ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು, ಮಾಕನಡಕು ಗ್ರಾಮ ಪಂಚಾಯ್ತಿಯಲ್ಲಿ ಕಳೆದ ಐದು ವಷ೯ಗಳಲ್ಲಿ ಹಲವು ಹಗರಣಗಳು ಜರುಗಿವೆ,ಸಂಬಂಧಿಸಿದಂತೆ ಅಧಿಕಾರಿಗಳಿಗೆ ದಾಖಲು ಸಮೇತ ದೂರು ನೀಡಲಾಗಿದೆ. ತನಿಖೆಯಾಗದಿದ್ದಲ್ಲಿ ಕಾನೂನಾತ್ಮಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು, ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಕಲ್ಪನಾ ಹೇಮೇಶಗೌಡ ಹೇಳಿಕೆ ನೀಡಿದ್ದಾರೆ.
ಅವರೊಂದಿಗೆ ಗ್ರಾಪಂ ಸದಸ್ಯ ಕುರಿಹಟ್ಟಿ ಓಬಣ್ಣ,ಛಲವಾದಿ ಸಂಘದ ಉಪಾಧ್ಯಕ್ಷ ಡಿ.ತಿಪ್ಪೇಸ್ವಾಮಿ ಹಾಗೂ ಸಿಜೆಹಳ್ಳಿ ಮುಖಂಡರಾದ ಹೇಮೇಶಗೌಡ,ಜಂಟಿ ಹೇಳಿಕೆ ನೀಡಿದ್ದಾರೆ.ಮಾಕನಡಕು ಗ್ರಾಪಂನಲ್ಲಿ ಕೆಲ ಬ್ರಷ್ಠ ಅಧಿಕಾರಿಗಳು ಹಾಗೂ ಬ್ರಷ್ಠ ಜನಪ್ರತಿನಿಧಿಗಳು ಕಳೆದ ಐದುವಷ೯ದಲ್ಲಿ ಗ್ರಾಪಂ ಅಭಿವೃದ್ಧಿ ಹಣವನ್ನು ಲೂಟಿಮಾಡಿದ್ದಾರೆ.ಖೊಟ್ಟಿ ಬಿಲ್ಲುಗಳನ್ನು ಸೃಷ್ಠಿಸಿ ಗ್ರಾಪಂ ಅಭಿವೃದ್ಧಿ ಹಣದಿಂದ ತಮ್ಮ ಜೇಬುಗಳನ್ನು ತುಂಬಿಸಿಕೊಂಡಿದ್ದಾರೆ.ಜಾಬ್ ಕಾಡ್೯ಗಳಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ,80ವಷ೯ದ ವೃದ್ಧರಿಗೆ ವಿಕಲಚೇತನರಿಗೆ ಜಾಬ್ ಕಾಡ್೯ಗಳನ್ನು ಕೊಡಲಾಗಿದೆ.ಪ್ರತಿಬಾರಿಯೂ ಕಾಮಗಾರಿಗಳಲ್ಲಿ ಜೆಸಿಬಿ ಬಳಸಲಾಗಿದೆ.ಪಲಾನುಭವಿಗಳ ಖಾತೆಗೆ ಹಣ ಸಂದಾಯ ಆದಕೂಡಲೇ ಅವರಿಂದ ಶೇ 10ರಷ್ಟು ಕಮಿಶನ್ ನೀಡಿ ಹಣ ಹಿಂಪಡೆಯುತ್ತಿದ್ದಾರೆ. ಅದರಹಳೇಚೆಕ್ ಡ್ಯಾಂ ಹೆಸರಲ್ಲಿ ಭಾರೀ ಹಣ ಲೂಟಿ ಮಾಡೋ ಮೂಲಕ ಸಕಾ೯ರಕ್ಕೆ ವಂಚನೆ ಮಾಡಲಾಗಿದೆ. ಮೇಲಾಧಿಕಾರಿಗೆ ತಪ್ಪು ಮಾಹಿತಿ ಕೊಟ್ಟು ಹಳೇ ಮಲ್ಟಿ ಚೆಕ್ ಡ್ಯಾಂಗೆ ಹೊಸದಾಗಿ ವಕ್೯ಅಫೂ೯ಲ್ ಮಾಡಿಸಲಾಗಿದೆ.ಇದೇ ರೀತಿಯಲ್ಲಿ ಹಲವು ಕಾಮಗಾರಿಗಳ ಹೆಸರಲ್ಲಿ ಬ್ರಷ್ಠರು ಭಾರೀ ಮೊತ್ತದ ಹಣ ಲೂಟಿಮಾಡಿದ್ದಾರೆ,
ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಪ್ರಶಾಂತ್.ಗ್ರಾಪಂ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ.ಸದಸ್ಯರಾದ ಶ್ರೀಮತಿ ಪುಷ್ಪಾವತಿ ಗಂಡ ಎ.ನಾಗರಾಜ,ಎಮ್.ಟಿ.ತಿಪ್ಪೇಸ್ವಾಮಿ ರವರು ಭಾಗಿಯಾಗಿ ಇದರಲ್ಲಿ ಭಾರೀ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆಟದ ಮೈಧಾನ,ರಸ್ತೆ ಅಭಿವೃದ್ದಿ,ದನದ ಕೊಟ್ಟಿಗೆಗಳು, ಸ್ಮಶಾನದಲ್ಲಿ ಅಭಿವೃದ್ದಿ, ಶೌಚಾಲಯಗಳು,14 ನೇ ಹಣಕಾಸು,ಉದ್ಯೋಗ ಖಾತ್ರಿ, ಭೂ ಅಭಿವೃದ್ದಿ,ಇನ್ನು ಅನೇಕ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ನೆಡೆದಿದೆ ಎಂದು ಅವರು ಆರೋಪಿಸಿದ್ದಾರೆ
