ಜಿಲ್ಲಾ ಸುದ್ದಿ
ಹರಿಹರ:-ಕಳೆದ ನಲವತ್ತು ನಾಲ್ಕು ದಿನದಿಂದ ಕರೋನಾ ವೈರಸ್ ನಿಯಂತ್ರಣ ಮಾಡುವ ಉದ್ದೇಶದಿಂದ ಇಡೀ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಯಿತು.ಕರ್ನಾಟಕದಲ್ಲೂ ಕರೋನಾ ವೈರಸ್ ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಇಡೀ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿ ಮೂರನೇ ಹಂತದ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ .
ಲಾಕ್ ಡೌನ್ ಘೋಷಣೆಯಿಂದ ಅನೇಕ ವೃತ್ತಿ ನಿರತ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿತ್ತು .
ನಿನ್ನೆ ದಿನ ಯಡಿಯೂರಪ್ಪ ನವರು ವೃತ್ತಿ ನಿರತ ಕಸುಬು ನಿರ್ವಹಿಸುತ್ತಿದ್ದ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ಅನ್ನು ಘೋಷಣೆ ಮಾಡಿದ್ದಾರೆ .ಇದು ಅವರಿಗೆ ಜನಸಾಮಾನ್ಯರ ಮೇಲೆ ಇರುವ ವಿಶೇಷ ಕಾಳಜಿಯನ್ನು ತೋರಿಸುತ್ತದೆ .ಆದರೆ ಕೆಲವು ಕಸುಬುದಾರರ ಕುಟುಂಬಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ತುಂಬಾ ಬೇಸರದ ಸಂಗತಿಯಾಗಿದೆ .
ದಿನದ 12ತಾಸು ಬಿಸಿಲು, ಮಳೆ ,ಚಳಿ,ಎನ್ನದೇ ಬೀದಿ ಬದಿಯಲ್ಲಿ ಕುಳಿತು ಜನರ ಪಾದರಕ್ಷೆಗಳೇ ತಮ್ಮ ಕಸುಬಿನ ದೇವರೆಂದು ನಂಬಿ ಬದುಕುತ್ತಿದ್ದ ಚಮ್ಮಾರರ ಸಂಕಷ್ಟವನ್ನು ಆಲಿಸದೇ ಅವರ ಕುಟುಂಬಗಳಿಗೆ ಇಂದಿನ ವಿಶೇಷ ಪ್ಯಾಕೇಜಿನಲ್ಲಿ ಯಾವುದೇ ಸಹಾಯ ಹಸ್ತದ ನೆರವಿನ ಘೋಷಣೆ ಮಾಡದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ .
ಲಾಕ್ ಡೌನ್ ಘೋಷಣೆ ಮಾಡಿದ ದಿನದಿಂದ ಇಂದಿನವರೆಗೂ ಸಂಕಷ್ಟಕ್ಕೆ ಒಳಗಾದ ಅತಿ ತೀರ ಹಿಂದುಳಿದ ವರ್ಗದ ಜನಾಂಗ ಹೊಂದಿದೆ ಎಂದರೆ ಅದು ಚಮ್ಮಾರರ ಬದುಕು .
ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಪತ್ರಿಕೆಯ ಕಳಕಳಿ ಏನೆಂದರೆ ದಯವಿಟ್ಟು ಚಮ್ಮಾರರ ಕುಟುಂಬಗಳಿಗೆ ನೀವು ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜಿನಲ್ಲಿ ಅವರಿಗೂ ಸಹಾಯ ಹಸ್ತವನ್ನು ನೀಡಿ ಸಂಕಷ್ಟದ ಸಮಯದಲ್ಲಿ ನಾವಿದ್ದೇವೆ ಎಂಬ ಧೈರ್ಯ ತುಂಬುವ ಕೆಲಸ ಮಾಡಿ ಎಂಬುದು ನಮ್ಮ ಪತ್ರಿಕೆಯ ವಿಶೇಷ ಕಳಕಳಿಯಾಗಿದೆ .
ಚಮ್ಮಾರರು ಅತ್ಯಂತ ಹಿಂದುಳಿದ ಜನಾಂಗದಿಂದ ಬಂದವರು ಅವರ ಮೂಲ ಕಸುಬು ಪಾದರಕ್ಷೆಗಳನ್ನು ತಯಾರು ಮಾಡುವುದು ಹರಿದ ಪಾದರಕ್ಷೆಗಳನ್ನು ಸರಿಪಡಿಸಿ ಕೊಡುವುದು .ಇದರಿಂದ ಬರುವ ಆದಾಯದಿಂದ ಅವರ ಕುಟುಂಬ ನಿರ್ವಹಣೆ ಮಾಡುವುದು ಆದರೆ ಇಂದು ನೀವು ಅವರನ್ನು ವಿಶೇಷ ಪ್ಯಾಕೇಜ್ ನಲ್ಲಿ ಅವರಿಗೆ ಸಂಕಷ್ಟದ ಪರಿಹಾರ ಘೋಷಣೆ ಮಾಡದಿರುವುದು ಕೇಳಿ ಕಸುಬನ್ನು ನಂಬಿ ಬದುಕುತ್ತಿದ್ದ ಅದೆಷ್ಟೋ ಕುಟುಂಬಗಳು ಕಂಗಾಲಾಗಿ ಹೋಗಿದೆ .
ದಯವಿಟ್ಟು ಮಾನ್ಯ ಮುಖ್ಯಮಂತ್ರಿಗಳು ಚಮ್ಮಾರರ ಬದುಕಿಗೆ ಆಸರೆಯಾಗಿ ಅವರಿಗೆ ಸಂಕಷ್ಟದ ಸಮಯದ ಪರಿಹಾರದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಆ ಕುಟುಂಬಗಳಿಗೆ ಧೈರ್ಯ ತುಂಬಿ ಎಂಬುದು ಸಮಸ್ತ ಕರ್ನಾಟಕದ ಚಮ್ಮಾರರ ಪರವಾಗಿ ನಮ್ಮ ಪತ್ರಿಕೆಯು ತಮ್ಮಲ್ಲಿ ಕಳಕಳಿಯಾಗಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತದೆ .
Be the first to comment