ಬಡವರು ಹಳ್ಳಿಗಳಲ್ಲಿ ಇಲ್ಲವೆ.? ಪಟ್ಟಣಗಳಲ್ಲಿ ಮಾತ್ರವೇ.?

ವರದಿ:-ಪ್ರಕಾಶ ಮಂದಾರ

ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಿದ್ದು, ಚುನಾವಣೆ ಮು೦ದೆ ಹೋಗಿದ್ದು ಮತ್ತು ಮೀಸಲಾತಿಗೆ ಸುಗ್ರೀವಾಜ್ಞೆ ಮಾಡಿದ್ದರಿಂದ ಹಳ್ಳಿಗಳಲ್ಲಿ ಪ್ರಚಾರಕ್ಕಾಗಿ ದಾನ ಮಾಡುವವರು ಇಲ್ಲವಾಗಿರಬಹುದೆ.?

ಇಂತಹ ಒಂದು ಅನುಮಾನ ಕಾಡುತ್ತಿದೆ ಏಕೆಂದರೆ ನಿತ್ಯ ಪತ್ರಿಕೆ, ಸಾಮಾಜಿಕ ಜಾಲ ತಾಣದಲ್ಲಿ ಇಂತಹ ಸ೦ಘ ಅಥವ ಸಂಸ್ಥೆ ಮುಖಂಡರು 600 ಜನರಿಗೆ – 1000 ಜನರಿಗೆ ಆಹಾರದ ಕಿಟ್ ನೀಡಿದರು ಎಂಬ ಸುದ್ದಿ, ಮರುದಿನ ಅಲ್ಲಿಯೇ ಇನ್ನೊಂದು ಸಂಸ್ಥೆ ವಿತರಣೆ ಹೀಗೆ ನಿರಂತರ ದಾನಿಗಳಿ೦ದ ಆಹಾರದ ಕಿಟ್ ವಿನಿಯೋಗದ ಕಾಯ೯ಕ್ರಮ ನಡೆದಿದೆ.

ಸಕಾ೯ರದಿ೦ದ ನಿತ್ಯ ಹಾಲು ,ಮದ್ಯದಲ್ಲಿ ರಾಜಕಾರಣಿಗಳು ರೈತರಿOದ ತರಕಾರಿ ಖರೀದಿಸಿ ತರಕಾರಿ ವಿತರಣೆ ಕೂಡ ನಡೆದಿದೆ.

ಮಧ್ಯಾಹನ ಉಚಿತ ಊಟ ಕೂಡ ಪ್ರಾರಂಭ ಆಗಿದೆ.
ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಗೌಜು ಇಲ್ಲ ಇಲ್ಲದವರಿಗೆ ಬೇಕಾಗಿದ್ದು ಖರೀದಿಸಲು ಸಂಪಾದಿಸುತ್ತಾರೆ ಅವರೆಲ್ಲರಿಗೆ ಸದ್ಯ ಸ್ವ ಸಹಾಯ ಸಂಘ, ಮೈಕ್ರೊ ಪೈನಾನ್ಸ್ ,ಮತ್ತು ದಮ೯ಸ್ಥಳ ಸಂಘಗಳ ವಾರದ ಹಣದ ಕಂತು ಕಟ್ಟುವುದು ತಾತ್ಕಾಲಿಕವಾಗಿ ಮುಂದೆ ಹೋಗಿದ್ದು ದೊಡ್ಡ ನಿರಾಳ ಅನ್ನಿಸಿದೆ.

ಸಕಾ೯ರದ ಪಡಿತರ ಬಡವ,ಮಧ್ಯಮವರ್ಗದವರಿಗೆ ದೊಡ್ಡ ಪಾಲಿನ ಕೊಡುಗೆ ಆಗಿದೆ, ಒಂದೆರೆಡು ತಿಂಗಳಾದರೂ ಕಾಯುತ್ತೇವೆ ಈ ಕೊರಾನಾ ಮಾರಿ ನಿಗ೯ಮಿಸಿದರೆ ಸಾಕು ಅಂತಾರೆ.

ಮು೦ಗಾರು ಮೊದಲಿನ ಕೃಷಿ ತಯಾರಿ ಕೆಲಸ, ಕಟ್ಟಿಗೆ ಸಂಗ್ರಹ, ಹಪ್ಪಳ ಉಪ್ಪಿನ ಕಾಯಿ ತಯಾರಿಗಳಲ್ಲಿ ಇದ್ದಾರೆ.

ಮದುವೆ ಮನೆಗಳು ರದ್ದಾಗಿರುವುದರಿಂದ ತಿರುಗಾಟ ಉಳಿಯಿತು, ಹಣನೂ ಉಳಿಯಿತು ಎನ್ನುವ ಮಾತು ಇದೆ.

