ರಾಜ್ಯದ ಸುದ್ದಿಗಳು
ಬೆಂಗಳೂರು: ಲಾಕ್ಡೌನ್ಗೆ ಸಂಬಂಧಿಸಿದಂತೆ ಇವತ್ತು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಮೇ 3 ನೇ ತಾರೀಖಿನವರೆಗೂ ಲಾಕ್ಡೌನ್ನನ್ನ ವಿಸ್ತರಣೆ ಮಾಡಲಾಗಿದೆ. ನಾಳೆಯಿಂದ ಲಾಕ್ಡೌನ್ನ ನಿಯಮಗಳನ್ನು ಇನ್ನಷ್ಟು ಬಲವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ವೇಳೆ, ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಗಳಿಗೆ ಯಾವುದೇ ನಿರ್ಬಂಧ ಇರೋದಿಲ್ಲ ಎಂದು ತಿಳಿಸಿದ ಸಚಿವ ಮಾಧುಸ್ವಾಮಿ, ಕೈಗಾರಿಕಾ ಕ್ಷೇತ್ರಗಳಿಗೆ ವಿನಾಯಿತಿ ಇಲ್ಲ ಎಂದಿದ್ದಾರೆ.
ಗಲಭೆಕೋರರನ್ನು ಮಟ್ಟಹಾಕಲು ಬರುತ್ತಿದೆ ಸುಗ್ರೀವಾಜ್ಞೆ
ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಯೊಂದನ್ನು ಜಾರಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗಗಳ ಅಧಿನಿಯಮ ಹೆಸರಿನಲ್ಲಿ ಇನ್ನೆರಡು ದಿನದೊಳಗೆ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ನಿನ್ನೆ ಪಾದರಾಯನಪುರದಲ್ಲಿ ನಡೆದ ಘಟನೆ ಮರುಕಳಿಸಬಾರದು ಎನ್ನುವ ಕಾರಣಕ್ಕೆ ಆರೋಗ್ಯ ಸಿಬ್ಬಂದಿ ರಕ್ಷಣೆಗೆ ಸುಗ್ರಿವಾಜ್ಞೆ ತರಲಾಗುತ್ತಿದೆಯಂತೆ. ಕೇರಳ ಹಾಗೂ ಉತ್ತರಪ್ರದೇಶದಲ್ಲಿ ಈಗಾಗಲೇ ಜಾರಿಗೆ ತರಲಾಗಿರುವ ಕಾಯಿದೆಯ ರೀತಿಯಲ್ಲಿಯೇ ರಾಜ್ಯದಲ್ಲಿಯು ಸಾಂಕ್ರಾಮಿಕ ಕಾಯಿದೆ ಅಧಿನಿಯಮ ಜಾರಿಗೆ ಪ್ರಯತ್ನಸಲಾಗುತ್ತಿದೆ. ಈ ಕಾಯಿದೆ ಸುಗ್ರೀವಾಜ್ಞೆಯ ಮೂಲಕ ಹೊರಬಂದ ಪಕ್ಷದಲ್ಲಿ, ಗಲಭೆಕೋರರಿಗೆ 2 ವರ್ಷ ಶಿಕ್ಷೆ ವಿಧಿಸುವ ಹಾಗೂ ಆಸ್ತಿಪಾಸ್ತಿ ಮುಟ್ಟುಗೋಲು ಹಾಕುವ ಅವಕಾಶ ಕಾನೂನು ಬದ್ಧ ಸಂಸ್ಥೆಗಳಿಗೆ ಸಿಗಲಿದೆ. (WFT ಏಜೆನ್ಸಿ)
Be the first to comment