ನರೇಗಾ ಸ್ಥಳಕ್ಕೆ ಭೇಟಿ, ಅಭಿನಂದನಾ ಪತ್ರ ವಿತರಿಸಿದ ವಿಧಾನ ಪರಿಷತ್ ಸದಸ್ಯರಾದ ರಘುನಾಥ್ ಮಲ್ಕಾಪುರೆ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ ಏಪ್ರಿಲ್ 22 (ಅಂಬಿಗ ನ್ಯೂಸ್ ): ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ ಅವರು ಏ.22ರಂದು ಬೀದರ ತಾಲೂಕಿನ ಅಲಿಯಾಬಾದ್ ಗ್ರಾಮದ ನಾಲಾ ಟರ್ನಿಂಗ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಉದ್ಯೋಗ ಖಾತ್ರಿ ಯೋಜನೆಯ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದರು. ನರೇಗಾ ಕಾಮಗಾರಿಯ ಬಗ್ಗೆ ಅಲ್ಲಿನ ಕೆಲಸದ ಕೂಲಿ ಕಾರ್ಮಿಕರೊಂದಿಗೆ ಚರ್ಚಿಸಿದರು. ಕೋರೋನಾ ಹಿನ್ನೆಲೆಯಲ್ಲಿ ಕೈಗೊಂಡ ಸುರಕ್ಷಾ ವಿಧಾನಗಳ ಬಗ್ಗೆ ಇದೆ ವೇಳೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

*ಅಭಿನಂದನಾ ಪತ್ರ*: ಮಲ್ಕಾಪುರೆ ಅವರು ಏ.22ರಂದು ಅಲಿಯಾಬಾದ್ ಮತ್ತು ಅಲಿಯಂಬರ್ ಗಳಿಗೆ ಭೇಟಿ ನೀಡಿದ ವೇಳೆಯಲ್ಲಿ, ಕರೋನಾ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಕೆಲಸ ಮಾಡುತ್ತಿರುವ ಗ್ರಾಮದ ಪಿಡಿಓಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕರೋನಾ ಸೈನಿಕರಿಗೆ ಇದೆ ವೇಳೆ ಅಭಿನಂದನಾ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಶ್ರೀ ಶರತ್ ಕುಮಾರ್, ಗ್ರಾಮ ಪಂಚಾಯತ್ ಅಲಿಯಾಬಾದ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕೂಲಿ ಕಾರ್ಮಿಕರು ಇದ್ದರು.

Be the first to comment

Leave a Reply

Your email address will not be published.


*