ಈ ಕುರಿತು ಸೂಕ್ತ ದಾಖಲು ಸಮೇತ ಅಧಿಕಾರಿಗಳಲ್ಲಿ ದೂರು ನೀಡಿ ತನಿಖೆಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
**ವೃದ್ಧರಿಗೆ, ವಿಕಲಚೇತನರಿಗೆ ಜಾಬ್ ಕಾಡ್೯-**
ರಾತ್ರೋ ರಾತ್ರಿ ಜೆಸಿಬಿ ಯಂತ್ರಗಳಿಂದ ಕಾಮಗಾರಿಗಳನ್ನು ನಡೆಸಿದ್ದಾರೆ.ತೋಪ೯ಡಿಕೆಗೆ ಮಾತ್ರ ಮರುದಿನ ಕಾಮಗಾರಿಯಲ್ಲಿ ಅಲ್ಪ ಸ್ವಲ್ಪ ಕೆಲಸವನ್ನು ನೆರೆ ಗ್ರಾಮದ ಕೂಲಿಗಾರರನ್ನು ಕರೆಸಿ ಕೆಲಸ ಮಾಡಿಸಲಾಗಿದೆ.ಬಹುತೇಕ ಸ್ಥಳೀಯ ಕೂಲಿಗಾರರಿಗೆ ಕೆಲಸ ಕೊಟ್ಟಿಲ್ಲ.ಇದು ಗ್ರಾಮದ ಕೂಲಿಗಾರರಿಗೆ ಮಾಡಿದ ಮಹಾಮೋಸವಾಗಿದೆ.ಕೂಲಿ ಕೆಲಸ ಮಾಡಲು ಅಶಕ್ತರಿಗೆ,ವೃದ್ಧರಿಗೆ, ವಿಕಲಾಂಗರಿಗೆ ಕಾಡ್೯ಗಳನ್ನು ಕೊಡಲಾಗಿದೆ,ಎನ್.ಎಮ್.ಆರ್.ನಲ್ಲಿ ಜಿಎಸ್ಟಿ ಬಿಲ್ ಕಟ್ಟುವವರಿಗೂ ಸಹ ಜಾಬ್ ಕಾಡ್೯ಕೊಡಲಾಗಿದೆ.ಎಮ್.ಟಿ.ತಿಪ್ಪೇಸ್ವಾಮಿ ತನ್ನ ಕುಟುಂಬ ಸದಸ್ಯರನ್ನ ಭೂ ಅಭಿವೃದ್ಧಿ ಪಲಾನುಭವಿಗಳನ್ನಾಗಿ ಮಾಧಿದ್ದಾರೆ.ಎಂದು ಉಪಾಧ್ಯಕ್ಷೆ ಶ್ರೀಮತಿ ಕಲ್ಪನಾ ಹೇಮೇಶಗೌಡ ಮತ್ತು ಗ್ರಾಪಂಸದಸ್ಯ ಹಾಗೂ ಹೋರಾಟಗಾರ ಕುರಿಹಟ್ಟಿ ಓಬಣ್ಣ.ಗ್ರಾಮದ ಮುಖಂಡರಾದ ಹೇಮೇಶಗೌಡ,ಛಲವಾದಿ ಉಪಾಧ್ಯಕ್ಷ ಡಿ.ತಿಪ್ಫೇಸ್ವಾಮಿ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.
*ದೂರು-ಅಮಾನತ್ತಿಗೆ ಆಗ್ರಹ-**
ಗ್ರಾಪಂ ಅಭಿವೃದ್ಧಿ ಹಣವನ್ನು ಕಾಮಗಾರಿ ಹೆಸರಲ್ಲಿ ಲೂಟಿ ನಡೆಸಿರುವ ಬ್ರಷ್ಠ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತ್ತಿನಲ್ಲಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಈ ಕುರಿತು ಲೋಕಾಯುಕ್ತರಿಗೆ,ಬ್ರಷ್ಠಾಚಾರ ನಿಗ್ರಹದಳದ ಅಧಿಕಾರಿಗಳಿಗೆ,ರಾಜ್ಯದ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ,ಇಲಾಖೆಯ ಸಚಿವರಿಗೆ,ಇಲಾಖೆಯ ನಿಧೇ೯ಶಕರಿಗೆ, ಜಿಲ್ಲಾಪಂಚಾಯ್ತಿ ಮುಖ್ಯಕಾಯ೯ನಿವ೯ಹಣಾಧಿಕಾರಿಗಳಿಗೆ,ಜಿಲ್ಲಾಧಿಕಾರಿಗಳಿಗೆ,ಸೂಕ್ತ ದಾಖಲುಗಳ ಸಮೇತ ಅಗತ್ಯ ಸಾಕ್ಷ್ಯಾಧಾರಗಳ ಸಮೇತ ದೂರು ನೀಡಲಾಗಿದೆ.ಸಂಬಂಧಿಸಿದ ಇಲಾಖಾಧಿಕಾರಿಗಳು ಶೀಘ್ರವಾಗಿ ತನಿಖೆಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮನವಿಗೆ ಸ್ಪಂಧಿಸದೇ ತನಿಖೆ ಮಾಡದೇ ನಿಲ೯ಕ್ಷಿಸಿದರೆ, ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
Be the first to comment