ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಪಟ್ಟಣದ ಪ್ರವಾಸಿಮಂದಿರದಲ್ಲಿ ಎ16ರಂದು ಪೌರಕಾಮಿ೯ಕರ ಸಭೆ ಜರುಗಿತು.ಸಭೆಯಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಪಾಕಿ ಮಾತನಾಡಿ ನಿಷ್ಠಾವಂತ ಕಾಮಿ೯ಕರೊಂದಿಗೆ ನ್ಯಾಯಾಲಯ ಯಾವತ್ತಿಗೂ ಸಹಕಾರ ನೀಡುತ್ತದೆ ಎಂದರು.
ಕೊರೋನಾ ದಂತಹ ಮಹಾಮಾರಿಯ ಸಂದಭ೯ದಲ್ಲಿಯೂ ಪೌರಕಾಮಿ೯ಕರು ಪಟ್ಟಣ ಸ್ವಚ್ಛಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.ನೌಕರರು ಹಾಗೂ ಕಾಮಿ೯ಕರು ಕಥ೯ವ್ಯದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು,ಪೊಲೀಸ್ ಇಲಾಖೆ ಅವರೆಲ್ಲರಿಗೂ ಸಹಕಾರ ನೀಡಬೇಕು ಎಂದರು. ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು ಮಾತನಾಡಿ ಜಿಲ್ಲಾಧಿಕಾರಿಗಳವರ ಸ್ಪಂಧನೆ ಶ್ಲಾಘನೀಯ ಎಂದರು.ಕೊರೋನಾ ನಿಯಂತ್ರಣ ಹಾಗೂ ಸಾವ೯ಜನಿಕರ ಕುಂದು ಕೊರತೆಗಳ ನಿವಾರಣೆ,ಕಾಮಿ೯ಕರು ಹಾಗೂ ನೌಕರರು ಸಂಕಷ್ಟ ಎದುರಿಸುವ ಸಂದಭ೯ಗಳಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಸ್ಪಂಧಿಸುತ್ತಿದ್ದಾರೆ.ಈ ಮೂಲಕ ಅವರು ಆತ್ಮಸ್ಥೈಯ೯ ತುಂಬುತ್ತಿದ್ದಾರೆ,ಅವರಿಗೆ ಎಲ್ಲರ ಪರವಾಗಿ ಕೃತಜ್ಞತೆಗಳನ್ನು ಅಪಿ೯ಸುವೆ ಎಂದರು.ಪಪಂ ಅಧಿಕಾರಿಗಳು ಸಿಬ್ಬಂದಿ ಹಾಗೂ ಪೌರಕಾಮಿ೯ಕರು ಪಟ್ಟಣದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ,ಆಡಳಿತಾಧಿಕಾರಿಯಾಗಿ ತಾವೂ ಕೂಡ ಸಾಥ್ ನೀಡುವುದಾಗಿ ಅವರು ತಿಳಿಸಿದರು.
ಡಿವೈಎಸ್ಪಿ ಶಿವಕುಮಾರ,ಯೋಜನಾ ನಿಧೇ೯ಕರಾದ ರಮೇಶ,ಪಪಂ ಮುಖ್ಯಾಧಿಕಾರಿ ಪಕೃದ್ಧೀನ್,ಮಾಜಿ ಸೈನಿಕ ರಮೇಶ್.ಪೌರನೌಕರರ ಮುಖಂಡ ಪ್ರಭು ಮಾತನಾಡಿದರು.ಸಿಪಿಐ ಪಂಪನಗೌಡಇದ್ದರು.ಬುಧವಾರದಂದು ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ಘಟನೆ ಹಿನ್ನಲೆಯಲ್ಲಿ,ಅವರಲ್ಲಿ ಆತ್ಮ ಸ್ಥೈಯ್ಯ೯ತುಂಬುವುದಕ್ಕಾಗಿ ಸಭೆ ನಡೆಸಲಾಯಿತು.ಸಭೆಯಲ್ಲಿ ಸಕಾ೯ರಿ ನೌಕರರ ಸಂಘದ ಪದಾಧಿಕಾರಿಗಳು,ಪಪಂ ಸಿಬ್ಬಂದಿ ಹಾಗೂ ಪೌರನೌಕರರು ಭಾಗವಹಿದ್ದರು.
Be the first to comment