ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ-ಜೀವ ಇದ್ರೆ ತಾನೇ ಜೀವನ,ಅದಕ್ಕಾಗಿ ಸಕಾ೯ರ ವಿಧಿಸಿರುವ ಲಾಕ್ ಡೌನ್ ನ್ನು ಪಾಲಿಸೋಣ ಎಂದು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬುರವರು ಜನತೆಗೆ ಕರೆ ನೀಡಿದರು.ಅವರು ಚಿಕ್ಕಜೋಗಿಹಳ್ಳಿಯ ತಮ್ಮ ನಿವಾಸದಲ್ಲಿ ಭಾನುವಾರ ಮಾತನಾಡಿದರು.
ಕೊರೋನಾ ಹಾಗೂ ಲಾಕ್ ಡೌನ್ ಜೀವಿತಾವಧಿಯಲ್ಲಿಯೇ ಕಾಣದಂತಹ ಸಂಗತಿಗಳಾಗಿವೆ.ಇಂತಹ ವಿಪತ್ತಿನ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದೂರದೃಷ್ಟಿ ಹಾಗೂ ಮುಂಜಾಗೃತ ಕ್ರಮಗಳು ಸ್ವಾಗತಾರ್ಹ ಎಂದರು.ರಾಜ್ಯದಲ್ಲಿ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.ಅರೋಗ್ಯ ಇಲಾಖೆ ಕಂದಾಯ ಇಲಾಖೆ ಪೊಲೀಸ್ ಇಲಾಖೆಯವರು ಸೈನಿಕರಂತೆ ಕಾಯ೯ನಿವ೯ಹಿಸುತ್ತಿದ್ದಾರೆ.ಆರೋಗ್ಯ ಇಲಾಖೆ ಸೂಚಿಸಿರುವ ನಿಯಮಗಳನ್ನು,ಸಕಾ೯ರದ ಲಾಕ್ ಡೌನ್ ನ್ನು ಎಲ್ಲರೂ ಅನುಸರಿಸಬೇಕಿದೆ,ರಾಜ್ಯ ಹಾಗೂ ಕೇಂದ್ರ ಸಕಾ೯ರಗಳ ಕೊರೋನಾ ವಿರುದ್ಧದ ಹೋರಾಟಕ್ಕೆ,ನಾವೆಲ್ಲರೂ ಮನೆಯಲ್ಲಿರೋ ಮೂಲಕ ಸಾಥ್ ನೀಡೋಣ ಎಂದರು.ಮಾಕನಡಕು ಗ್ರಾ ಪಂ ಉಪಾಧ್ಯಕ್ಷರಾದ ಶ್ರೀಮತಿ ಕಲ್ಪನಾ ಹೇಮೇಶಗೌಡ,ಸದಸ್ಯರಾದ ಕುರಿಹಟ್ಟಿ ಓಬಣ್ಣ,ಸಿ.ಜೆ.ಹಳ್ಳಿ ಮುಖಂಡ ಹೇಮೇಶಗೌಡ,ವಿಷ್ಣು ಸೇನಾ ಸಮಿತಿ ಉಪಾಧ್ಯಕ್ಷ ಸಾಧಿಕ್ ಉಪಸ್ಥಿತರಿದ್ದರು.
Be the first to comment