ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಶಹಾಪುರ
ಶಹಾಪೂರ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಅಭಿಮಾನಿ ಬಳಗದ ವತಿಯಿಂದ ಕರೋನ ವೈರಸ್ Covid – 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಸಾವಿರಕ್ಕೂ ಹೆಚ್ಚು ಕಿಟ್ ಗಳನ್ನು ಮಾಡಿ ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಜನಪ್ರಿಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ರವರ ಸಮ್ಮುಖದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪೋ ಪಾಟೀಲ, ಪಿ.ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವಾಮನರಾವು ದೇಶಪಾಂಡೆ, ಬಾಪುಗೌಡ ಪಾಟೀಲ ಡಿಸಿಸಿ ಬ್ಯಾಂಕ್ ನಿರ್ದೇಶಕ ಕಲಬುರ್ಗಿ, ಸಂಜೀವುರಾವ ಕುಲಕರ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಎಸ್ ಪಾಟೀಲ ಚಿಂಚೋಳಿ,ಬ್ಲಾಕ್ ಉಪಾಧ್ಯಕ್ಷ ಸಾಹೇಬಲಾಲ ಆಂದೇಲಿ ಪುರಸಭೆ ಸದಸ್ಯರಾದ ಮಹಿಪಾಲರೆಡ್ಡಿ ದಿಗ್ಗಾವಿ ರಾಘವೇಂದ್ರ ದೇಶಪಾಂಡೆ, ದೇವಪ್ಪ ಮ್ಯಾಗೇರಿ, ಬಸವರಾಜ ಬಸರಿಗಿಡ, ರಹೀಮಾನ ಪಟೇಲ್ ಯಲಗೋಡ, ಶಿವಶಂಕರ ಖಾನಾಪುರ, ಸೋಮಲಿಂಗಪ್ಪ ದೊಡ್ಡಮನಿ, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
Be the first to comment