ಅಪರಿಚಿತ ವ್ಯಕ್ತಿ ಗ್ರಾಮದ ಅಂಗಡಿಗಳಿಗೆ ಬೇಟಿ ಸೋಶಿಯಲ್ ಮೀಡಿಯಾದ ಹಾವಳಿಗೆ ಗ್ರಾಮದಲ್ಲಿ ಕರೋನಾ ಭಯದ ಭೀತಿ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ಎಲ್ಲಿ ನೋಡಿದರೋ ಕರೋನಾ ಕರೋನಾ ಬೆಳಗ್ಗೆ ಎದ್ದರೆ ರಾತ್ರಿ ಮಲಗಿಕೊಳ್ಳುವರೆಗೂ ಇಡೀ ಜಗತ್ತಿನ್ಯಾದಂತ ಸದ್ಯ ಜನರನ್ನು ಕಾಡುತ್ತಿರುವ ಕರೋನಾ ವೈರಸ್ ರೋಗ ಇಷ್ಟುದಿನಗಳ ಕಾಲ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ವಿದೇಶದಿಂದ ಬಂದವರಿಂದ ಹರಡುತ್ತಿರುವದು ಕಂಡು ಬರುತ್ತಿತ್ತು.

ಆದ್ರೆ ಈಗ ಹಳ್ಳಿಗಳಲ್ಲಿ ಕೂಡ ಜನರು ಕರೋನಾ ವೈರಸ್ ಸೊಂಕು ಹರಡುತ್ತಿರುವದರಿಂದ ಜನರನ್ನು ಕಾಡಲಾರಂಭಿಸಿದೆ.

ಇದರಿಂದ ಗ್ರಾಮೀಣ ಭಾಗದಲ್ಲಿ ಹೊಸ ಮುಖದ ಜನರು ಗ್ರಾಮಕ್ಕೆ ಬಂದರೆ ಸಾಕು ಭಯಭೀತರಾಗುವ ವಾತವಾರಣ ನಿರ್ಮಾಣವಾಗುತ್ತಿದೆ ಇನ್ನೂ ಸೋಶಿಯಲ್ ಮೀಡಿಯಾದ ಹಾವಳಿಯಿಂದ ಕರೋನಾ ವೈರಸ್ ಪಾಜಿಟಿವ್ ಬಂದಿರುವ ಜನರು ತಪ್ಪಿಸಿಕೊಂಡಿದ್ದ ರೆ, ಅವರಿಂದ ರೋಗ ಹರಡುತ್ತದೆ ಎಂದು ಅಪರಿಚಿತ ವ್ಯಕ್ತಿಗಳ ಭಾವಚಿತ್ರ ವಾಟ್ಸಪ್‍ನಲ್ಲಿ ಹರಿದಾಡುತ್ತಿರುವದು ಒಂದೇಡೆಯಾದ್ರೆ ನಮ್ಮ ನಮ್ಮ ಗ್ರಾಮಕ್ಕೆ ಬಂದಿದ್ದಾನೆ ಎಂಬ ಆಡಿಯೋ ಹರಿದಾಡುತ್ತಿರುವದರಿಂದ ಗ್ರಾಮಸ್ಥರೆಲ್ಲಾ ಭಯಬೀತಗೊಂಡು ಆತಂಕಗೊಂಡಿರುವ ಘಟನೆ ಜರುಗಿದೆ ,

ಸಮೀಪದ ಯಾಳಗಿ ಗ್ರಾಮದಲ್ಲಿ ಶನಿವಾರ ಸಾಯಂಕಾಲ 6 ಗಂಟೆಯ ವೇಳೆಗೆ ಒಬ್ಬ ಅಪರಿಚಿತ ವ್ಯಕ್ತಿ ಬೈಕನಲ್ಲಿ ಬಂದು ಗ್ರಾಮದ ಅಂಗಡಿಗಳಿಗೆ ತೆರಳಿ ಹೋಗಿರುವ ಘಟನೆ ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದರಿಂದ ಕರೋನಾ ಪಾಸಿಟಿವ್ ಬಂದ ವ್ಯಕ್ತಿಯೇ ಬಂದಿದ್ದಾನೆ ಇದರಿಂದ ಗ್ರಾಮಕ್ಕೆ ಕರೋನಾ ವೈರಸ್ ಹರಡುತ್ತದೆ ಎಂದು ಇಡೀ ಗ್ರಾಮಕ್ಕೆ ಗ್ರಾಮವೇ ಸಿಲ್‍ಡೌನ ಆದಂತೆ ಬಾಸವಾಗುತ್ತಿದೆ.

