20 ಸಾವಿರ ಬಡವರಿಗೆ 1 ಕೋಟಿ ರೂ ಮೌಲ್ಯದ ಆಹಾರ ಸಾಮಗ್ರಿ ಕಿಟ್ ವಿತರಣೆ

ವತದಿ:- ಚೇತನ

ಜೀಲ್ಲಾ ಸುದ್ದಿಗಳು

ಮುದ್ದೇಬಿಹಾಳ -ನಗರ, ಪಟ್ಟಣ ಪ್ರದೇಶದಲ್ಲಿ ನಿತ್ಯದ ದುಡಿಮೆಯನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ಬಡಜನರು ಕೊರೊನಾ ಲಾಕಡೌನ್ ಪರಿಣಾಮ ಕೆಲಸ ಇಲ್ಲದೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಸರ್ಕಾರ ಇಂಥವರಿಗೆ ಅಕ್ಕಿ, ಗೋಧಿ ಉಚಿತವಾಗಿ ಕೊಟ್ಟು ಸ್ವಲ್ಪ ನೆರವಾಗಿದೆ. ಆದರೆ ಈ ಅಕ್ಕಿ, ಗೋಧಿ ಅಡುಗೆ ಮಾಡಿಕೊಂಡು ತಿನ್ನುವ ಪರಿಸ್ಥಿತಿಯಲ್ಲೂ ನಗರಪ್ರದೇಶದ ಬಡವರು ಇಲ್ಲ.
ಇಂಥ ಬಡಜನರ ನೆರವಿಗೆ ಧಾವಿಸಲು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಒಂದು ಕೋಟಿ ರೂ ಹಣವನ್ನು ಖರ್ಚು ಮಾಡಿ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳ 20,000 ಕಡುಬಡವರಿಗೆ ಅಕ್ಕಿ, ಗೋಧಿ ಹೊರತುಪಡಿಸಿ ಇತರೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಉಚಿತವಾಗಿ ವಿತರಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.
ನಡಹಳ್ಳಿ ಅವರು ಮುದ್ದೇಬಿಹಾಳ ಪಟ್ಟಣದಲ್ಲಿರುವ ತಮ್ಮ ಮನೆಗೆ ದಾಸೋಹ ನಿಲಯ ಎಂದೇ ಹೆಸರಿಟ್ಟಿದ್ದಾರೆ. ಇವರ ಮನೆಗೆ ಕಷ್ಟ ತೋಡಿಕೊಂಡು ಬರುವ ನಿಜವಾದ ಅರ್ಹರು ಯಾವತ್ತೂ ಬರಿಗೈಲಿ ಹೋಗಿಲ್ಲ. ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೂ ನೆರವು ನೀಡುತ್ತಾರೆ.
ಕೊರೊನಾ ಹಾವಳಿ ಪ್ರಾರಂಭಗೊಂಡು ಲಾಕಡೌನ್ ಜಾರಿಗೆ ಬಂದ ಮೇಲೆ ತಮ್ಮ ಸ್ವಂತ ಹಣದಲ್ಲಿ ತಾಲೂಕಿನ 1 ತಾಲೂಕು ಆಸ್ಪತ್ರೆ, 3 ಸಮುದಾಯ ಆರೋಗ್ಯ ಕೇಂದ್ರ, 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳು, ಅವರ ಜೊತೆ ಬರುವ ಅವರ ಬಂಧುಗಳಿಗೆ ಹೀಗೆ ದಿನಕ್ಕೆ ಅಂದಾಜು 4000 ಜನರಿಗೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಆಯಾ ಆಸ್ಪತ್ರೆಗಳಲ್ಲೇ ಊಟ ಒದಗಿಸಿದ್ದಾರೆ.
ಇದೀಗ ಅವರು ಒಂದು ಕೋಟಿ ರೂ ಖರ್ಚು ಮಾಡಿ ಬಡಜನರಿಗೆ ಕಿಟ್ ವಿತರಿಸುವ ಇನ್ನೊಂದು ಕಾರ್ಯಕ್ಕೆ ಮುಂದಾಗಿದ್ದಾರೆ.
ಗಂಡ, ಹೆಂಡತಿ, ಮಕ್ಕಳಿರುವ ಕುಟುಂಬವೊಂದಕ್ಕೆ ವಿತರಿಸಲಾಗುವ ಪ್ರತಿಯೊಂದು ಕಿಟ್ಟಿನಲ್ಲಿ ತಲಾ 1 ಕೆಜಿ ಸಕ್ಕರೆ, ಒಳ್ಳೆಣ್ಣೆ, ತೊಗರಿಬೇಳೆ, ರವಾ, 250ಗ್ರಾಂ ಚಹಾಪುಡಿ, ಖಾರ, 200ಗ್ರಾಂ ಸಾಸಿವೆ, 100ಗ್ರಾಂ ಜೀರಗಿ, ಅರಿಷಿಣಪುಡಿ, ಮಸಾಲೆ ಪದಾರ್ಥ, 2ಕೆಜಿ ಈರುಳ್ಳಿ ಮುಂತಾದವುಗಳು ಇರಲಿವೆ. ಈಗ ಚಾಲನೆಯಲ್ಲಿರುವ ಮನೆಮನೆಗೆ ಸರ್ಕಾರದ ಉಚಿತ ಹಾಲು ವಿತರಣೆ ಮಾದರಿಯಲ್ಲೇ ತಾಲೂಕುಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ತಮ್ಮ ಅಭಿಮಾನಿಬಳಗದ, ಬಿಜೆಪಿ ಕಾರ್ಯಕರ್ತರ ವಾರ್ಡವಾರು ತಂಡ ರಚಿಸಿ ಬಿಪಿಎಲ್, ಅಂತ್ಯೋದಯ ಕಾರ್ಡ ಹೊಂದಿರುವ ಜೊತೆಗೆ ಆಯಾ ವಾರ್ಡನಲ್ಲಿರುವ ನಿಜವಾದ ಕಡುಬಡವರಿಗೆ ವಿತರಿಸಲಾಗುತ್ತದೆ.
ತಮ್ಮ ದಾಸೋಹ ನಿಲಯದ ಆವರಣದಲ್ಲೇ ಭದ್ರತೆಯಲ್ಲಿ, ಸ್ವಚ್ಛತೆಯ ಮಾನದಂಡ ಪಾಲಿಸಿ ಮಹಿಳಾ ಕೆಲಸಗಾರರು, ನಡಹಳ್ಳಿ ಅಭಿಮಾನಿ ಬಳಗದ ಕಾರ್ಯಕರ್ತರು ಕಿಟ್ ಪ್ಯಾಕಿಂಗ್ ಕಾರ್ಯ ನಡೆಸುತ್ತಿದ್ದಾರೆ. ಏ.17ರ ಶುಕ್ರವಾರದಿಂದಲೇ ಈ ಕಿಟ್ಟುಗಳ ವಿತರಣೆ ಕಾರ್ಯ ನಡೆಯುತ್ತಿದೆ.

Be the first to comment

Leave a Reply

Your email address will not be published.


*