ಖಾನಾಪೂರ್ ಗೊಶಾಲೆ, ಪಿಹೆಚ್ ಸಿ ಸೇರಿ ವಿವಿಧ ಸ್ಥಳ ಶಾಸಕ ಖಂಡ್ರೆ ಭೇಟಿ || ಲಾಕ್ ಡೌನ್ ಸ್ಥಿತಿಗತಿಯ ಅವಲೋಕನ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಆಗದಿರಲಿ

ಭಾಲ್ಕಿ:-ಪಟ್ಟಣದ ತರಕಾರಿ ಸಂತೆ, ಗ್ರಾಮೀಣ ಭಾಗದಲ್ಲಿನ ನಾನಾ ಆರೋಗ್ಯ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ *ಖಾನಾಪೂರ್ ಗೊಶಾಲೆಗೆ ಸೋಮವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಲಾಕ್ ಡೌನ್ ಸಂದರ್ಭದಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.

ರೈತರು ಬೆಳೆದ ತರಕಾರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ವಿಷಯ ತಿಳಿದು ಬೆಳ್ಳಂಬೆಳ್ಳಗ್ಗೆ ಪಟ್ಟಣದ ಸತ್ಯನಿಕೇತನ ಆವರಣದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ತರಕಾರಿ ಸಂತೆಗೆ ಭೇಟಿ ನೀಡಿ ನಾನಾ ಭಾಗಗಳಿಂದ ರೈತರು ತಂದಿರುವ ಎಲ್ಲ ಬಗೆಯ ತರಕಾರಿ ಶಾಸಕರು ಸ್ವಂತ ಹಣದಿಂದ ಖರೀದಿ ಮಾಡಿ ತರಕಾರಿ ಬೆಳೆದ ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ಧೈರ್ಯ ತುಂಬಿದರು

ಅಲ್ಲಿಂದ ಅಧಿಕಾರಿಗಳ ತಂಡದೊಂದಿಗೆ ಡೋಣಗಾಪೂರ, ಬೀರಿ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ, ನಿಟ್ಟೂರ(ಬಿ) ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಹಾಗೂ ಹೊಂ ಕ್ವಾರಂಟೈನ್ ನಲ್ಲಿರುವ ಜನರ ಮಾಹಿತಿ ಪಡೆದು ಕೊಂಡು ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ಜನರ ಮೇಲೆ ನಿಗಾಯಿಡಬೇಕು. ಹಾಗೂ ಹೊಂ ಕ್ವಾರಂಟೈನ್ ಪೂರ್ಣಗೊಳಿಸಿದ ಜನರ ಮೇಲೂ ಕೂಡಾ ತೀವ್ರ ನಿಗಾ ಇರಿಸಬೇಕು ಎಂದರು. ಆಸ್ಪತ್ರೆಗಳಲ್ಲಿ ಔಷಧಿ, ಮಾಸ್ಕ್, ಗ್ಲೌಸ್, ಸಾನಿಟೈಸರ್ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಥರ್ಮಾ ಸ್ಕ್ಯಾನರ್ ಕಡ್ಡಾಯವಾಗಿ ಎಲ್ಲ ಆಸ್ಪತ್ರೆಗಳಲ್ಲಿ ಇಟ್ಟುಕೊಂಡಿರಬೇಕು ಎಂದು ತಿಳಿಸಿದರು

ಬಳಿಕ ಖಾನಾಪೂರ್(ಮೈಲಾರ್) ಮಲ್ಲಣ್ಣ ದೇಗುಲ ಸಮೀಪದ ಗೊಶಾಲೆಗೆ ಭೇಟಿ ನೀಡಿ ಜಾನುವಾರುಗಳ ವಿವರ ಪಡೆದು ಕೊಂಡು ಬೇಸಿಗೆ ಸಮಯವಾಗಿದ್ದು ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಜಾನುವಾರುಗಳ ಉತ್ತಮ ಬೆಳವಣಿಗೆಗಾಗಿ ಕೂಡಲೇ ೧೦ ಟನ್ ಆದರೂ ಪಶು ಆಹಾರ ಖರೀದಿಸುಂತೆ ಶಾಸಕರು ಸೂಚನೆ ನೀಡಿದರು

ಈ ಸಂದರ್ಭದಲ್ಲಿ ತಹಸೀಲ್ದಾರ ಅಣ್ಣಾರಾವ ಪಾಟೀಲ್, ಡಿವೈಎಸ್ಪಿ ಡಾ.ದೇವರಾಜ ಬಿ, ತಾಲೂಕು‌ ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನೀರಗೂಡೆ, ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಣಮಂತರಾವ ಚವ್ಹಾಣ, ಮಳಚಾಪೂರ ಗ್ರಾಪಂ ಉಪಾಧ್ಯಕ್ಷ ಧನರಾಜ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಪ್ರಭುಶಂಕರ ಮಾಣಿಕರಾವ ಪಾಟೀಲ್, ಸಂಗಮೇಶ ಪಾಟೀಲ್, ರಾಜಕುಮಾರ ಪಾಟೀಲ್, ಕೋನಮೇಳಕುಂದಾ ಗ್ರಾಪಂ ಅಧ್ಯಕ್ಷ ಶಶಿಧರ ಕೋಸಂಬೆ, ಮದಕಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಮೇಶ ಮದಕಟ್ಟಿ, ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ನರಸಪ್ಪ, ಮಲ್ಲಣ್ಣ ದೇಗುಲದ‌ ವ್ಯವಸ್ಥಾಪಕ ಸಂಜೀವಕುಮಾರ್ ಸುಂಧಾಳ ಇದ್ದರು.

Be the first to comment

Leave a Reply

Your email address will not be published.


*