ಜೀಲ್ಲಾ ಸುದ್ದಿಗಳು
ಧಾರವಾಡ ವರದಿ :ಕೃಷಿ ವಿಶ್ವವಿದ್ಯಾಲಯದ ಕೃಷಿ ಸಮುದಾಯ ಬಾನುಲಿ ಕೇಂದ್ರದಿಂದ ಹಲವಾರು ರೈತಭಾಂಧವರಿಗೆ ವಿಶೇಷ ಕಾರ್ಯಕ್ರಮಗಳು ಪ್ರಸಾವಾಗುತ್ತಿವೆ ಈ ನಿಟ್ಟಿನಲ್ಲಿ ಕೋರೋನಾ ವೈರಸ್ ನ ಬೀತಿಯಲ್ಲಿ ರಾಜ್ಯದ ರೈತರಿದ್ದಾರೆ. ಭಯಪಡಬೇಡಿ ಮಾನ್ಯ ಕೃಷಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ದಿನಾಂಕ 16_4_2020 ರಿಂದ ಕೃಷಿ ವಿಶ್ವವಿದ್ಯಾಲಯದ ಆಡಳಿತ ಕಾಯಾ೯ಲಯದಲ್ಲಿ ಅಗ್ರೀ ವಾರ್ ರೋಮ್ ರೈತರ ಸಮಸ್ಯೆಯನ್ನು ಸ್ಪಂದಿಸಲು ಸಜ್ಜಾಗಿದೆ ರೈತರ ಸಂಕಷ್ಟ, ಸಮಸ್ಯೆ, ಪರಿಹಾರ, ಮತ್ತು ತರಕಾರಿ ಬೆಳೆಗಾರರು ಹಣ್ಣು ಬೆಳೆಗಾರರು, ಸಮಸ್ಯೆ ಸ್ಪಂದಿಸಲು ಕೃಷಿ ವಿಶ್ವವಿದ್ಯಾಲಯದಲ್ಲಿ ಅಗ್ರೀ ವಾರ್ ರೋಮ್ ಕಾರ್ಯನಿರತವಾಗಿದೆ ಇಲ್ಲಿ ನುರಿತ ವಿಜ್ಞಾನಿಗಳು ,ತಜ್ಞರು, ರೈತರ ಸಮಸ್ಯೆಗಳಿಗೆ ನೇರವಾಗಿ ಉತ್ತರವನ್ನು ನೀಡುತ್ತಿದ್ದಾರೆ. ಈಗಾಗಲೇ ನೂರಾರು ರೈತರು ತಮ್ಮ ಕೃಷಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ನಮ್ಮ ಕೃಷಿ ವಿಸ್ತಾರಣಾ ನಿದೇ೯ಶಕರಾದ ಡಾ ರಮೇಶ್ ಬಾಬು ಕೃಷಿ ಸಮುದಾಯ ಬಾನುಲಿ ಕೇಂದ್ರದಲ್ಲಿ ಇಂದು ಸಂದರ್ಶನ ಕಾರ್ಯಕ್ರಮದಲ್ಲಿ ನಿಲಯದ ಮುಖ್ಯಸ್ಥರಾದ ಡಾ ದೇವೇಂದ್ರಪ್ಪ ಎಸ್ ಮತ್ತು ಕ್ಷೇತ್ರ ಅನುವುಗಾರರಾದ ಶ್ರೀ ಬಸವರಾಜ ಹಿತ್ತಲಮನಿ ಹಾಗೂ ಉದ್ಗೂಷಕೀ ಶ್ರೀಮತಿ ನಿರ್ಮಲಾ ಹನಮರ ಅವರೂಂದಿಗೆ ಸಂದರ್ಶನ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.
ಅದರಂತೆ ಅಗ್ರೀ ವಾರ್ ರೋಮ್ ಗೆ ಸತತವಾಗಿ ಧಾರವಾಡ, ಗದಗ,ಬೆಳಗಾವಿ, ಹಾವೇರಿ ರೈತರು ತಾವು ಬೆಳೆದ ಗೋವಿನಜೋಳ,ಮೆಣಸಿನಕಾಯಿ, ಶುಂಠಿ ಇನ್ನೀತರ ಬೆಳೆಗಳ ಕುರಿತು ಮಾಹಿತಿಯನ್ನು ಪಡೆದಿದ್ದಾರೆ ಅವರಿಗೆ ನಾವು ಸಕಾ೯ರದ ಸಂಸ್ಥೆಗಳಿಂದ ಹಳ್ಳಿಗಳಲ್ಲಿ ಸ್ಥಾಪಿಸಿದ ಆಹಾರ ಉತ್ಪಾದಕರ ಮಾಹಿತಿಯನ್ನು ನೀಡುದ್ದೆವೆ ಇನ್ನೂಳಿದ ರೈತರು ತಮ್ಮ ಕೃಷಿ ಸಮಸ್ಯೆಗಳನ್ನು ನಮ್ಮ ಅಗ್ರೀ ವಾರ್ ರೋಮ್ ಉಚಿತ ಸಂಖ್ಯೆ 1800 425 1150 ಸಂಪರ್ಕ ಮಾಡಿ ಎಂದು ತಿಳಿಸಿದರು….
ಕೃಷಿ ಸಮುದಾಯ ಬಾನುಲಿ ಕೇಂದ್ರದ ಬಸವರಾಜ ಹಿತ್ತಲಮನಿ ಮತ್ತು ಡಾ ದೇವೇಂದ್ರಪ್ಪ ಎಸ್ ನಿರಂತರವಾಗಿ ರೈತರಿಗೆ ವಿಶೇಷ ಕಾರ್ಯಕ್ರಮ ಮುಟ್ಟಿಸುತ್ತಿದ್ದಾರೆ.
Be the first to comment