ರಾಜ್ಯ ಸುದ್ದಿಗಳು
ಉಡುಪಿ:- ದೇಶಾದ್ಯಂತ ಲಾಕ್ ಡೌನ ಆಗಿರುವದರಿಂದ ನಿತ್ಯ ಆಟೋ ದುಡಿಮೆ ಮೇಲೆ ಜೀವ ಸಾಗಿಸುತ್ತಿದ ಆಟೋ ಚಾಲಕರಿಗೆ ಕಿಲ್ಲರ್ ಕರೋನದಿಂದ ಒಂದು ಒತ್ತು ಊಟವು ಕಷ್ಟವಾಗಿದೆ ಆಟೋ ಚಾಲಕರಿಗೆ ನಾಡೋಜ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲೆಯ ಆಟೋ ರಿಕ್ಷಾ ಚಾಲಕರಿಗೆ ಆಹಾರ ಸಾಮಾಗ್ರಿಗಳ ಸುಮಾರು 6000 ಕಿಟ್’ಗಳನ್ನು ತಾಲೂಕು ಕಛೇರಿಯಲ್ಲಿ ವಿತರಿಸಲಾಯಿತು.
ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟನೆ ಮಾಡಿದ ಶಾಸಕರ ರಘುಪತಿ ಭಟ್
ಆಹಾರದ ಕಿಟ್ ವಿತರಸಿದ ಮೊಗವೀರ ಮಾಹಾಜನ ಸಂಘದ ಅಧ್ಯಕರಾದ ಜಯ ಕೋಟ್ಯಾನ್,ಶಾಸಕ ರಘುಪತಿ ಭಟ್,SP ವಿಷ್ಣುವರ್ಧನ್ ತಹಶಿಲ್ದಾರರ ಪ್ರದೀಪ ಕುರ್ಡೇಕ್ ಇತರರು
ಮೊಗವೀರರ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್ ಇವರು ಕಾರ್ಯಕ್ರಮ ಉದ್ಘಾಟಿಸಿದ್ದು, ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಕಿಟ್ ವಿತರಣೆ ಮಾಡಿದರು. ಉಡುಪಿ ಜಿಲ್ಲಾ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಉಡುಪಿ ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಮಹೇಶ್ ಠಾಕೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ತಹಶಿಲ್ದಾರರಾದ ಪ್ರದೀಪ್ ಕುರ್ಡೇಕರ್,ಆರ್.ಐ.ವಿಶ್ವನಾಥ್, ಕೃಷ್ಣ ಮೂರ್ತಿ ಆಚಾರ್ಯ ಸಮಾಜಸೇವಕರು ಹಾಗೂ ಇನ್ನಿತರ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಸಾವಿರಾರು ಬಡ ಜನರ ಪಾಲಿಗೆ ನೆರವಾದ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅವರಿಗೆ ಮಹೇಶ್ ಠಾಕೂರ್ ಇವರು ಅಭಿನಂದನೆಗಳನ್ನು ಸಲ್ಲಿಸಿದರು.
Be the first to comment