ಜೀಲ್ಲಾ ಸುದ್ದಿಗಳು
ಹುಕ್ಕೇರಿ :-ಜಗತ್ತನ್ನು ತಲ್ಲಣಗೊಳಿಸಿರುವ ಮಾರಕ ಕೊರೋನಾ ಸಾಂಕ್ರಾಮಿಕ ರೋಗ ಭಯಾನಕ ವಾತಾವರಣ ಸೃಷ್ಟಿಸಿದೆ.
ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸರ್ಕಾರದ ಆದೇಶ ಪಾಲಿಸಿ ಲಾಕಡೌನ್ ಅವಧಿ ಮುಗಿಯುವ ವರೆಗೆ ಮನೆಯಲ್ಲಿದ್ದು ಜಾಗೃತಿ ಮೂಡಿಸುವ ಅಗತ್ಯವಿದೆ, ಎಂದು ಹುಕ್ಕೇರಿ ತಾಲೂಕಿನ ಸುಲ್ತಾನರಪೂರ ಗ್ರಾಮದ ಭುವನೇಶ್ವರಿ ಸಮೂಹ ಸಂಘದ ಪದಾಧಿಕಾರಿಗಳು ಅಭಿಪ್ರಾಯ ಪಟ್ಟರು.
ರವಿವಾರ ಗ್ರಾಮದಲ್ಲಿ ಹಮ್ಮಿಕೊಂಡ ಭುವನೇಶ್ವರಿ ಸಮೂಹ ಸಂಘದ ಅಂಗ ಸಂಸ್ಥೆಗಳ ಹಾಲು ಉತ್ಪಾದಕ ಸಂಘದಿಂದ ಕೊರೋನಾ ವೈರಸ್ ಹತೋಟಿಗೆ ತರುವ ಉದ್ದೇಶದಿಂದ ಗ್ರಾಹಕರಿಗೆ ಮಾಸ್ಕ ಕೊಡಮಾಡಿದರು.
ಗ್ರಾಮದ ಪ್ರತಿಯಬ್ಬರು ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಬರಬೇಕು ಕಡ್ಡಾಯವಾಗಿ ಮಾಸ್ಕ ಧರಿಸಲೆಬೇಕೆಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಭುವನೇಶ್ವರಿ ಸಮೂಹ ಸಂಸ್ಥಾಪಕ ಶ್ರೀಶೈಲ ಮಠಪತಿ ಹಾಲು ಉತ್ಪಾದಕ ಗ್ರಾಮದ ರೈತ ಗ್ರಾಹಕರಿಗೆ ಮಾಸ್ಕ ಕೊಟ್ಟು ಉದ್ದೇಶಿತ ಮಾತು ಹೇಳಿದರು.
ನಂತರ ಮಾತನಾಡಿದ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಾದೇವ ಜಿನ್ರಾಳೆ ಮಾತನಾಡಿ ಕೊರೋನಾ ಸಂಕಷ್ಟದಲ್ಲಿ ರಾಜ್ಯ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಈ ಸೋಂಕು ಆವರಿಸುತ್ತಿದೆ.
ನಮ್ಮ ಗ್ರಾಮಸ್ಥರು ಮನೆಯಲ್ಲಿ ಇದ್ದು ಉತ್ತಮವಾಗಿ ನಮ್ಮೊಟ್ಟಿಗೆ ಸ್ಪಂದಿಸುತ್ತಿದ್ದಾರೆ. ಕೆಲ ಗ್ರಾಮಸ್ಥರು ಅಲ್ಲಲ್ಲಿ ನಿಯಮ ಪಾಲಿಸುತ್ತಿಲ್ಲ ಇದನ್ನು ತಡೆಯುವಲ್ಲಿ ಗ್ರಾಮದ ಹಿರಿಯರು ಸಹಕರಿಸಬೇಕಾಗಿದೆ ಎಂದರು.
ಗ್ರಾಮದ ಗಲ್ಲಿಗಳಲ್ಲಿ ಔಷಧ ಸಿಂಪಡಣೆ ಧ್ವನಿ ವರ್ದಕ ಮೂಲಕ ಕೊರೋನಾ ಸೋಂಕಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಗ್ರಾಮದಲ್ಲಿರುವ ದೇವಸ್ಥಾನ ಮಸೀದಿ ಚರ್ಚ್ಗಳಿಗೆ ಭೀಗ ಹಾಕಲಾಗಿದೆ. ಭುವನೇಶ್ವರಿ ಹಾಲು ಉತ್ಪಾದಕ ಅದ್ಯಕ್ಷ ಆನಂದ ವಸ್ತ್ರದ, ಭುವನೇಶ್ವರಿ ಬ್ಯಾಂಕ್ ಅದ್ಯಕ್ಷ ಶಿವಾನಂದ ಜೇಡರ, ವ್ಯವಸ್ಥಾಪಕ ದುಂಡಯ್ಯ ಪೂಜೇರಿ,ಬಾಳೇಶ ಕುರಬೇಟ,ಬಸವರಾಜ ಯಮಕನಮರಡಿ,ರಾಮಗೌಡ ಪಾಟೀಲ, ಬಸವೇಶ್ವರ ಪ್ರಾಥಮಿಕ ಶಾಲೆ ಅದ್ಯಕ್ಷ ಕುಮಾರ ಹುಣಶ್ಯಾಳಿ,ವಿಶ್ವನಾಥ ವಸ್ತ್ರದ ಸೇರಿದಂತೆ ಭುವನೇಶ್ವರಿ ಸಮೂಹ ಸಂಘದ ಶಿಬ್ಬಂದಿ ಉಪಸ್ಥಿತರಿದ್ದರು.
Be the first to comment