ಖಾಕಿv/s ಆರ್ಮಿ  ಆಂತರಿಕ ದೇಶ ಸೇವೆ ದೇಶಯೇ ಈಶ ಸೇವೆ

ವರದಿ: ಅಮರೇಶ ಕಾಮನಕೇರಿ

ಜೀಲ್ಲಾ ಸುದ್ದಿಗಳು

ಬೆಳಗಾವಿ:-ಚೀನಾದಲ್ಲಿ ಜನ್ಮ ತಾಳಿ ಇಡೀ ವಿಶ್ವಾದ್ಯಂತ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಕರೋನಾ ವೈರಸ್ ನಿಯಂತ್ರಣಕ್ಕಾಗಿ ವಿಶ್ವದ ನಾನಾ ದೇಶಗಳು ಅನೇಕ ಕಸರತ್ತನ್ನು ಮಾಡುತ್ತಿವೆ .

ಭಾರತದಲ್ಲಿ ಸಹ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಇಡೀ ದೇಶಾದ್ಯಂತ ಲಾಕ್ ಡೌನ್ ನನ್ನು ಘೋಷಣೆ ಮಾಡಿದೆ .

ಈ ಲಾಕ್ ಟೌನ್ ಘೋಷಣೆಯನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡದ ಕಾರಣ ಮತ್ತೆ ಲಾಕ್ ಡಾನ್ನನ್ನು ದೇಶಾದ್ಯಂತ ವಿಸ್ತರಣೆ ಮಾಡಿದ್ದಾರೆ .

ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದು ,ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡದ ಕಾರಣ ,ಹಾಗೂ ರಾಜ್ಯದ ಪೊಲೀಸರು ಇದರಲ್ಲಿ ವಿಫಲವಾಗಿದ್ದರಿಂದ ಕರ್ನಾಟಕ ರಾಜ್ಯ ಸರ್ಕಾರವು ಅರೆ ಸೈನಿಕ ಪಡೆಯನ್ನು ರಾಜ್ಯಕ್ಕೆ ಕರೆಸಿಕೊಂಡಿತ್ತು .

ದೇಶದಲ್ಲಿ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದಾಗ ಆ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಏರಿದಾಗ ನಮ್ಮ ಸಹಾಯಕ್ಕೆ ಬರುವುದು ನಮ್ಮ ದೇಶದ ಯೋಧರು .

ಆರೋಪಿಗಳಿಗೆ ಬೇಡಿ (Handcuffs) ಹಾಕಬೇಕಾದರೆ ಮಾನ್ಯ Magistrate ಅವರು ಆದೇಶ ಮಾಡಬೇಕು. ಪೋಲಿಸರಿಗೆ ಹಾಗೂ ಜೈಲು ಅಧಿಕಾರಿಗಳಿಗೆ ಈ ಅಧಿಕಾರ ಇಲ್ಲ. ಏಪ್ರಿಲ್ 23 ರಂದು ಬೆಳಗಾವಿಯ “ಸದಲಗಾ ಪೋಲಿಸರು ” ಮಾಸ್ಕ ಹಾಕಿಲ್ಲ ಎಂಬ ಕಾರಣಕ್ಕೆ, ಒಬ್ಬ CRPF ಯೋದ ಸಚಿನ್ ಸಾವಂತ್ ಅವರ ಮೇಲೆ ಕೇಸು ದಾಖಲಿಸಿ, ಠಾಣೆಯಲ್ಲಿ ಬೇಡಿ ತೊಡಿಸಿ ಕೂರಿಸಿದ ಘಟನೆ ಬೆಳಕಿಗೆ ಬಂದಿದೆ.

ನಿಮಗೆ ಅಧಿಕಾರ ಇಲ್ಲ, ಆದರೂ ಈ ರೀತಿಯ ಕರ್ತವ್ಯ ಲೋಪ ಮಾಡಿರುವ ಪೋಲಿಸರನ್ನು ಈ ಕೂಡಲೇ ಅಮಾನತ್ತು ಮಾಡಬೇಕು ಕರ್ನಾಟಕದ ಪೋಲಿಸರು Supreme Court ಆದೇಶಕ್ಕೆ ಕಿಮ್ಮತ್ತು ಕೊಡವುದಿಲ್ಲ ಅಂದರೆ ಇದರ ಅರ್ಥ ಏನು?
Contempt Petition ಪೋಲಿಸರ ವಿರುದ್ಧ move ಮಾಡಬೇಕೆ ? ಎಚ್ಚರ.

ದೇಶದ ಯೋಧರು ನಮಗೆ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ಅವರು ಅತ್ಯವಶ್ಯಕ ನಾವು ಅವರನ್ನು ಅತ್ಯಂತ ಗೌರವದಿಂದ ಕಾಣಬೇಕು ಅವರನ್ನು ಗೌರವಿಸಬೇಕು ಇದು ನಮ್ಮ ಸಂಸ್ಕೃತಿಯೂ ಹೌದು .

