ಲಾಕಡೌನನಲ್ಲೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿಸಿದ ಪಶುವೈದ್ಯ ಬಾಸ್ಕರ: ಕೃತಜ್ಞತೆ ಸಲ್ಲಿಸಿದ ತಾಂಡಾ ನಿವಾಸಿಗರು

ವರದಿ: ರವಿ ತೇಲಂಗಿ

ಶಸ್ತ್ರಚಿಕಿತ್ಸೆ ನಡೆಸಿರುವ ಡಾ.ಬಾಸ್ಕರ ಹಾಗೂ ಸಹಾಯಕ ವಿಶಾಲ

ರಾಜ್ಯ ಸುದ್ದಿಗಳು



ಮುದ್ದೇಬಿಹಾಳ:

ತಾಲೂಕಿನ ಕೊಪ್ಪ ತಾಂಡಾದ ರೈತನೊಬ್ಬರ ಎತ್ತಿನ ಕಣ್ಣಿನಲ್ಲಿ ಬೆಳೆದು ನಿಂತ ಕ್ಯಾನಸರ್ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದುಹಾಕಿ ಎತ್ತಿನ ಪ್ರಾಣ ಕಾಪಾಡುವಲ್ಲಿ ತಾಲೂಕಿನ ಪಶು ವೈದ್ಯಾಧಿಕಾರಿ ಡಾ.ಬಾಸ್ಕರ್ ಯಶಸ್ವಿಯಾಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಎತ್ತಿನ ಕಣ್ಣಿನಲ್ಲಿ ಬೆಳೆದಿರುವ ಕ್ಯಾನ್ಸರ್ ಗಡ್ಡೆ
ಶಸ್ತ್ರಚಿಕಿತ್ಸೆ ಮಾಡಿ ಕ್ಯಾನ್ಸರ್ ಗಡ್ಡೆಯನ್ನು ತೆಗೆದಿರುವುದು

 


ಮುದ್ದೇಬಿಹಾಳ ತಾಲೂಕಿ ಕೊಪ್ಪ ತಾಂಡಾದ ರೈತ ಧರ್ಮಪ್ಪ ರಾಠೋಡ ಎಂಬುವವರಿಗೆ ಸೇರಿದ ಎತ್ತಿಗೆ ಕಳೆದ ಮೂರು ತಿಂಗಳ ಹಿಂದೆ ಕಣ್ಣಿನಲ್ಲಿ ಗಡ್ಡೆಯೊಂದು ಕಾಣಿಸಿಕೊಂಡಿದೆ. ಇದನ್ನು ಕಂಡು ಧರ್ಮಪ್ಪ ಎತ್ತಿನ ಕಣ್ಣಿಗೆ ಏನೊ ತಗುಲಿದ್ದು ಗಾಯವಾಗಿರಬಹುದು ಎಂದು ತಿಳಿದು ಬಿಟ್ಟಿದ್ದಾನೆ. ಆದರೆ ದಿನ ಕಳೆದಂತೆ ಎತ್ತಿನ ಕಣ್ಣಿನಲ್ಲಿದ್ದ ಗಾಯ ಗಡ್ಡೆಯಾಗಿತೊಡಗಿದೆ. ತಕ್ಷಣ ಎಚ್ಚರಗೊಂಡ ರೈತ ಕೂಡಲೇ ಪಶು ಸಹಾಯಕ ವೈದ್ಯಾಧಿಕಾರಿ ವಿಶಾಲ ಅವರನ್ನು ಸಂಪರ್ಕಿಸಿದ್ದಾರೆ. ನಂತರ ಪಶು ಸಹಾಯಕ ಎತ್ತಿನ ಕಣ್ಣಿನಲ್ಲಿದ್ದ ಗಡ್ಡೆಯ ಫೋಟೊ ತೆಗೆದ ಪಶು ಶಸ್ತ್ರ ಚಿಕಿತ್ಸೆ ತಜ್ಞ ಡಾ. ಬಾಸ್ಕರ ಅವರಿಗೆ ಕಳುಹಿಸಿದ್ದಾರೆ. ಗಡ್ಡೆಯನ್ನು ಕಂಡ ವೈದ್ಯರು ಇದಕ್ಕೆ ಶಸ್ತ್ರ ಚಿಕಿತ್ಸೆ ಮಾಡಲೇ ಬೇಕು ಇಲ್ಲವಾದಲ್ಲಿ ಎತ್ತು ಕಣ್ಣನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದಾಗ ಎತ್ತಿನ ಮಾಲಿಕ ಧರ್ಮಪ್ಪನವರು ಪಶು ವೈದ್ಯರಿಗೆ ಮನವಿ ಮಾಡಿ ಶಸ್ತ್ರಿ ಚಿಕಿತ್ಸೆ ಮಾಡುವಂತೆ ಕೇಳಿಕೊಂಡಿದ್ದಾರೆ. 