ಇದರ ಮದ್ಯೆ ಸಣ್ಣಪುಟ್ಟ ಖಾಯಿಲೆ ಎಲ್ಲಿ ಓಡಿ ಹೋಯಿತು ಗೊತ್ತಿಲ್ಲ ,ಸುಮಾರು ಒಂದು ತಿಂಗಳಿ೦ದ ಊರಲ್ಲಿ ಎಲ್ಲರೂ ಆರೋಗ್ಯವಾಗಿದ್ದಾರೆ, ಸಣ್ಣಪುಟ್ಟ ಮನೆ ಮದ್ದು ಸಾಕಾಗಿದೆ.

ಕುಡುಕರಾಗಿದ್ದವರು ಈಗ ಮನೇಲಿ ಇರುವ ಅಬ್ಯಾಸ ಆಗಿದೆ, ಆರೋಗ್ಯ ಸುಧಾರಿಸಿದೆ ಎಂದು ಹೇಳುತ್ತಾರೆ.

ಆದರೆ ನಗರ ಪ್ರದೇಶದ ಕಥೆ ಏನು ಅಲ್ಲಿ ಬಡವರ ಸಂಖ್ಯೆ ಎಷ್ಟು? ಈ ಬಗ್ಗೆ ಮಾಹಿತಿ ಇದಿಯಾ? ಒಂದೇ ಮನೆಗೆ ವಿವಿಧ ದಾನಿಗಳಿಂದ 10 ಕ್ಕೂ ಹೆಚ್ಚು ಆಹಾರದ ಕಿಟ್ ಕೊಟ್ಟರೆ ಇದರಿಂದ ಏನು ಸಾಧಿಸಿದಂತಾಯಿತು?

ಉಚಿತ ಪಡೆಯಲು ಬರುವವರಿಗೆ ಕೊರಾನ ವೈರಸ್ ಹರಡದಂತೆ ತಡೆಯಬೇಕಾದ ಪರಸ್ಪರ ಸಾಮಾಜಿಕ ಅಂತರ ಕಾಪಾಡುವ ಸಾಮಾನ್ಯ ಜ್ಞಾನವು ಇಲ್ಲವಾಗಿದೆ. ಅಥವ ಉಚಿತ ವಸ್ತು ಪಡೆಯುವ ಹಪಾಹಪಿಯು ಇದ್ದೀತು.

ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಿದ್ದರಿಂದ ಹಿಂದಿನ ಅವದಿಯ ಅಧ್ಯಕ್ಷರು, ಸದಸ್ಯರಿಗೆ ಹುಮ್ಮಸ್ಸು ಇಲ್ಲ, ಮೇನಲ್ಲಿ ನಡೆಯಬೇಕಾದ ಚುನಾವಣೆ ಮು೦ದಿನ ನವೆಂಬರ್ ಗೆ ಹೋಗುತ್ತಿದೆ, ಮೀಸಲಾತಿ ಬದಲಿಸಲು ಸಕಾ೯ರ ಸುಗ್ರೀವಾಜ್ಞೆ ತಂದಿದ್ದಾರೆ,ಇದರಿಂದ ಯಾರು ಎಲ್ಲಿ೦ದ ಸ್ಪದೆ೯ ಗೊತ್ತಿಲ್ಲ ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಆಹಾರ ಕಿಟ್ ನೀಡಿ ಪ್ರಚಾರ ಪಡೆಯುವ ದಾನಶೂರರು ಕಡಿಮೆ ಅನ್ನುವುದೂ ನಿರಾಕರಿಸುವಂತಿಲ್ಲ.

ಪ್ರಚಾರಕ್ಕಾಗಿ ದಾನ ಮಾಡುವವರಿಂದ ಮತ್ತು ಉಚಿತವಾಗಿ ಸಿಗುತ್ತದೆಂದು ಹಪಾಹಪಿಯಿ೦ದ ಕೊರಾನ ಕಾಯಿಲೆಗೆ ಪರಿಹಾರಕ್ಕಿಂತ ಈ ಖಾಯಿಲೆ ಸಾಮೂಹಿಕವಾಗಿ ಹರಡುವ ಅಪಾಯವೇ ಹೆಚ್ಚು ,ಈ ಬಗ್ಗೆ ಸೂಕ್ತ ತೀಮಾ೯ನ ಸಕಾ೯ರ ಕೈಗೊಳ್ಳಲೇಬೇಕು.

Be the first to comment

Leave a Reply

Your email address will not be published.


*