾಗಿದೆ..
ಕೂಡಲೇ ಸರ್ಕಾರ ರೈತರಿಗೆ ಪರಿಹಾರ ಕಲ್ಪಿಸುವುದರ ಜೊತೆಗೆ ರೈತರು ಬೆಳೆದಿರುವ ಬೇಳೆಯನ್ನು ಖರೀದಿಸಿ ಅನುಕೂಲ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ .
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ರವರ ಆಪ್ತ ಸಹಾಯಕರಾದ ಗುರುನಾಥ ಹುಲಕಲ್ ಹಾನಿಗೊಳಗಾದ ಸ್ಥಳಕ್ಕೆ ಜಮೀನುಗಳಿಗೆ ಬೇಟಿ ನೀಡಿ ಪರಿಶೀಲಿಸಿ ರೈತರಿಗೆ ಆದ ನಷ್ಟವನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು, ಮತ್ತು ರೈತರು ಯಾವುದೇ ರೀತಿ ಆತಂಕಪಡುವ ಅವಶ್ಯಕತೆ ಇಲ್ಲ ರಾಜ್ಯ ಸರಕಾರ ರೈತರ ಪರವಾಗಿರುತ್ತದೆ ಎಂದರು ..
➡️ರಾಜ್ಯದ ನಾನಾ ಕಡೆಗಳಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ,
ತಾಲ್ಲೂಕಿನ ಸಿದ್ದಾಪುರ(ಬಿ) ಗ್ರಾಮದಲ್ಲಿ ಬಿರುಗಾಳಿಗೆ ಸಹಿತ ಮಳೆಗೆ ರೈತರು ಬೆಳೆದ ಪಪ್ಪಾಯ ಬೆಳೆ ನೆಲಕ್ಕಚ್ಚಿದೆ ಇದರಿಂದ ರೈತರು ಬೆಳೆದ ಬೇಳೆಗಳು ಮಣ್ಣು ಪಾಲಾಗಿವೆ, ಆದ್ದರಿಂದ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ರೈತರು ಬೆಳೆದಿರುವ ಬೆಳೆಗಳನ್ನು ಸರಕಾರವೆ ನೇರವಾಗಿ ಖರೀದಿಸುವ ವ್ಯವಸ್ಥೆ ಮಾಡಬೇಕು.
ಸರ್ಕಾರ ರೈತರ ನೆರವಿಗೆ ಧಾವಿಸದೇ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು.
➡️ಮಾಹಾದೇವಿ ಬೇವಿನಾಳಮಠ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ
Be the first to comment