ಜೀಲ್ಲಾ ಸುದ್ದಿಗಳು
ಒಪ್ಪೊತ್ತಿನ ಊಟಕ್ಕೂ ಸಾಕಷ್ಟು ಪರದಾಡುತ್ತಿರುವ ಎಂಕೆ ಹುಬ್ಬಳ್ಳಿಯ ಕಸ್ತೂರಿ ರತನ್ ಶಿಂಗೆ ಕುಟುಂಬ
ಎಂಕೆ ಹುಬ್ಬಳ್ಳಿ:-ಕರೋನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಸಾಕಷ್ಟು ತಲ್ಲಣ ಮಾಡಿದೆ. ಈಗಿರುವಾಗ ನಿರ್ಗತಿಕ ಕುಟುಂಬಗಳಂತೂ ಬೀದಿಗೆ ಬಿದ್ದು ಒಪ್ಪೊತ್ತಿನ ಊಟಕ್ಕೂ ಸಾಕಷ್ಟು ಪರದಾಡುತ್ತಿವೆ. ಈಗಿರುವಾಗ
ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ಗುಡಿಸಿಲು ನಲ್ಲೇ ವಾಸವಾಗಿರುವ ಕಸ್ತೂರಿ ರತನ್ ಶಿಂಗೆ ಕುಟುಂಬವಂತೂ ದಿನ ನಿತ್ಯದ ಒಂದೊತ್ತಿನ ಊಟಕ್ಕೂ ಪರದಾಡಿ ಬೀದಿಗೆ ಬಂದು ನಿಂತಿದೆ.
ಪ್ರತಿ ದಿವಸ ಅವರು ಮತ್ತು ಅವರ ಮಕ್ಕಳು ಪ್ರತಿ ಗ್ರಾಮಗಳಿಗೆ ತೆರಳಿ ಗ್ಯಾಸ್ ಒಲೆಗಳನ್ನು ದೂರಸ್ತಿಗೊಳಿಸುವುದು, ಮತ್ತು ಹಾವುಗಳನ್ನು ಹಿಡಿಯುವುದು ಹಾಗೂ ಪಟ್ಟಣದ ಮನೆ ಮನೆಗೂ ತೆರಳಿ ಪಾತ್ರೆಗಳನ್ನು ತೊಳೆದು ದಿನ ನಿತ್ಯ ತಮ್ಮ ಉಪಜೀವನ ಸಾಗಿಸುತ್ತಿದ್ದರು. ಆದರೇ ಪ್ರಸ್ತುತ ಇವರಿಗೆ ಊಟಕ್ಕೂ ಪರದಾಡುತ್ತಿರುವ ಇವರು ಮನೆ ಮನೆಗೂ ತೆರಳಿ ಬೇಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕಳೆದ 50 ವರ್ಷಗಳಿಂದ ಇಲ್ಲೇ ಇದ್ದರೂ ಸಹ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಗತಿಕರಿಗೆ ಮನೆಯನ್ನೂ ಬಿಡುಗಡೆ ಮಾಡಿಸದಿರುವುದು ತುಂಬಾನೇವಿಪರ್ಯಾಸದ ಸಂಗತಿ ಯಾಗಿದೆ. ಆದ್ದರಿಂದ ಇಂದು ನಮ್ಮ ಅಂಬಿಗ ನ್ಯೂಸ್ ತಂಡ ಭೇಟಿಕೊಟ್ಟು ಇವರ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿತು. ಇನ್ನಾದರೂ ಜಿಲ್ಲಾಧಿಕಾರಿಗಳು, ಹಾಗೂ ಎಂಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಂತಹ ನಿರ್ಗತಿಕ ಕುಟುಂಬಗಳ ಕಣ್ಣೀರು ಒರೆಸುವವರೇ ಎಂಬುದನ್ನು ಕಾದು ನೋಡಬೇಕಿದೆ.
Be the first to comment