ಮೀನುಗಾರಿಕೆ ಸುದ್ದಿಗಳು
ಉಡುಪಿ : ಕೊರೊನಾ ಮಹಾಮಾರಿಯಿಂದಾಗಿ ಮೀನುಗಾರರು ತತ್ತರಿಸಿ ಹೋಗಿದ್ದಾರೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದ ಮಹಿಳೆಯರು ಕೆಲಸವಿಲ್ಲದೇ ಮನೆಯಲ್ಲಿ ಬಂಧಿಯಾಗಿದ್ದಾರೆ. ಅದ್ರಲ್ಲೂ ದಿನಗೂಲಿ ಕಾರ್ಮಿಕರಾಗಿ ಮೀನು ಕಟ್ಟಿಂಗ್ ಘಟಕಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಸ್ಥಿತಿ ದುಸ್ಥರವಾಗಿದೆ. ಇಂತಹ ಮಹಿಳೆಯರ ನೆರವಿಗೆ ನಾಡೋಜಾ ಡಾ.ಜಿ.ಶಂಕರ್ ಅವರ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ದಾವಿಸಿದೆ.
ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಮಂದಿ ಮೀನು ಕಟ್ಟಿಂಗ್ ಮಾಡುವ ಕಾರ್ಯವನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೀಗ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಮನೆಯಲ್ಲಿಯೇ ಕುಳಿತಿದ್ದಾರೆ. ಹೀಗಾಗಿ ಕುಂದಾಪುರ ಕೋಡಿಯಿಂದ ಹೆಜಮಾಡಿ ವ್ಯಾಪ್ತಿಯಲ್ಲಿರುವ ಮೀನು ಕಟ್ಟಿಂಗ್ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಗುತ್ತದೆ.ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸುಮಾರು 2000ಕ್ಕೂ ಅಧಿಕ ಆಹಾರದ ಕಿಟ್ ಗಳನ್ನು ನೀಡಿದ್ದು, ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆಯ ನೇತೃತ್ವದಲ್ಲಿ ಹಂಚಿಕೆ ಮಾಡಲಾಗುತ್ತದೆ. ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಿಟ್ ಗಳನ್ನು ಮಹಿಳೆಯರಿಗೆ ಹಸ್ತಾಂತರಿಸಲಿದ್ದಾರೆ. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾಗಿರುವ ಶಿವರಾಮ ಕೆ.ಎಮ್. ಹಾಗೂ ಮಾಜಿ ಅಧ್ಯಕ್ಷ ವಿನಯ್ ಕರ್ಕೇರಾ ಪಾಲ್ಗೊಳ್ಳಲಿದ್ದಾರೆ.
Be the first to comment