ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಕರೋನಾ ಲಾಕ್ ಡೌನ್ ಎಫೆಕ್ಟ್ ಪಟ್ಟಣದಲ್ಲಿ ಭಾರೀ ಪ್ರಭಾವ ಬೀರಿದೆ. ಜನತೆಯನ್ನು ಗತಿಸಿ ಹೋದ ಕಾಲಕ್ಕೆ ಕೊಂಡೊಯ್ಯುತ್ತಿದೆ. ಅನಿವಾಯ೯ವಾಗಿ ಗತಿಸಿ ಹೋದ ಕಾಲದ ಸನ್ನಿವೇಶಗಳು ಪ್ರಸ್ಥುತ ತಲೆಮಾರಿಗೆ ಪರಿಚಯವಾಗುತ್ತಿವೆ.ಅದಕ್ಕೆ ಸಾಕ್ಷಿಯಾಗಿ ಲಾಕ್ ಡೌನ್ ಪರಿಣಾಮವಾಗಿ ಸಾಕಷ್ಟು ದೊರಕಲಿವೆ,ವಿದ್ಯುತ್ ನಿಂದ ನಡೆಯುವ ಹಿಟ್ಟಿನ ಗಿರಣಿ ಮಿಕ್ಸಿ,ಗ್ರಾಂಡರ್ ಗಳು ಬಂದು ಒಳ್ಳು ಒಣಕೆ ಬೀಸುವ ಕಲ್ಲುಗಳಿಗೆ ಶಾಕ್ ನೀಡಿವೆ,ಪರಿಣಾಮ ಅವು ಬಳಕೆಯಾಗದೇ ನೆಲದಲ್ಲಿ ಹೂತು ಹೋಗಿವೆ.ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಬಳಸದಿದ್ದರೂ,ಹಳೆಮನೆಗಳಲ್ಲಿ ಮಾತ್ರ ಕಾಣಸಿಗುತ್ತವೆ,ಲಾಕ್ ಡೌನ್ ನಿಂದಾಗಿ ಅವು ಮರುಜೀವ ತಾಳುತ್ತಿವೆ.
ಪಟ್ಟಣ ಪ್ರದೇಶಗಳಲ್ಲಿ ಅವುಗಳು ನೋಡಲು ಅಸಾಧ್ಯ ಎನ್ನಬಹುದಾಗಿದೆ..ಆದ್ರೆ ಕೂಡ್ಲಿಗಿ ಪಟ್ಟಣದಲ್ಲಿ ಜನಪ್ರತಿನಿಧಿಯೊಬ್ಬರು ಬೀಸೋಕಲ್ಲಿನಲ್ಲಿ ಬೀಸೋ ಮೂಲಕ ಗಮನ ಸೆಳೆದಿದ್ದಾರೆ. ಲಾಕಾ ಡೌನ್ ಪರಿಣಾಮ ಹಿಟ್ಟಿನಗಿರಣಿ ಅಗತ್ಯ ಸನ್ನಿವೇಶದಲ್ಲಿ ಲಭ್ಯವಿಲ್ಲದ ಕಾರಣ,ಪಟ್ಟಣದ ಪಟ್ಟಣ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಅಂಮೃತಮ್ಮನವರು ತಮ್ಮ ಮನೆಗೆ ಹೊಂದಿಕೊಂಡಿರುವ ಶ್ರೀಊರಮ್ಮದೇವಿ ಅಚ೯ಕರು ಹಾಗೂ ಪತ್ರಕತ೯ ಬಡಿಗೇರ ನಾಗರಾಜರವರ ಮನೆಯಲ್ಲಿರೋ ಬೀಸೋಕಲ್ಲು ಬಳಸಿ ರಾಗಿ ಬೀಸಿದರು.ಈ ಮೂಲಕ ಗತಿಸಿ ಹೋದ ಕಾಲ ಮರುಕಳಿಸಿದಂತಾಗಿದೆ.ಅವರ ಜೊತೆ ನಾಗರಾಜರವರ ಮಡದಿ ಶ್ರೀಮತಿ ಶಾಂತಮ್ಮ ನಾಗರಾಜರವರೂ ಸಾಥ್ ನೀಡಿದರು.
Be the first to comment