ಇನ್ನೂ ಸಿಂದಗಿ –ಕೆಂಭಾವಿ ರಸ್ತೆಯಿಂದಲೇ ಹೆಚ್ಚು ಜನ ಬರುತ್ತಿದ್ದಾರೆ ಎಂದು ರಸ್ತೆಯನ್ನೆ ಗ್ರಾಮಸ್ಥರೆಲ್ಲಾ ಸೇರಿ ಬಂದ್ ಮಾಡಿದ್ದಾರೆ,
ಒಂದೇಡೆ ಜನರು ರೋಗ ಬರುವುದಕ್ಕಿಂತ ಸೊಶಿಯಲ್ ಮೀಡಿಯಾದಲ್ಲಿ ಹರಡುವ ಸುಳ್ಳು ಸುದ್ದಿಗಳಿಂದ ಆತಂಕಕ್ಕೆ ಒಳಗಾಗುತ್ತಿದ್ದು ಸಧ್ಯ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು,

ಸತ್ಯಾ ಸತ್ಯತೆ ತಿಳಿದುಕೊಳ್ಳಬೇಕು ಅನಾವಶ್ಯಕ ಮಾಹಿತಿಗಳಿಂದ ಭಯಬೀತರಾಗಬಾರದು ಸದ್ಯ ಲಾಕ್ ಡೌನ ಇದ್ದು ಜನತೆ ಮನೆಯಲ್ಲಿದ್ದು ಸುರಕ್ಷತೆಗೆ ಎಚ್ಚರವಹಿಸಬೇಕಿದೆ ,

ನಿನ್ನೆ ರಾತ್ರಿ ನಮ್ಮ ಗ್ರಾಮಕ್ಕೆ ಅಪರಿಚಿತ ವ್ಯಕ್ತಿ ಬಂದು ಅಂಗಡಿಗಳಿಗೆ ತಿರುಗಾಡಿ ಹೋಗಿದ್ದಾನೆ ಅವನು ಹೋದಮೇಲೆ ವಾಟ್ಸಪ್‍ನಲ್ಲಿ ಅವನ ಚಹರೆ ರೀತಿಯಲ್ಲಿ ಇರುವದರಿಂದ ಪೋಟೋ ಬಂದಿದೆ ಆದ್ದರಿಂದ ಅವನೇ ಬಂದಿದ್ದಾನೆ ಎಂದು ಜನರು ಮಾತನಾಡುತ್ತಿದ್ದಾರೆ, ಇದರಿಂದ ಕರೋನಾ ಸೊಂಕಿನ ವ್ಯಕ್ತಿ ಎಂದು ತಿಳಿದು ಭಯವಾಗುತ್ತಿದೆ, ಕೂಡಲೇ ಅಧಿಕಾರಿಗಳು ಪರಿಶೀಲನೆ ಮಾಡಿ ಜನರಲ್ಲಿ ಮೂಡಿರುವ ಭಯವನ್ನು ನಿವಾರಣೆ ಮಾಡಬೇಕು

➡️ಬಸವರಾಜಪ್ಪ ಇಂಡಿ
ಯಾಳಗಿ ನಿವಾಸಿ

ಅಂಗಡಿಗಳ ಮುಂದೆ ಇರುವ ಸಿಸಿಟಿವಿ ವಿಡಿಯೋ ನೋಡಿದ್ದೇವೆ ಅದು ಸರಿಯಾಗಿ ಮುಖ ಕಾಣುತ್ತಿಲ್ಲ ಪಾಜಿಟಿವ್ ಇರುವ ವ್ಯಕ್ತಿಗಳು ತಪ್ಪಿಸಿಕೊಳ್ಳುವದಕ್ಕೆ ಆಗುವದಿಲ್ಲ ಇದು ಶುದ್ದ ಸುಳ್ಳು ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಕರೋನಾ ವೈರಸ್ ಬಗ್ಗೆ ಎಚ್ಚರಿಕೆ ಇರಲಿ ಮನೆಯಲ್ಲಿರಿ ಸುರಕ್ಷತವಾಗಿರಿ ಸೊಶಿಯಲ್ ಮೀಡಿಯಾದ ಸುದ್ದಿಗಳನ್ನು ನಂಬಬೇಡಿ.

➡️ಡಾ: ಲಕ್ಷ್ಮಣ
ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಯಾಳಗಿ

Be the first to comment

Leave a Reply

Your email address will not be published.


*