ಲಾಕ್ ಡೌನ್ ಎಫೆಕ್ಟ್ :ಸಂಕಷ್ಟದಲ್ಲಿ ಶಾಮಿಯಾನ ಸಪ್ಲ್ಯೆಯರ್ಸ್, ಅಗತ್ಯ ನೆರವಿಗಾಗಿ ಮನವಿ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ, ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು,ಅಗತ್ಯ ನೆರವು ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರಿಗೆ ಮನವಿ ಸಲ್ಲಿಸಿದರು.ನಂತರ ಸಂಘದ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ ಮಾತನಾಡಿ ಕೊರೋನಾ ಲಾಕ್ ಡೌನ್ ಪರಿಣಾಮ,ರಾಜ್ಯದ ಬಹುತೇಕ ಶಾಮಿಯಾನ ಸಪ್ಲ್ಯೇಯರ್ಸ್ ವೃತ್ತಿಭಾಂದವರು ಆದಾಯವಿಲ್ಲದೇ ತೀರಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಬ್ಯಾಂಕ್ ಸಾಲ,ಖಾಸಗೀ ಲೇವಾದೇವಿ,ಇತರೆ ಸಾಲಗಾರರಿಗೆ ಸಾಲ ಮರುಪಾವತಿಸಲಾಗದೇ ಪರಿತಪಿಸುವಂತಾಗಿದೆ.ಕಾರಣ ಸಕಾ೯ರ ಶ್ರೀಘ್ರವೇ ಅಗತ್ಯ ನೆರವನ್ನು ನೀಡಬೇಕಾಗಿದೆ ಎಂದರು. ಸಕಾ೯ರ ಕಾರ್ಮಿಕರಿಗೆ,ಕೃಷಿಕರಿಗೆ, ಬಡವರಿಗೆ,ಜನಧನ್ ಖಾತೆಗಳಿಗೆ ಹಣ,ಹಾಲು ರೇಷನ್ ಕೊಡುತ್ತಿದೆ. ಶಾಮಿಯಾನ ವೃತ್ತಿಯವರನ್ನು ನಿರ್ಲಕ್ಷಿಸುತ್ತಿದೆ,ವರ್ಷದಲ್ಲಿ ನಾಲ್ಕು ತಿಂಗಳ ದುಡಿಮೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು.

ಕೊರೋನಾ ಮಹಾಮಾರಿಯಿಂದ ಸಣ್ಣ ಸಣ್ಣ ಅಂಗಡಿಯವರಿಗೆ ಜೀವನೋಪಾಯ ಹಾಗೂ ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟವಾಗಿದೆ.ಕಾಮಿ೯ಕ ವಗ೯ಕ್ಕೆ ಸೇರುವ ವೃತ್ತಿಬಾಂಧವರು ಸಂಕಷ್ಟದಲ್ಲಿದ್ದಾರೆ.ಅವರ ನೆರವಿಗೆ ಸರ್ಕಾರ ಮುಂದಾಗಬೇಕಿದೆ.ಈ ಸಂಬಂಧ ಶೀಘ್ರವೇ ಮುಖ್ಯಮಂತ್ರಿಗಳು, ಸಂಘಟನೆಯ ರಾಜ್ಯ ಮುಖಂಡರನ್ನು ಸಭೆ ಕರೆದು ಸಮಾಲೋಚನೆ ನಡೆಸಬೇಕಿದೆ ಎಂದರು.ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಕೆಲ ಜಿಲ್ಲಾ ಮುಖಂಡರು, ಕೂಡ್ಲಿಗಿ ಪಟ್ಟಣ ಹಾಗೂ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*