ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ,ರಾಜ್ಯದಲ್ಲಿ ಮದ್ಯಮಾರಾಟ ನಿಷೇಧಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮಹಿಳೆಯರು ಮನವಿ ಮಾಡಿದ್ದಾರೆ,ಮನವಿಪತ್ರವನ್ನು ತಹಶಿಲ್ದಾರರಿಗೆ ನೀಡಿದರು.ಮಹಿಳಾ ಮುಖಂಡರಾದ ಎಂ.ಬಿ.ಕೊಟ್ರಮ್ಮ ಮಾತನಾಡಿ,ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯನಿಷೇಧ ಜಾರಿಯಲ್ಲಿದೆ.ಇದರಿಂದಾಗಿ ಮದ್ಯವ್ಯಸನಿಗಳ ಕುಟುಂಬಗಳು ಆಥಿ೯ಕ ನಷ್ಟದಿಂದ ಪಾರಾಗಿವೆ,ಕೌಟುಂಬಿಕ ಕಲಹ,ಅನಾರೋಗ್ಯ,ಅಪರಾಧ ಪ್ರಕರಣಗಳು ತಗ್ಗಿವೆ.ಮದ್ಯ ನಿಷೇಧದಿಂದ ಸಾಮಾಜಿಕ ಸ್ವಾಸ್ಥ್ಯಸಾಧ್ಯವಾಗಿದೆ.ಮದ್ಯ ವ್ಯೆಸನಿಗಳು ಸೇವನೆ ನಿರಾಕರಣೆ ಸಂಕಲ್ಪ ತೋರಲು ಅನುಕೂಲ ಸನ್ನಿವೇಶ ಸೃಷ್ಟಿ ಯಾಗಿದೆ.ಕಾರಣ ಮುಖ್ಯಮಂತ್ರಿಗಳು ಶೀಘ್ರವೇ ಮದ್ಯ ಮಾರಾಟ ನಿಷೇಧಿಸಿ ಮಹತ್ವದ ಆದೇಶ ಜಾರಿತರಬೇಕೆಂದರು.ರೈತ ಮುಖಂಡರಾದ ಎಮ್.ರೇಣುಕಮ್ಮ ಮಾತನಾಡಿ ಕೇರಳ,ಗುಜರತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮದ್ಯ ಮಾರಾಟ ಸಂಪೂಣ೯ ನಿಷೇಧಿಸಲಾಗಿದೆ,ರೈತ,ಕಾಮಿ೯ಕವಗ೯ದ ಆಥಿ೯ಕ ಸಭಲೀಕರಣಕ್ಕೆ,ಸವ೯ತೋಮುಖ ಅಭಿವೃದ್ಧಿಗೆ ಮದ್ಯ ನಿಷೇಧ ಅನಿವಾಯ೯.ಸಕಾ೯ರ ಶೀಘ್ರವೇ ಜಾರಿ ತರಬೇಕು ಎಂದರು.ರೈತ ಮುಖಂಡರಾದ ಎ.ಚೈತ್ರಾ,ಗ್ರಾಕೋಸ್ ಅಕ್ಕಮಹಾದೇವಿ,ಕೊಟ್ರೇಶ,ಮಲ್ಲೇಶ ಮುಂತಾದವರು ಉಪಸ್ಥಿತರಿದ್ದರು.ತಹಶಿಲ್ದಾರರಾದ ಆಶಪ್ಪ ಪೂಜಾರ್ ಮನವಿ ಸ್ವೀಕರಿಸಿದರು.
Be the first to comment