ಜೀಲ್ಲಾ ಸುದ್ದಿಗಳು
ಯಮಕನಮರಡಿ ವರದಿ :ಕರೋನ ವೈರಸ್ ಎಂಬ ಮಹಾಮಾರಿ ರೋಗ ನಿರ್ನಾಮ ಮಾಡುವ ನಿಟ್ಟಿನಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಆಶಾಕಾರ್ಯಕರ್ತೆಗಳು
ಯಮಕನಮರದಿ ಕ್ಷೇತ್ರದ ಬಿಜೆಪಿ ಯುವ ಧುರೀಣರಾದ ಮಾರುತಿ.ಅಷ್ಟಗಿ ಪ್ರತಿ ಗ್ರಾಮ ಪಂಚಾಯಿತಿಗೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೇಜರ ನೀಡಿ
ಮಾನವೀಯತೆ ಮೆರೆದರು.
ಕೋರೊನ ವೈರಸ್ ಎಂಬ ಮಹಾಮಾರಿಯ ಹುಟ್ಟ ಅಡಗಿಸುವ ಸಲುವಾಗಿ ನಿರಂತರವಾಗಿ ಶ್ರಮ ಪಡುತ್ತಿರುವ
ಗ್ರಾಮಪಂಚಾಯತಿ,ಆರೋಗ್ಯ ಇಲಾಖೆ,ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಜಿಲ್ಲಾಡಳಿತ ಹೀಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿ ಕೊರೊನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ , ಮಹಾಮಾರಿ ರೋಗವನ್ನು ಸಂಪೂರ್ಣವಾಗಿ ಭಾರತ ದೇಶದಿಂದ ನಿರ್ಣಾಮ ಮಾಡುವ ಸಲುವಾಗಿ ತಮ್ಮ ವಯಕ್ತಿಕ ಕುಟುಂಬ ಜೀವನವನ್ನು ಬದಿಗಿಟ್ಟು, ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ನಿಸ್ಕಾಳಜಿವಹಿಸಿ, ಸಮಾಜದಲ್ಲಿನ ಎಲ್ಲಾ ನಾಗರಿಕರನ್ನು ಕೊರೊನ ವೈರಸ್ ಎಂಬ ಯಮರೂಪಿ ಮಹಾಮಾರಿ ರೋಗದಿಂದ ಸ್ಥಳೀಯರನ್ನು ರಕ್ಷಿಸಿ ಆರೋಗ್ಯವಂತರನ್ನಾಗಿ ಮಾಡುವ ನಿಟ್ಟಿನಲ್ಲಿ,ಎಲ್ಲರನ್ನುಆರೋಗ್ಯವಂತರನ್ನಾಗಿ ಬದುಕಿಸುವ ಸಲುವಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಎಲ್ಲ ಅಧಿಕಾರಿಗಳ ನಿಸ್ವಾರ್ಥ ಸೇವೆ ಅವೀಸ್ಮರಣೀಯ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶೋಭಾ ತವಕರಿ ಉಪಾಧ್ಯಕ್ಷ ಮಾರುತಿ ನಾರ್ವೇಕರ್ ಹಾಗೂ ಗ್ರಾಮ ಪಂಚಾಯತಿ ಪಿಡಿಯೋ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಗೋಕಾಕ
Be the first to comment