ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಕರ್ನಾಟಕ
ಯಾದಗಿರಿ, ರಾಯಚೂರು,ಬಳ್ಳಾರಿ ಕಲಬುರ್ಗಿ ಜಿಲ್ಲೆಗಳ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 700 ಕ್ಕೂ ಹೆಚ್ಚು ಜನ ಕಟ್ಟಡ ಕಾರ್ಮಿಕರು ಗುಡಿಸಲು, ತಡಿಕೆಗಳಲ್ಲಿ ವಾಸಮಾಡುತ್ತಿದ್ದವರಿಗೆ ಕಳೆದ 24-3-2020 ರಿಂದ ಕೆಲಸವಿಲ್ಲ, ಊಟವಿಲ್ಲಾ, ಇವರನ್ನು ಕೇಳುವವರಿಲ್ಲ.
ಮಹಿಳೆಯರು ಮಕ್ಕಳು ವೃದ್ಧರು ಬಹಳ ನೋವಿನಿಂದ ಬಳಲುತ್ತಿದ್ದರು.
ಇಂತಹ ನೊಂದ ಕುಟುಂಬಗಳನ್ನು ಗುರುತಿಸಿ ಬಹುಜನ ಸಮಾಜ ಪಾರ್ಟಿಯ ಶ್ರೀ ಮಾರಸಂದ್ರ ಮುನಿಯಪ್ಪ, ಶ್ರೀ ಆರ್. ಮುನಿಯಪ್ಪ, ಶ್ರೀ ವಿ.ವೇಲು,
ಶ್ರೀ ಎಂ.ಸಂದೀಪ್, ಶ್ರೀ ಕೆ.ಮುನಿಯಪ್ಪ,
ಶ್ರೀ ರವಿಕುಮಾರ್ ಮುಂತಾದ ನಾಯಕರ ನಿಯೋಗವು ಇಂದು 20-04-2020
ಬಿಬಿಎಂಪಿ ಅಧಿಕಾರಿಗಳಾದ, ಜಂಟಿ ಆಯುಕ್ತರು(ಯಲಹಂಕ ವಲಯ – ಬ್ಯಾಟರಾಯನಪುರ ಅಸೆಂಬ್ಲಿಯ ), ಎ.ಆರ್.ಒ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಇವರ ಸಿಬ್ಬಂದಿಯನ್ನು ಮೇಲ್ಕಂಡ ಕಟ್ಟಡ ಕಾರ್ಮಿಕರ ವಾಸಸ್ಥಳಗಳಿಗೆ ಕರೆದುಕೊಂಡು ಹೋಗಿ ತುರ್ತಾಗಿ ಅವರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮತ್ತು ವೈದ್ಯಕೀಯ ನೆರವು ನೀಡುವಂತೆ ಒತ್ತಾಯಿಸಲಾಯಿತು.
ಬಿಬಿಎಂಪಿ ಅಧಿಕಾರಿಗಳು ಅಗತ್ಯ ನೆರವು ಒದಗಿಸಿಕೊಡುವುದಾಗಿ ಒಪ್ಪಿರುತ್ತಾರೆ.
ಈ ಮೊದಲು ಮಾನ್ಯ ಬಿಬಿಎಂಪಿ ಆಯುಕ್ತರಿಗೆ ಮೇಲ್ಕಂಡ ಪ್ರದೇಶದ ಜನರ ಸಮಸ್ಯೆಗಳನ್ನು ಪಟ್ಟಿಮಾಡಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಲಾಗಿತ್ತು.
ಮಾನ್ಯ ಆಯುಕ್ತರು ಆದೇಶದ ಮೇಲೆ ಅಧಿಕಾರಿಗಳು ಸ್ಥಳ ಪರಿಶೀಲನಾ ನಡೆಸಿದರು.
Be the first to comment