ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ- ಆಹಾರ ಸಾಮಾಗ್ರಿ ಹಾಗು ಅಗತ್ಯ ಅಮಾಗ್ರಿಗಳನ್ನು ಅಂಗಡಿಯವರು ಗ್ರಾಹಕರಿಗೆ,ನಿಗಧಿತ ದರಕ್ಕಿಂತ ಅತೀ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿವೆ.ಆರೋಪ ಸಾಬೀತಾದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು ಎಚ್ಚರಿಸಿದ್ದಾರೆ.ಅವರು ತಮ್ಮ ಕಚೇರಿಯಲ್ಲಿ ವತ೯ಕರ ಸಭೆ ಆಯೋಜಿಸಿ ಮಾತನಾಡಿದರು. ಕೊರೋನಾ ಲಾಕ್ ಡೌನ್ ಸಂದಭ೯ದಲ್ಲಿಯೇ ಅಗತ್ಯ ಸಾಮಾಗ್ರಿಗಳು ಹಾಗೂ ಆಹಾರ ಸಾಮಾಗ್ರಿಗಳ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ.ನಿಗಧಿತ ದರಕ್ಕಿಂತ ಹೆಚ್ಚು ದರದಲ್ಲಿ ಮಾರಾಟ ಮಾಡಲಾಗುತ್ತಿದೆ,ಎಂಬ ದೂರುಗಳು ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಗಳಿಂದ ಬಂದಿವೆ.ಅದು ಅಕ್ಷಮ್ಯ ಅಪರಾಧವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಸಾಮಾಗ್ರಿಗಳ ದರಪಟ್ಟಿ ಹಾಗು ಅಗತ್ಯ ವಿವಿರ ಗ್ರಾಹಕರಿಗೆ ತಿಳಿಯುವಂತೆ ನೇತು ಹಾಕಬೇಕು ಮತ್ತು ಸೂಕ್ತ ನಿಯಮಗಳನ್ನು ಪಾಲಿಸಬೇಕು. ಉಲ್ಲಂಘಿಸಿದರೆ ಅಥವಾ ದೂರು ಬಂದರೆ ನಿಧಾ೯ಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸಭೆಯಲ್ಲಿ ಎಚ್ಚರಿಸಿದ್ದಾರೆ.ಪಟ್ಟಣ ಹಾಗೂ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಕಿರಾಣಿ ವತ೯ಕರು ಹಾಗು ಅಗತ್ಯ ಸಾಮಾಗ್ರಿಗಳ ಮಾರಾಟಗಾರರು ಹಾಗೂ ಕಿರಾಣಿ ವತ೯ಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Be the first to comment