ಕ್ರೈಮ್-ಪೋಕಸ್
ದಾವಣಗೆರೆ: ಲಾಕ್ ಡೌನ್ ಜಾರಿಯಲ್ಲಿದ್ದರೂ ಗುಂಪು ಕಟ್ಟಿಕೊಂಡು ಕುತಿದ್ದ ಕಿಡಿಗೇಡಿಗಳಲ್ಲಿ ಒಬ್ಬನನ್ನು ಪ್ರೊ. ಪಿಎಸ್ಐ ಬಸವರಾಜ ಬಿರಾದಾರ ಸಾಹಸಪಟ್ಟು ಹಿಡಿದಿದ್ದಾರೆ.
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಮಾಡಿದ್ದರೂ ಕೂಡ ಭಗತ್ ಸಿಂಗ್ ನಗರದ ಲೇಬರ್ ಕಾಲೋನಿಯಲ್ಲಿ ಕೆಲ ಯುವಕರ ಗುಂಪು ಕಟ್ಟಿ ಕುತಿತ್ತು. ಈ ಸಂದರ್ಭದಲ್ಲಿ ಪ್ರೊ. ಪಿಎಸ್ಐ ಬಸವರಾಜ ಬಿರಾದಾರ ಹಾಗೂ ಸಿಬ್ಬಂದಿ ಧಾವಿಸಿದರು. ಪೊಲೀಸರ ತಂಡ ಕಂಡಾಕ್ಷಣ ಕಿಡಿಗೆಡಿಗಳು ಓಡಲಾರಂಭಿಸಿದರು. ಆಗ ಅವರನ್ನು ಹಿಡಿಯಲು ಪ್ರೊ. ಪಿಎಸ್ಐ ಬಸವರಾಜ ಬಿರಾದಾರ ಹಾಗೂ ಸಿಬ್ಬಂದಿ ಬೆನ್ನಟ್ಟಿದಾಗ ಪ್ರೊ. ಪಿಎಸ್ಐ ಬಸವರಾಜ ಬಿರಾದಾರ ಅವರು ಎಡವಿ ಬಿದ್ದಿದ್ದಾರೆ. ಆದರೂ ಕೂಡಲೆ ಮೇಲೆದ್ದು ಕಿಡಿಗೇಡಿಗಳಲ್ಲಿ ಓರ್ವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿ ಕರ್ತವ್ಯ ನಿಷ್ಟೆಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳಿರುವದರಿಂದ ಲಾಕ್ ಡೌನ್ ಸರಿಯಾಗಿ ಪಾಲನೆಯಾಗುತ್ತಿದೆ ಎಂದು ಸಾರ್ವಜನಿಕರು ಪ್ರೊ. ಪಿಎಸ್ಐ ಬಸವರಾಜ ಬಿರಾದಾರ ಅವರಿಗೆ ಶ್ಲಾಘಿಸಿದ್ದಾರೆ.
Be the first to comment