ಜೀಲ್ಲಾ ಸುದ್ದಿಗಳು
ಸಂಕೇಶ್ವರ : ಕೊವಿಡ್ ಕೊರೋನ ಸೊಂಕು ತನ್ನ ಅಟ್ಟಹಾಸ ಮುಂದುವರೆಸಿದ್ದು ,ಇಂದು ಒಂದೆ ದಿನ ಜಿಲ್ಲೆಯಲ್ಲಿ 17 ವ್ಯಕ್ತಿಗಳಿಗೆ ಸೊಂಕು ಪತ್ತೆಯಾಗಿದ್ದು ,ಅದರಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ಕೊರೋನ ಕರಿ ನೆರಳು ಹೆಜ್ಜೆ ಇಟ್ಟಿದರ ಪರಿಣಾಮ ಪಟ್ಟಣವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷನೆ ಮಾಡಲಾದ ಹಿನ್ನಲೆ ಸಂಕೇಶ್ವರ ಪಟ್ಟಣಕ್ಕೆ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಸಿಲ್ ಡೌನಗೆ ಸೂಚನೆ ನೀಡಿದ್ದಾರೆ .
ಗಡಿ ಭಾಗವಾಗಿರು ಸಂಕೇಶ್ವರ ಪಟ್ಟಣದ ವ್ಯಕ್ತಿಗೆ ಕರೊನ ಸೊಂಕು ಇರುವುದು ಇಂದು ಅಧಿಕೃತವಾಗಿ ಘೋಷಿಸಲಾಯಿತು .ಇದರಿಂದ ಪಟ್ಟಣದ ಜನರಲ್ಲಿ ಆತಂಕ ಮೂಡಿದೆ. ದೆಹಲಿ ಪ್ರವಾಸ ಹೊಂದಿದ ಶಂಕಿತ ವ್ಯಕ್ತಿಯನ್ನು ಕಳೆದ ತಿಂಗಳು ಚಿಕಿತ್ಸೆಗೆ ದಾಖಲಾಗಿಸಲಾಗಿತ್ತು . ಇಂದು ಸೊಂಕು ಇರುವುದು ಅಧಿಕೃತವಾಗಿ ದೃಡ ಪಟ್ಟಿದ್ದೆ .
ಪಟ್ಟಣದ ವ್ಯಕ್ತಿವೆ ಸೊಂಕು ದೃಡ ಪಟ್ಟ ಹಿನ್ನಲೆ ಎಸ್ ಪಿ ಲಕ್ಷ್ಮಣ ನಿಂಬರಗಿ ಸಂಕೇಶ್ವರಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದು ಸಿಲ್ ಡೌನ ಸಿದ್ದತೆ ನಡೆಸಿದ್ದಾರೆ .
ಕಂಟೈನ್ಮೆಂಟ್ ಝೋನ್ ಎಂದು ಪಟ್ಟಣವನ್ನು ಘೋಷಣೆ ಮಾಡಲಾಗಿದ್ದು ಪಟ್ಟಣದ 3 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ, ಜನರು ಕಾಲ್ನಡಿಗೆ, ಇನ್ಯಾವುದೋ ವಾಹನಗಳ ಮೂಲಕ ಒಳ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ.
Be the first to comment