ಬಳ್ಳಾರಿಯ ಹಲವೆಡೆಗಳಲ್ಲಿ ಆಲಿಕಲ್ಲು ಸಹಿತ ಭಾರೀಮಳೆ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಳ್ಳಾರಿ ಜಿಲ್ಲೆಡೆಗಳಲ್ಲಿನ ಕೆಲ ತಾಲೂಕಿನ ಹಲವೆಡೆಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಶನಿವಾರ ಸಂಜೆ ಸುರಿದಿದೆ.ಕೆಲವೆಡೆ ತಾಸುಗಳ ಕಾಲ ಎಡೆಬಿಡದೇ ಮಳೆಸುರಿದಿದೆ.ಆಲಿಕಲ್ಲುಗಳು ಬೀಳುವುದನ್ನು ಕಂಡ ಯುವಕರು ತಮ್ಮ ಕೈಯೊಡ್ಡಿ ಹಿಡಿಯೋ ಪ್ರಯತ್ನಗಳನ್ನು ಮಾಡಿದರೆ.ಕೆಲ ಅನುಭವಿಗಳು ಹಾಗೂ ಯುವತಿಯರು ವಿವಿದ ಸಲಕರಣೆಗಳನ್ನು ಉಪಯೋಗಿಸದರು. ಬಿರುಸಾಗಿಬೀಳುತ್ತಿದ್ದ ಮಳೆಯನ್ನು ಲೆಕ್ಕಿಸದೆ ಆಲಿಕಲ್ಲುಗಳನ್ನು ಹಿಡಿದು ಸಂಭ್ರಮಿಸಿದರು.

ಆಲಿಕಲ್ಲು ಸೇವಿಸುವುದೆಂದರೆ ಯುವಕರಿಗೆ ಎಲ್ಲಿಲ್ಲದ ಉತ್ಸಾಹ ಹುರುಪು,ಸೇವಿಸಿದರೆ ಶೀಥವಾಗುತ್ತದೆ,ಅದನ್ನು ಹಿರಿಯರು ತಿಳಿಹೇಳಿದರೆ ಮಕ್ಕಳು ಗಂಭೀರವಾಗಿ ಪರಿಗಣಿಸುವುದು ವಿರಳ.ಅದಕ್ಕಾಗಿ ಅಂತವಕಂಥೆಯ ಕಥೆಯೊಂದನ್ನ ಹೇಳಿ ಆಲಿಕಲ್ಲನ್ನು ಮಕ್ಕಳು ಸೇವಿಸದಂತೆ ಜತನ ಮಾಡುತ್ತಾರೆ ಹಿರಿಯರು.ಕೆಲವೆಡೆ ಆಲಿಕಲ್ಲು ತಿಂದರೆ ಬಾಯಾಗಿರ ಹಲ್ಲೆಲ್ಲಾ ಉದುರಿ ಬೊಚ್ಚು ಬಾಯಿ ಆಕತಂತೆ..ಇತ್ಯಾದಿ ಯಾಗಿ ಹೇಳಲಾಗುತ್ತೆ.ಮಕ್ಕಳು ಆಲೀಕಲ್ಲು ಬಾಯಿಗಿಟ್ಟುಕೊಳ್ಳದಂತೆ ಹಿರಿಯರು ಪೋಷಕರು ಸಪ೯ಗಾವಲು ನಿಮಿ೯ಸಿರುತ್ತಾರೆ.

ದೊಡ್ಡವರೆನಿಸಿಕೊಂಡ ಯುವಕರು ಮೋಡಸದಿಂದ ಬೀಳುವ ಅಥವಾ ಬಿದ್ದ ಆಲಿಕಲ್ಲುಗಳನ್ನು ಬಾಯಲ್ಲಾಕಿಕೊಂಡು ಹಿರಿಹಿರಿ ಹಿಗ್ಗುತ್ತಾರೆ.ಯಾರು ಹೆಚ್ಚು ತಿಂದರೆನ್ನುವುದರ ಮೇಲೆ ಅವರ ತಾಕತ್ತು ಬುದ್ದಿವಂತಿಕೆ ಪ್ರದಶ೯ನವಾಗುತ್ತೆ.ಇನ್ನು ಶೇಂಗಾ ಇತ್ಯಾದಿ ಫಲಗಳನ್ನು ದಾಸ್ಥಾನು ಮಾಡದೇ ಸಂಗ್ರಹಿಸಿದ್ದಲ್ಲಿ ಅವರ ಪಾಡೋ ಆದೇವರೇ ಬಲ್ಲ.ಒಟ್ಟಾರೆಯಾಗಿ ಮಳೆ ಆಲಿಕ್ಕಲ್ಲುಗಳ ಸಮೇತ ಧರೆಗೆಬಂದು ತಂಪು ತಂದಿದೆ.ಪಶುಪಕ್ಷಿ ಗಿಡ ಮರಗಳಲ್ಲಿ ಮುಗುಳ್ಮಗೆ ಮೂಡಿಸಿದೆ.ಬಳ್ಳಾರಿ ಜಿಲ್ಲೆಯ ಹಗರಿ ಗಜಾಪುರ ಮಲ್ಲಾಪುರ ಸೇರಿದಂತೆ ಕೆಲ ಭಾಗದಲ್ಲಿ ಆಲಿಕಲ್ಲುಗಳ ಸಮೇತ ಮಳೆಬಂದಿದೆ.

Be the first to comment

Leave a Reply

Your email address will not be published.


*