ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುರಪುರ ಎ:-22:- ಸುರಪುರ-ರಂಗಂಪೇಟೆಯ ಮುಸ್ಲಿಂ ಭಾಂದವರು ಪ್ರತಿ ವರ್ಷ ಅದ್ದೂರಿಯಾಗಿ ರಮ್ ಜಾನ್ ಆಚರಿಸುತ್ತಿದ್ದಿರಿ ಆದರೆ ಈ ಬಾರಿ ಪ್ರಪಂಚವನ್ನೇ ತಲ್ಲಣ ಗೊಳಿಸಿದ ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಮೇ 3 ರವರೆಗೆ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಮಸ್ಜೀದ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದೇ ತಮ್ಮ ತಮ್ಮ ಮನೆಯಲ್ಲಿ ರಮ್ ಜಾನ್ ಹಬ್ಬವನ್ನು ಆಚರಣೆ ಮಾಡಬೇಕೆಂದು ಪಿಎಸ್ಆಯ್ ಚೇತನ ಬಿದರಿಯವರು ಹೇಳಿದರು.
ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ಸಾಯಂಕಾಲ ರಮ್ ಜಾನ್ ಹಬ್ಬದ ನಿಮಿತ್ತ ಹಮ್ಮೀಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಸರಕಾರ ಸೂಚಿಸಿರುವ ಕಟ್ಟು ನಿಟ್ಟಿನ ನಿಯಮಗಳನ್ನು ಎಲ್ಲಾ ಮುಸ್ಲಿಂ ಭಾಂದವರು ತಪ್ಪದೇ ಪಾಲಿಸಬೇಕು.
ಸಾಮೂಹಿಕ ಪ್ರಾರ್ಥನೆಯಾಗಲೀ ಇಫ್ತಾರ ಕೂಟ ಆಯೋಜನೆಗೆ ಯಾವುದೇ ಅವಕಾಶ ವಿರುವುದಿಲ್ಲ ಎಲ್ಲರೂ ಸಹಕಾರ ನೀಡಬೇಕು ಎಂದರು.
ಈಗಾಗಲೇ ವೈದ್ಯರು ಪೊಲೀಸರು,
ನಗರಸಭೆಯವರು ಆಶಾ,ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವವನ್ನೇ ಮುಡುಪಾಗಿಟ್ಪಿರುವುದಲ್ಲದೆ ಮತ್ತು ಕುಟುಂಬವನ್ನು ಮರೆತು ನಿಮ್ಮ ರಕ್ಷಣೆಗಾಗಿ ಹಗಲಿರಳು ಶ್ರಮಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ ರಂಗಂಪೇಟೆಯಲ್ಲಿ ಯುವಕರು ಗುಂಪು ಗುಂಪಾಗಿ ಕೂಡುವುದು ಆನಾವಶ್ಯಕವಾಗಿ ಓಡಾಡುವ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ 200 ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ, ಈಗಲಾದರೂ ಹಿರಿಯರು ತಮ್ಮ ಮಕ್ಕಳಾಗಲಿ,ಸಹೋದರರಾಗಲಿ ಹೊರಗಡೆ ಬರದಂತೆ ತಾಕೀತು ಮಾಡಿರಿ ಇಲ್ಲವಾದರೆ ಯಾವುದೇ ಮುಲಾಜಿಲ್ಲದೆ ವಾಹನಗಳನ್ನು ಸೀಜ್ ಮಾಡುವುದಲ್ಲದೆ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಪಿಎಸ್ಆಯ್ ಚಂದ್ರಶೇಖರ ನಾರಾಯಣಪೂರ ವೇದಿಕೆಯಲ್ಲಿದ್ದರು ದಯನಂದ ಜಮಾದಾರ ಸ್ವಾಗತಿಸಿ ವಂದಿಸಿದರು. ನಗನರಸಭೆ ಮಾಜಿ ಅಧ್ಯಕ್ಷರಾದ ಅಬ್ದುಲ್ ಗಫಾರ್ ನಗನೂರಿ ,ಮಹಿಬೂಬ ವಂಟಿ,ಸದಸ್ಯರಾದ ಮಹ್ಮದ್ ಗೌಸ್,ಖಮುರಲ್ ನಾರಾಯಣಪೇಟ,ನಾಸೀರ್ ಕುಂಡಾಲೆ ಖಾಲೀದ್ ಅಹ್ಮದ ತಾಳಿಕೋಟಿ,ವಜಾಹತ್ ಹುಸೇನ್,ತಿರಾದಂಜ್ ಆಂದೇಲಿ,ಮಹ್ಮದ್ ರಫೀಕ್,ಇಸ್ಮಾಯಲ್ ಬಳಿಚಕ್ರ,ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಭೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದು ಕೊಂಡರು.
Be the first to comment