ಶಸ್ತ್ರಚಿಕಿತ್ಸೆ ನಡೆಸಿರುವ ಡಾ.ಬಾಸ್ಕರ ಹಾಗೂ ಸಹಾಯಕ ವಿಶಾಲ

ಜಿಲ್ಲಾದ್ಯಂತ ಲಾಕಡೌನ್ ಬಿಸಿ ಇದ್ದರೂ ಮುದ್ದೇಬಿಹಾಳ ತಾಲೂಕಿನ ಕೊಪ್ಪ ತಾಂಡಾಕ್ಕೆ ಆಗಮಿಸಿದ ಪಶು ಶಸ್ತ್ರ ಚಿಕಿತ್ಸೆ ತಜ್ಞ ಡಾ.ಬಾಸ್ಕರ ಅವರು ಧರ್ಮಪ್ಪನವರ ಎತ್ತಿನ ಕಣ್ಣಿನಲ್ಲಿ ಬೆಳೆದಿದ್ದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಾಂಡಾ ನಿವಾಸಿಗರು ತಾಂಡಾದ ಧರ್ಮಪ್ಪ ಕಡು ಬಡ ರೈತ. ಆ ಎತ್ತೆ ಆತನಿಗೆ ಎಲ್ಲವೂ ಆಗಿತ್ತು. ಆದರೆ ಎತ್ತಿನ ಕಣ್ಣಿನಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿದ್ದು ಅವನಿಗೆ ನುಂಗಲಾರದ ತುತ್ತಾಗಿತ್ತು. ಆದರೆ ತಜ್ಞರು ಅದನ್ನು ಶಸ್ತ್ರಚಿಕಿತ್ಸ ಮಾಡುವ ಮೂಲಕ ತೆಗೆದಿದ್ದು ವೈದ್ಯರು ಎತ್ತಿನೊಂದಿಗೆ ರೈತನ ಪ್ರಾಣವನ್ನೂ ಕಾಪಾಡಿದಂತಾಗಿದೆ ಎಂದು ವೈದ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

“ಮನುಷ್ಯ ತನಗಾದ ನೋವನ್ನು ಹೇಳಿಕೊಳ್ಳುತ್ತಾನೆ. ಆದರೆ ಅದೇ ನೋವು ಪ್ರಾಣಿಗಳಿಗಾದರೆ ಹೇಗೆ ಹೇಳಿಕೊಳ್ಳುತ್ತವೆ. ಕೊಪ್ಪ ತಾಂಡಾದ ಧರ್ಮಪ್ಪ ಎಂಬುವವರಿಗೆ ಸೇರಿದ ಎತ್ತಿನ ಕಣ್ಣಿನಲ್ಲಿ ಕ್ಯಾನ್ಸರ್ ಗಡ್ಡೆಯಾಗಿತ್ತು. ಅದನ್ನು ಶಸ್ತ್ರಚಿಕಿತ್ಸ ಮಾಡುವ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ. ಇದು ನನ್ನ ಕರ್ತವ್ಯ.” ಡಾ.ಬಾಸ್ಕರ್, ಪಶು ಶಸ್ತ್ರಚಿಕಿತ್ಸಾ ವೈದ್ಯರು.



 

Be the first to comment

Leave a Reply

Your email address will not be published.


*