ಸಂಕಷ್ಟದ ಸಮಯದಲ್ಲಿ ಕರೋನಾ ವೈರಸ್ ನಿಂದ ನಮ್ಮ ಜನರ ಪ್ರಾಣವನ್ನು ರಕ್ಷಿಸಲು ದೇಶದ ಆರೇ ಸೈನಿಕರು ರಾಜ್ಯಕ್ಕೇ ಆಗಮಿಸಿದ್ದಾರೆ ನಮ್ಮ ಜನರ ಪ್ರಾಣವನ್ನು ರಕ್ಷಿಸುತ್ತಿದ್ದಾರೆ .

ನಿನ್ನೆಯ ದಿನ ಬೆಳಗಾವಿಯಲ್ಲಿ ಅರೆ ಸೈನಿಕ ಪಡೆಯ ಯೋಧ ತನ್ನ ಮನೆಯ ಮುಂದೆ ಬೈಕ್ ಅನ್ನು ತೊಳೆಯುತ್ತಿದ್ದಾಗ ಖಾಕಿ ಪಡೆಯು ಸೈನಿಕರೊಂದಿಗೆ ಅತ್ಯಂತ ಅಮಾನುಷವಾಗಿ ವರ್ತಿಸಿ ಅವರ ಕೈಗೆ ಕೋಳ ಹಾಕಿ ತನ್ನ ವಿಕೃತಿಯನ್ನು ಮೆರೆದಿದ್ದಾರೆ .

ದೇಶದ ಸೈನಿಕರಿಗೆ ಕನಿಷ್ಠ ಗೌರವ ನೀಡದ ಪೊಲೀಸ್ ಇಲಾಖೆ ತನ್ನ ಬೇಜವಾಬ್ದಾರಿತನದ ನಡವಳಿಕೆಯಿಂದ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಪೊಲೀಸರ ಈ ವರ್ತನೆಯಿಂದ ಜನರು ರೊಚ್ಚಿಗೆದ್ದಿದ್ದಾರೆ .ಕೂಡಲೇ ಗೃಹ ಸಚಿವರು ಮಧ್ಯಪ್ರವೇಶಿಸಿ ಯೋಧರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡು ಸಂಬಂಧಿಸಿದ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತುಗೊಳಿಸುವಂತೆ ರಾಜ್ಯದ ಜನರು ಆಗ್ರಹಿಸುತ್ತಿದ್ದಾರೆ .

ಕರೋನಾ ವೈರಸ್ ಜಿಲ್ಲೆಯಲ್ಲಿ ಹರಡಲು ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದ ಪೊಲೀಸ್ ಇಲಾಖೆಯವರು ದೇಶದ ಯೋಧನನ್ನು ಅವಮಾನಿಸಲು ಮುಂದಾಗಿದ್ದು ಮಾತ್ರ ಅತ್ಯಂತ ಖಂಡನೀಯ ವಾದ ವಿಷಯವಾಗಿದೆ .

ಪೊಲೀಸರು ಈ ರೀತಿ ವರ್ತಿಸಲು ಕಾರಣ ರಾಜ್ಯ ಸರ್ಕಾರವು ಅವರನ್ನು ಸೇವಕರು ಎಂದು ತಲೆಯ ಮೇಲೆ ಕೂಡಿಸಿಕೊಂಡು ಓಡಾಡುತ್ತಿರುವುದು ಆಗಿದೆ .’ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿ ಎದ್ದು ಛತ್ರಿ ಹಿಡಿದಂತೆ ‘ನಮ್ಮ ಪೊಲೀಸರಿಗೆ ದುರಹಂಕಾರದ ಪಿತ್ತ ನೆತ್ತಿಗೇರಿದೆ .ವಿನಾಶ ಕಾಲೇ ಇತ್ತು ವಿಪರೀತ ಬುದ್ಧಿ ನಮ್ಮ ಪೊಲೀಸರಿಗೆ ಬಂದಂತೆ ಕಾಣುತ್ತಿದೆ .

ದೇಶದ ಯೋಧರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ತಿಳಿವಳಿಕೆ ಇಲ್ಲದ ಪೊಲೀಸರ ನಡೆಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ತೀವ್ರವಾಗಿ ಖಂಡಿಸಿದ್ದಾರೆ ಅಲ್ಲದೆ ಕೂಡಲೇ ದೇಶದ ಯೋಧನನ್ನು ಗೌರವಯುತವಾಗಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.

ಕರೋನಾದ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಹೋಗುವುದು ಅನಿವಾರ್ಯವಾಗಿದೆ. ಇಂಥ ಸಂದರ್ಭದಲ್ಲಿ ಜನರಿಂದ ಹಿಡಿದು ಎಲ್ಲಾ ಇಲಾಖೆಯ ಅಧಿಕಾರಿಗಳು ಅತ್ಯಂತ ತಾಳ್ಮೆಯಿಂದ ಭೇದ,ಭಾವ .ಮೇಲು, ಕೀಳು. ಎನ್ನದೇ ಒಟ್ಟಾಗಿ ಸಾಗಬೇಕು ಕರೋನಾ ವೈರಸ್ ಈ ದೇಶದಿಂದ ಓಡಿಸಬೇಕು ಇದು ನಮ್ಮ ಧ್ಯೇಯ ವಾಕ್ಯ ಆಗಬೇಕು ಎಂಬುದು ನಮ್ಮ ಪತ್ರಿಕೆಯ ಕಳಕಳಿಯಾಗಿದೆ.

Be the first to comment

Leave a Reply

Your email address will not be published.


*