ರಾಜ್ಯ ಸುದ್ದಿಗಳು
ಅಂಬಿಗ ನ್ಯೂಸ್ ಬೆಂಗಳೂರು
27/4/2020 ಇಂದು ಸಾಯಂಕಾಲದ 4 ಗಂಟೆಯ ಸಮಯಕ್ಕೆ ಮಾರಸಂದ್ರ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ
ಶ್ರೀ ರವಿ. ಡಿ. ಚೆನ್ನಣ್ಣನವರು ಹಾಗೂ ದೊಡ್ಡಬಳ್ಳಾಪುರ ಡಿವೈಎಸ್ಪಿ ಶ್ರೀ ರಂಗಪ್ಪ ರವರ ಸಹಯೋಗದಲ್ಲಿ ಹಾಗೂ ಶ್ರೀ ಮಾರಸಂದ್ರ ಮುನಿಯಪ್ಪ ಬಹುಜನ ಸಮಾಜ ಪಾರ್ಟಿ ರಾಜ್ಯ ಉಸ್ತುವಾರಿಗಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಕೈಗಾರಿಕೆ ಪ್ರದೇಶದ ಸುತ್ತ ಮುತ್ತಲಿನಲ್ಲಿ ಸಿಲುಕಿಕೊಂಡಿರುವ ಉತ್ತರ ಪ್ರದೇಶ, ಒರಿಸ್ಸಾ, ಹಾಗೂ ಉತ್ತರ ಕರ್ನಾಟಕ ಭಾಗದ ಸುಮಾರು 50 ಜನ ನಿರಾಶ್ರಿತರಿಗೆ ಫುಡ್ ಕಿಟ್ ಮತ್ತು ಮಾಸ್ಕ್ ವಿತರಣೆಯನ್ನು ಮಾಡಲಾಯಿತು.
ಈದೇ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಪ್ರಕಾಶ್, ವೆಂಕಟ್ ಚಲಪತಿ, ಮಹದೇವ್, ಚಲಪತಿ (ಪಿಳ್ಳಿ ), ಸುರೇಶ್ ಹಾಗೂ ಸಂತೋಷ ಮತ್ತು ಸ್ಥಳಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
Be the first to comment