ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ವಿದ್ಯುತ್ ಶಾರ್ಸ್ಟಸರ್ಕ್ಯೂನಿಂದ ಬೆಂಕಿ ತಗುಲಿ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಗ್ರಾಮದ ಶ್ರೀಶೈಲ ಈರಯ್ಯ ಹಿರೇಮಠ ಎಂಬುವವರಿಗೆ ಸೇರಿದ ಗ್ಯಾರೇಜಿನ ಅಂದಾಜು 7.7 ಲಕ್ಷ ಮೌಲ್ಯದ ಎಂಜಿನ ನಗದು ಸೇರಿದಂತೆ ಅನೇಕ ವಸ್ತುಗಳು ನಾಶವಾದ ಘಟನೆ ಗುರುವಾರ ನಡೆದಿದೆ.
ಬೆಂಕಿ ಅನಾಹುತದಿಂದ ನಿನ್ನೆಯಂತೆಯೇ ಮಾರಿದ್ದ ಅವರ ದ್ವಿಚಕ್ರ ವಾಹನದ ಹಣ ನಗದು ೪೦ ಸಾವಿರ ಸೇರಿದಂತೆ ಒಟ್ಟು ೪೩ ಸಾವಿರ ನಗದು, ಎರಡು ಹಿರೋ ಹಾಗೂ ಬಜಾಜ್ ಕಂಪನಿಯ ಇಂಜಿನ್, ಆಯಿಲ್ ಬಾಕ್ಸ, ಟ್ಯೂಬುಗಳು, ಟೈರುಗಳು, ಬೈಕ್ ಬೇರಿಂಗ್ಸ, ಚೈನ್ಸ, ಇದಲ್ಲದೇ ಗ್ಯಾರೇಜಿನ ಇನ್ನೊಂದು ಬದಿಯಲ್ಲಿ ಸಭೆ, ಸಮಾರಂಭಗಳಿಗೆ ಬೇಕಾದ ಧ್ವನಿವರ್‍ಧಕಗಳನ್ನು ಸಹ ಬಾಡಿಗೆ ಕೊಡ್ಡುತ್ತಿದ್ದರು. ಅದರ ಡಿ.ಜೆ. ಸ್ಪೀಕರ್, ಡಿ.ಜೆ ಲೈಟಿಂಗ್ಯ, ಡಿ.ಜೆ. ಎಂಪ್ಲಿಫೈಯರ್ ಸಹ ಸುಟ್ಟು ಹೋಗಿವೆ. ಬೆಂಕಿ ಹತ್ತಿಕೊಂಡ ತಕ್ಷಣವೇ ತಾಳಿಕೋಟಿ ಹಾಗೂ ಮುದ್ದೇಬಿಹಾಳದ ಅಗ್ನಿಶ್ಯಾಮಕದಳದ ವಾಹನಗಳು ಸ್ಥಳಕ್ಕೆ ಬಂದವಾದರೂ ಅಷ್ಟೊತ್ತಿಗಾಗಲೇ ಬೆಂಕಿಯ ತೀವ್ರತೆಗೆ ಎಲ್ಲ ಸಾಮಾನುಗಳು ಸುಟ್ಟು ಹೋಗಿದ್ದವು. ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಗಮೋಡೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾಳಿಕೋಟಿ ಠಾಣೆಯ ಪಿಎಸೈ ವಸಂತ ಬಂಡಗಾರ ಭೇಟಿ ನೀಡಿದರು.
Be the first to comment